ಹುಬ್ಬಳ್ಳಿ: ಗಂಗಾವತಿಯ ಸಂಗೀತ ಕಲಾವಿದ ಶ್ರೀನಿವಾಸ್ ರಾವ್ ಕುಲಕರ್ಣಿ ಅವರ ಸ್ಮರಣರಾರ್ಥ ಹಾಗೂ ಹುಬ್ಬಳ್ಳಿಯ ಅಭಿನವ ದಶಮಾನೋತ್ಸವ ಪ್ರಯುಕ್ತ ಡಿಸೆಂಬರ್ ೧ ರವಿವಾರದಂದು ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು.
ಬೆಳಗ್ಗೆ 9:30ಕ್ಕೆ ರಾಷ್ಟ್ರೋತ್ಥಾನ ರಕ್ತ ನಿಧಿ ಹುಬ್ಬಳ್ಳಿ ಇವರಿಂದ ರಕ್ತದಾನ ಶಿಬಿರ ಹಾಗೂ ಜಗಪ್ರಿಯ ಕಣ್ಣಿನ ಆಸ್ಪತ್ರೆ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದ್ದು. ಸುಮಾರು ೩೦ಕ್ಕೂ ಅಧಿಕ ವ್ಯಕ್ತಿಗಳು ತಮ್ಮ ರಕ್ತದಾನವನ್ನು ನೀಡಿದರು. ಹಾಗೆಯೇ ನೇತ್ರ ಚಿಕಿತಾ ಶಿಬಿರಕ್ಕೆ ಸುಮಾರು ೧೫೦ಕ್ಕೂ ಅಧಿಕ ಮಹಾಜನತೆ ಪಾಲ್ಗೊಂಡು ತಮ್ಮ ನೇತ್ರವನ್ನು ಪರೀಕ್ಷೆಗೆ ಒಳಪಟ್ಟರು. ಅಗತ್ಯ ಇದ್ದವರಿಗೆ ಶಸ್ತ್ರ ಚಿಕಿತ್ಸೆಯ ದಿನಾಂಕವನ್ನು ಸಹ ನೀಡಲಾಯಿತು. ಶ್ರೇಯ ಜನಸೇವಾ ಫೌಂಡೇಶನ್ ಸಹಕಾರದೊಂದಿಗೆ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ವೇಷ ಭೂಷಣ ಸ್ಪರ್ಧೆ, ಕರೋಕೆ ಚಿತ್ರಗೀತೆಗಳ ಸ್ಪರ್ಧೆಯನ್ನು ನಡೆಸುವುದರ ಮೂಲಕ ಸಮಾರಂಭದ ಉದ್ಘಾಟನೆಯನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜು ಅಂಗಡಿ ಉದ್ಘಾಟಿಸಿ ಮಾತನಾಡಿ, ಶ್ರೀಮತಿ ರಾಧಿಕಾ ಕುಲಕರ್ಣಿ ಅವರು ತಮ್ಮ ತಂದೆಯ ಸ್ಮರಣಾರ್ಥಕವಾಗಿ ಹುಬ್ಬಳ್ಳಿಯ ಮಹಾಜನತೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ತಮ್ಮದೇ ಆದ ಅಭಿನವ ಕಲಾ ಸಂಘದ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಅವರಲ್ಲಿನ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಗಣ್ಯರು ಉಪಸ್ಥಿತರಿದ್ದರು. ಸಮಾರಂಭ ಕುರಿತು ಸಂಯೋಜಿಕೆ ರಾಧಿಕಾ ಕುಲಕರ್ಣಿ ಮಾತನಾಡಿದರು.