ಗಂಗಾವತಿ: ಆನೆಗುಂದಿಯ ನವಬೃಂದಾವನದಲ್ಲಿ ನವೆಂಬರ್-೧೮ ರಂದು ಶ್ರೀ ಪದ್ಮನಾಭತೀರ್ಥರ ಆರಾಧನಾ ಮಹೋತ್ಸವದ ಸಮಾರಂಭದಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸುಬುಧೇಂದ್ರತೀರ್ಥರು ಹಾಗೂ ಆರ್ಯ ಅಕ್ಷೋಭ್ಯತೀರ್ಥ ಸಂಸ್ಥಾನ ಬಾಳಗಾರು ಮಠದ ಪೀಠಾಧಿಪತಿಗಳಾದ ಶ್ರೀಅಕ್ಷೋಭ್ಯ ರಾಮಪ್ರಿಯ ತೀರ್ಥರು ಮತ್ತು ಮುಳಬಾಗಿಲು ಶ್ರೀಪಾದರಾಜಮಠದ ಪೀಠಾಧಿಪತಿಗಳಾದ ಶ್ರೀ ಸುಜಯನಿಧಿತೀರ್ಥರು ಅಮೃತ ಹಸ್ತದಿಂದ ಡಿಸೆಂಬರ್‌ನಲ್ಲಿ ಕಿಷ್ಕಿಂದೆಯಿಂದ ಮಂತ್ರಾಲಯದವರೆಗೆ ನಡೆಯುವ ೩ನೇ ಹಂತದ ನಿರ್ಮಲ ತುಂಗಭದ್ರ ಅಭಿಯಾನದ ಜಲ ಜಾಗೃತಿ ಮತ್ತು ಜನ ಜಾಗೃತಿ ಪಾದಯಾತ್ರೆಯ ಕರಪತ್ರ, ಪೋಸ್ಟರ್ ಮತ್ತು ಬಟ್ಟೆ ಬ್ಯಾನರ್‌ಗಳನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಮಂತ್ರಾಲಯ ಶ್ರೀಗಳು “ನಿರ್ಮಲ ತುಂಗಭದ್ರಾ ಅಭಿಯಾನ ಅತ್ಯಂತ ಉಪಯುಕ್ತ ಮತ್ತು ಮಹತ್ತರ ಕಾರ್ಯ. ಜಲಜಾಗೃತಿಯ ಈ ಪಾದಯಾತ್ರೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಎಲ್ಲರೂ ಪಾದಯಾತ್ರೆಯಲ್ಲಿ ಪಾಲ್ಗೊಂಡು ನದಿಗಳ ಉಳಿವಿಗೆ ಶ್ರಮಿಸಬೇಕು” ಎಂದರು.
ಮೂರು ಜನ ಪೀಠಾಧಿಪತಿಗಳಿಂದ ಪುಣ್ಯಕ್ಷೇತ್ರ ನವ ಬೃಂದಾವನದಲ್ಲಿ ಪಾದಯಾತ್ರೆಯ ಕರಪತ್ರ, ಪೋಸ್ಟರ್‌ಗಳನ್ನು ಬಿಡುಗಡೆಯಾಗಿದ್ದಕ್ಕೆ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಬಸವರಾಜ ಪಾಟೀಲ್ ವೀರಾಪೂರ್, ಪ್ರಮುಖರಾದ ಮಾಧವನ್ ಬೆಂಗಳೂರು, ಬಾಲಕೃಷ್ಣ ನಾಯ್ಡು, ಲೋಕೇಶ್ವರಪ್ಪ ಶಿವಮೊಗ್ಗ, ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು, ಸಂತೋಷ ಕೆಲೋಜಿ, ಗುಂಡೂರು ಪವನಕುಮಾರ್ ಹಾಗೂ ಸಂಚಾಲಕರಾದ ಡಾ|| ಶಿವಕುಮಾರ್ ಮಾಲಿಪಾಟೀಲ, ವಿಷು ತೀರ್ಥ ಜೋಶಿ, ನಾಗರಾಜ ಎಸ್. ಗುತ್ತೇದಾರ ವಕೀಲರು, ಮಂಜುನಾಥ, ಜಗನ್ನಾಥ್ ಅಲ್ಲಂಪಲ್ಲಿ, ಸರ್ವೇಶ ವಸ್ತ್ರದ್ ಶಿರಿಗೇರಿ, ಮಂಜುನಾಥ ಕಟ್ಟಿಮನಿ, ಅರ್ಜನ್ ಆರ್, ರಾಘವೇಂದ್ರ ತೂನಾ, ಅಲೆಮಾರಿ ಕೃಷ್ಣ ಇತರರು ಸಂತಸ ವ್ಯಕ್ತಪಡಿಸಿದ್ದಾರೆ. https://aratt.ai/@vishwaroopa_news_blog
