ಸೃಜನಾತ್ಮಕ ಸಿನಿಮಾಗಳ ಮುಲಕ ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮಟ್ಟಕ್ಕೆ ಪುಟ್ಟಣ್ಣ ಕಣಗಲ್ ಒಯ್ದಿದ್ದರು: ಕೆ.ನಿಂಗಜ್ಜ

ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಪುಟ್ಟಣ್ಣ ಕಣಗಲ್ ಜನ್ಮದಿನಾಚರಣೆ


ಗಂಗಾವತಿ: ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ದೊರೆಯಲು ಮೇರು ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರು ಸಹ ಕಾರಣರಾಗಿದ್ದಾರೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಹಿರಿಯ ಪತ್ರಕರ್ತ ಕೆ ನಿಂಗಜ್ಜ ಹೇಳಿದರು.

ಅವರು ಗಂಗಾವತಿಯ ಹೊಸಳ್ಳಿ ರಸ್ತೆಯಲ್ಲಿರುವ ಪರಶುರಾಮ ದೇವರ ಮನೆ ಕರೋಕೆ ಸ್ಟುಡಿಯೋದಲ್ಲಿ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮ ದಿನಾಚರಣೆಯ ನಿಮಿತ್ಯ ಕೇಕ್ ಕತ್ತರಿಸಿ ಮಾತನಾಡಿದರು.‌ ಅವರು ನಿರ್ದೇಶಿಸಿದ ಕೆಲವೇ ಕೆಲವು ಚಿತ್ರಗಳು ಕನ್ನಡ ನಾಡಿನ ನೆಲದ ಸತ್ವವನ್ನು ರಂಗಭೂಮಿಯ ಮಹತ್ವವನ್ನು ಸೃಜನಶೀಲತೆಯನ್ನು ಎತ್ತಿ ಹಿಡಿದಿವೆ. ಪುಟ್ಟಣ್ಣ ಕಣಗಲ್ ಅವರು ಅದ್ಭುತವಾದಂತಹ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದರು. ಆದ್ದರಿಂದ ಕನ್ನಡ ಭಾಷೆ ಸಾಹಿತ್ಯ ಮತ್ತು ಚಿತ್ರರಂಗ ಪುಟ್ಟಣ್ಣ ಕಣಗಾಲವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.

ಸಿನಿಮಾ ಸಂಗೀತದ ಹಿರಿಯ ವಾದ್ಯಗಾರ ಜೆಎಂ ಜಗನ್ನಾಥ ಮಾತನಾಡಿ ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರರಂಗದ ಮೂಲಕ ನಿರ್ದೇಶಕರ ಪಾತ್ರ ಏನು ಎಂಬುದನ್ನು ತೋರಿಸಿದರು. ಬೆಂಗಳೂರು ಅಲ್ಲದೆ ಇತರ ಕಡೆಯಲ್ಲಿ ಚಿತ್ರ ಗಳನ್ನು ಚಿತ್ರಿಕರಿಸುವ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಎಲ್ಲಾ ಜನರಿಗೂ ತೋರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪರಶುರಾಮ ದೇವರಮನೆ, ವಿಜಯಕುಮಾರ, ಹನುಮಂತಪ್ಪ ಹುಲಿಹೈದರ್, ತಿಪ್ಪೇಸ್ವಾಮಿ ಹೊಸಮಠ, ವಿರೇಶ ಸ್ವಾಮಿ, ವೆಂಕಟೇಶ ಧೂಳು, ವಿರೇಶ ಪಪ್ಪಿ, ಸತ್ಯನಾರಾಯಣ, ಎಸ್.ಎಂ.ಪಟೇಲ್, ಯಲ್ಲಪ್ಪ ಪೋಲ್ಕಲ್, ಛತ್ರಪ್ಪ ತಂಬೂರಿ, ಲಲಿತಮ್ಮ, ವಿಜಯಲಕ್ಷ್ಮಿ, ಅಂಬಿಕಾ, ಮಾರುತಿ, ಹಾಜಿ. ಕೃಷ್ಣ ಕಬ್ಬೇರ್, ಗಿರಿಜಮ್ಮ, ಕುರುಗೋಡು ವೆಂಕಟೇಶ, ಮಂಜುನಾಥ ಗೋಡಿನಾಳ, ದುರುಗೇಶ ಸಾಣಾಪೂರ ಸೇರಿ ಅನೇಕರಿದ್ದರು.

ಗಂಗಾವತಿ: ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಶ್ರೀನಿವಾಸ್ ಕುಲಕರ್ಣಿ ಗಂಗಾವತಿ ಅವರ ಸ್ಮರಣರಾರ್ಥ ಹಾಗೂ ಅಭಿನವ ಕಲಾಬಳಗ ಹುಬ್ಬಳ್ಳಿ ದಶಮಾನೋತ್ಸವ ಪ್ರಯುಕ್ತ. ರಕ್ತದಾನ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ.

ಹುಬ್ಬಳ್ಳಿ: ಗಂಗಾವತಿಯ ಸಂಗೀತ ಕಲಾವಿದ ಶ್ರೀನಿವಾಸ್ ರಾವ್ ಕುಲಕರ್ಣಿ ಅವರ ಸ್ಮರಣರಾರ್ಥ ಹಾಗೂ ಹುಬ್ಬಳ್ಳಿಯ ಅಭಿನವ ದಶಮಾನೋತ್ಸವ ಪ್ರಯುಕ್ತ ಡಿಸೆಂಬರ್ ೧ ರವಿವಾರದಂದು ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು.
ಬೆಳಗ್ಗೆ 9:30ಕ್ಕೆ ರಾಷ್ಟ್ರೋತ್ಥಾನ ರಕ್ತ ನಿಧಿ ಹುಬ್ಬಳ್ಳಿ ಇವರಿಂದ ರಕ್ತದಾನ ಶಿಬಿರ ಹಾಗೂ ಜಗಪ್ರಿಯ ಕಣ್ಣಿನ ಆಸ್ಪತ್ರೆ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದ್ದು. ಸುಮಾರು ೩೦ಕ್ಕೂ ಅಧಿಕ ವ್ಯಕ್ತಿಗಳು ತಮ್ಮ ರಕ್ತದಾನವನ್ನು ನೀಡಿದರು. ಹಾಗೆಯೇ ನೇತ್ರ ಚಿಕಿತಾ ಶಿಬಿರಕ್ಕೆ ಸುಮಾರು ೧೫೦ಕ್ಕೂ ಅಧಿಕ ಮಹಾಜನತೆ ಪಾಲ್ಗೊಂಡು ತಮ್ಮ ನೇತ್ರವನ್ನು ಪರೀಕ್ಷೆಗೆ ಒಳಪಟ್ಟರು. ಅಗತ್ಯ ಇದ್ದವರಿಗೆ ಶಸ್ತ್ರ ಚಿಕಿತ್ಸೆಯ ದಿನಾಂಕವನ್ನು ಸಹ ನೀಡಲಾಯಿತು. ಶ್ರೇಯ ಜನಸೇವಾ ಫೌಂಡೇಶನ್ ಸಹಕಾರದೊಂದಿಗೆ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ವೇಷ ಭೂಷಣ ಸ್ಪರ್ಧೆ, ಕರೋಕೆ ಚಿತ್ರಗೀತೆಗಳ ಸ್ಪರ್ಧೆಯನ್ನು ನಡೆಸುವುದರ ಮೂಲಕ ಸಮಾರಂಭದ ಉದ್ಘಾಟನೆಯನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜು ಅಂಗಡಿ ಉದ್ಘಾಟಿಸಿ ಮಾತನಾಡಿ, ಶ್ರೀಮತಿ ರಾಧಿಕಾ ಕುಲಕರ್ಣಿ ಅವರು ತಮ್ಮ ತಂದೆಯ ಸ್ಮರಣಾರ್ಥಕವಾಗಿ ಹುಬ್ಬಳ್ಳಿಯ ಮಹಾಜನತೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ತಮ್ಮದೇ ಆದ ಅಭಿನವ ಕಲಾ ಸಂಘದ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಅವರಲ್ಲಿನ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಗಣ್ಯರು ಉಪಸ್ಥಿತರಿದ್ದರು. ಸಮಾರಂಭ ಕುರಿತು ಸಂಯೋಜಿಕೆ ರಾಧಿಕಾ ಕುಲಕರ್ಣಿ ಮಾತನಾಡಿದರು.