ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆ

ಗಂಗಾವತಿ: ಇಂದು ಲಯನ್ಸ್ ಕ್ಲಬ್‌ನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಂಘ-ಸಂಸ್ಥೆಗಳೊಂದಿಗೆ ನಡೆದ ಸಂವಾದ ಅತ್ಯಂತ ಯಶಸ್ವಿಯಾಯಿತು. ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಮುಖರಾದ ಮಾಧವನ್ ಸಿ.ಪಿ ಹಾಗೂ ರಾಘವ್ ಗೋ-ಸಿರಿ ಅವರು ತುಂಗಭದ್ರಾ ಅಭಿಯಾನದ ಪಾದಯಾತ್ರೆ ಬಗ್ಗೆ ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯರು, ಪರಿಸರವಾದಿಗಳಾದ ಡಾ|| ಎ. ಸೋಮರಾಜು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ|| ಜಿ. ಚಂದ್ರಪ್ಪ ಅವರು ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿದರು.
ಗಂಗಾವತಿಯ ಪ್ರಮುಖ ಸಂಸ್ಥೆಗಳಾದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಸುಬ್ರಹ್ಮಣ್ಯೇಶ್ವರರಾವ್, ರೋಟರಿ ಕ್ಲಬ್ ಅಧ್ಯಕ್ಷರಾದ ಟಿ. ಆಂಜನೇಯ, ಸ್ನೇಹಬಳಗದ ಅಧ್ಯಕ್ಷರಾದ ಶ್ಯಾಮಮೂರ್ತಿ ಐಲಿ, ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ನೂಲ್ವಿ, ದಲಿತ ಸಾಹಿತ್ಯ ಪರಿಷತ್ತಿನ ಛತ್ರಪ್ಪ ತಂಬೂರಿ, ಶರಣ ಸಾಹಿತ್ಯ ಪರಿಷತ್ತಿನ ಜೆ. ನಾಗರಾಜ, ಜೈನ ಸಮಾಜದ ಉಗಮರಾಜ ಬಂಬ್, ಆಯುಷ್ ಅಧ್ಯಕ್ಷರಾದ ಡಾ|| ಬಸವರಾಜ, ಕಾರ್ಯದರ್ಶಿ ಡಾ|| ಸುನೀಲ್ ಅರಳಿ, ಬಸವಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ, ಸೌಹಾರ್ಧ ಸಹಕಾರಿ ಒಕ್ಕೂಟದ ಸುಧಾಕರ, ಸತೀಶ್, ಕ್ಲೀನ್ ಗ್ರೀನ್ ಶ್ರೀರಾಮನಗರದ ಎಂ.ಡಿ ರಫಿ, ಮೌಲಾಸಾಬ್, ನೌಕರ ಸಂಘದ ಅಧ್ಯಕ್ಷರಾದ ಶಿವಶಂಕರ ಹಾಗೂ ನಿವೃತ್ತ ನೌಕರರ ಸಂಘದ ಶರಭಣ್ಣ, ಅಲೆಮಾರಿ ಸಮುದಾಯದ ಅಧ್ಯಕ್ಷ ಆರ್. ಕೃಷ್ಣ, ಭಾರತೀಯ ಪ್ರಜಾಸೇನೆಯ ಬಸವರಾಜ ಮ್ಯಾಗಳಮನಿ, ಭಾರತೀಯ ವಿಕಾಸ ಪರಿಷತ್ ಅಧ್ಯಕ್ಷರಾದ ಜಂಬಣ್ಣ ಐಲಿ, ಸೇಂಟ್ ಫಾಲ್ಸ್ ಶಿಕ್ಷಣ ಸಂಸ್ಥೆಯ ಸರ್ವೇಶ್ ವಸ್ತçದ್, ಶರಣ ಕಲಾಬಳಗದ ರಮೇಶ ಗಬ್ಬೂರು, ಹೀಗೆ ೩೫ ಕ್ಕಿಂತ ಹೆಚ್ಚಿನ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಡಾ|| ಶಿವಕುಮಾರ ಮಾಲಿಪಾಟೀಲ್ ಸ್ವಾಗತಿಸಿದರು. ಪವನಕುಮಾರ ಗುಂಡೂರು ವಂದನಾರ್ಪಣೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಮಂಜುನಾಥ ಕಟ್ಟಿಮನಿ, ವಿನಯ ಪಾಟೀಲ್ ಹಾಗೂ ಗಂಗಾವತಿ ಚಾರಣ ಬಳಗದ ಮಂಜುನಾಥ ಗುಡ್ಲಾನೂರು, ಮೈಲಾರಪ್ಪ ಬೂದಿಹಾಳ. ಉಲ್ಲಾಸ್, ಕೆ.ವೈ.ಟಿ.ಸಿ ಪ್ರಮುಖರಾದ ಅರ್ಜುನ್, ಸೌಮ್ಯ, ಪಂಪಾಪತಿ, ಪ್ರಕಾಶ, ಗ್ರಾಮೀಣ ಭಾರತೀಯ ರೆಡಿಯೋದ ರಾಘವೇಂದ್ರ ತೂನಾ ಭಾಗವಹಿಸಿದ್ದರು.

ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ಮೂಲಭಾಷೆ: ಶರಣಬಸವ ತಾತನನವರು

ಗಂಗಾವತಿ: ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ಮೂಲಭಾಷೆಯಾಗಿದೆ. ಈ ಭಾಷೆಯು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ದೇವನಗರಲಿಪಿ ಎಂದು ಕರೆಯುತ್ತಾರೆ. ಈ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಭಾಷೆಯು ಯಾವುದೇ ಮತ, ಧರ್ಮಕ್ಕೆ ಮೀಸಲಾಗಿರುವುದಿಲ್ಲ. ಯಾರು ಬೇಕಾದರೂ ಕಲಿಯಬಹುದು, ಇದಕ್ಕೆ ವಯೋಮಿತಿ ಇರುವುದಿಲ್ಲ ಎಂದು ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪೂಜ್ಯ ಶ್ರೀ ಶರಣಬಸವ ತಾತನವರು ತಿಳಿಸಿದರು.
ಅವರು ಡಿಸೆಂಬರ್-೮ ಭಾನುವಾರ ನಗರದ ಹೊಸಳ್ಳಿ ರಸ್ತೆಯ ಕನ್ನಡ ಜಾಗೃತಿ ಭವನದಲ್ಲಿ ನಡೆದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ಈ ಸಂಸ್ಕೃತ ಸಂಭಾಷಣಾ ಶಿಬಿರವು ಶ್ರೀ ಹಾನಗಲ್ಲ ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ, ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ, ಕನ್ನಡ ಜಾಗೃತಿ ಸಮಿತಿ ಗಂಗಾವತಿ ಇವರ ಸಹಯೋಗದಲ್ಲಿ ನವೆಂಬರ್-೨೮ ರಿಂದ ೧೧ ದಿನಗಳವರೆಗೆ ೧ನೇ ತರಗತಿಯಿಂದ ೯ನೇ ತರಗತಿ ಮಕ್ಕಳಿಗಾಗಿ ಏರ್ಪಡಿಸಲಾಗಿತ್ತು. ಈ ೧೧ ದಿನಗಳ ಪರ್ಯಂತ ಸಂಸ್ಕೃತ ಶಿಕ್ಷಕರಾದ ಶ್ರೀಮತಿ ಪಂಪಾದೇವಿಯವರು ನಡೆಸಿಕೊಟ್ಟಿದ್ದು, ಇವರಿಗೆ ಗಣ್ಯವ್ಯಕ್ತಿಗಳಿಂದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಾರೋಪ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಮಾಡಿದರು, ಅಧ್ಯಕ್ಷತೆಯನ್ನು ತಾ.ಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ವಕೀಲರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ. ಷಣ್ಮುಖಸ್ವಾಮಿ ಕಡ್ಡಿಪುಡಿ ವಕೀಲರು ಸಂಡೂರು, ಸಮಾಜ ಸೇವಕರಾದ ಹಿರೇಜಂತಕಲ್ಲಿನ ಎಸ್.ಬಿ ಹಿರೇಮಠ, ಉಪನ್ಯಾಸಕರಾದ ವಿರುಪಾಕ್ಷಯ್ಯ, ಶಿಕ್ಷಕರಾದ ದುರ್ಗಾಪ್ರಸಾದ, ಕೆ.ಎಸ್.ಆರ್.ಟಿ.ಸಿ ನಿವೃತ್ತ ನಿರ್ವಾಹಕರಾದ ಬಸವನಗೌಡ ಹೊಸಕೇರಿ, ಶಿಕ್ಷಕಿಯಾದ ಶೃತಿ ತಾವರಗೇರಾ ಆಗಮಿಸಿದ್ದರು.
ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ಅರಳಹಳ್ಳಿಯ ಬೃಹನ್ಮಠದ ರೇವಣಸಿದ್ದಯ್ಯ ತಾತನವರು ಮಾಡಿದರು.

ನಮ್ಮ ದೇಶದಲ್ಲಿ ಇರುವ ಜಾತಿ ವ್ಯವಸ್ಥೆ ತೊಲಗಿಸಿ ನಾವೆಲ್ಲರೂ ಸಮಾನವಾಗಿ ಬಾಳೋಣ: ಬೋದಿದತ್ತ ಥೇರೋ ಬಂತೇಜಿ

ಗಂಗಾವತಿ: ಮನುಷ್ಯನಿಗೆ ತಾಳ್ಮೆ ಬಹಳ ಮುಖ್ಯ. ತಾಳ್ಮೆ ಇದ್ದರೆ ನಾವು ಅಂದುಕೊಂಡಿದ್ದೆಲ್ಲ ಸಾಧಿಸಲು ಸಾಧ್ಯ ಎಂದು ಪೂಜ್ಯ ಬೋದಿದತ್ತ ಥೇರೋ ಬಂತೇಜಿಯವರು ಬಂತೇಜಿ ಹೇಳಿದರು.
ಗಂಗಾವತಿ ನಗರದ ೨೮ನೇ ವಾರ್ಡ್ ಚಲವಾದಿ ಓಣಿ, ಹಿರೇಜಂತಕಲ್ ಬೌದ್ಧ ಅನುಯಾಯಿಗಳು ಹಮ್ಮಿಕೊಂಡಿದ್ದ ಸನ್ನತಿ ಪಂಚಶೀಲ ಪಾದಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಮಾತನಾಡಿ ಬಂತೇಜಿ ಪಂಚಶೀಲ ಪಠಣ ಮಾಡಿ ಅದರ ಮಹತ್ವವನ್ನು ತಿಳಿಸಿದರು. ಯಾವುದೇ ವ್ಯಕ್ತಿ ಕಳ್ಳತನ ಮಾಡಬಾರದು. ಮೋಸ, ವಂಚನೆ ಇಂತಹ ಕೆಟ್ಟ ದುಶ್ಚಟಗಳನ್ನು ಮಾಡಬಾರದೆಂದು ಬೌದ್ಧ ಬಂತೇಜಿ ಹೇಳಿದರು. ಈ ಪಂಚಶೀಲಯಾತ್ರೆಯ ಉದ್ದೇಶ ಬೌದ್ಧ ಧರ್ಮ ಪ್ರಚಾರ ಮಾಡುವುದರ ಜೊತೆಗೆ ಬೌದ್ಧ ಬಂತೇಜಿಯವರು ವಿವಿಧ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ಕರ್ನಾಟಕದ ಕಲಬುರಗಿ ಜಿಲ್ಲೆಯ ಸನ್ನತ್ತಿ ಗ್ರಾಮದಿಂದ ಬೆಂಗಳೂರು ವಿಧಾನಸೌಧದವರೆಗೆ, ಪೂಜ್ಯ ಬೋದಿದತ್ತ ಥೇರೋ ಬಂತೇಜಿಯವರು ಕೈಗೊಂಡಿರುವ ಪಂಚಶೀಲ ಉದ್ದೇಶವು ವಿಶೇಷವಾಗಿ ಸಾಮ್ರಾಟ ಆಶೋಕ ಚಕ್ರವರ್ತಿಯ ಕಾಲದಲ್ಲಿ ಕೆತ್ತನೆಯಾಗಿರುವ ಶಿಲಾ ಶಾಸನಗಳು ಇರುವ ಸ್ಥಳಗಳಿಗೆ ಕಡ್ಡಾಯವಾಗಿ ಬೇಟಿಕೊಟ್ಟು, ದಾರಿಯುದ್ದಕ್ಕೂ ನಿಗದಿತ ಗ್ರಾಮಗಳಲ್ಲಿ ರಾತ್ರಿಹೊತ್ತು ವಸತಿ ಇದ್ದು, ಸಾಗುತ್ತಿರುವ ಪಾದಯಾತ್ರೆಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಅಭೂತಪೂರ್ವ ಸ್ಪಂದನೆ ಸಿಗುತ್ತಿದೆ. ಉದ್ದೇಶಿತ ಸನ್ನತ್ತಿ ಗ್ರಾಮದಲ್ಲಿ ಬೌದ್ಧ ನಿಗಮ ವಿಹಾರ ಸ್ಥಾಪನೆ, ಕರ್ನಾಟಕದಲ್ಲಿನ ಶಿಲಾಶಾಸನಗಳನ್ನು ಆಭಿವೃದ್ಧಿಪಡಿಸುವುದು, ಬೌದ್ಧ ಪೌರ್ಣಿಮೆಯನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಪಾದಯಾತ್ರೆ ಕೈಗೊಳ್ಳಲಾಗಿದೆ. ಪಾದಯಾತ್ರೆಯುದ್ದಕ್ಕೂ ಇರುವ ಹಳ್ಳಿಗಳ, ಗ್ರಾಮಗಳ, ತಾಲೂಕುಗಳ, ಜಿಲ್ಲಾ ನಗರಗಳ ಬೌದ್ಧ ಉಪಾಸಕರು, ಅನುಯಾಯಿಗಳು, ರಾಜಕಾರಣಿಗಳಿಂದ ಉತ್ತಮವಾದ ಸ್ಪಂದನೆ ಸಿಗುತ್ತಿದೆ ಎಂದು ಪಾದಯಾತ್ರೆ ಕೈಗೊಂಡಿರುವ ಪೂಜ್ಯ ಬೋದಿದತ್ತ ಥೇರೋ ಬಂತೇಜಿಯವರು ನಗರದ ಪಂಚಶೀಲ ಪಾದಯಾತ್ರೆಯಲ್ಲಿ ತಿಳಿಸಿದರು. ಮುಂದಿನ ಪಾದಯಾತ್ರೆಯಲ್ಲಿ ಕೊಪ್ಪಳ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿನ ಶಿಲಾ ಶಾಸನಗಳನ್ನು ನೋಡಿಕೊಂಡು ಜನವರಿ-೨೪ ರಂದು ವಿಧಾನಸೌಧಕ್ಕೆ ತಲುಪಿ ಮಾನ್ಯ ಮುಖ್ಯಮಂತ್ರಿಗಳಿಗೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಲಾಗುವುದು, ಅಂದಿನ ದಿನ ೫೦ ಸಾವಿರಕ್ಕೂ ಹೆಚ್ಚು ಜನ ಬೌದ್ಧ ಉಪಾಸಕರು, ಅನುಯಾಯಿಗಳು ಬೆಂಗಳೂರಿನಲ್ಲಿ ಸೇರಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಲವಾದಿ ಸಮಾಜದ ಅಧ್ಯಕ್ಷರಾದ ಹರ್ಷಪ್ಪ ಕೋರಿ, ಚಲವಾದಿ ಸಮಾಜದ ಗೌರವಾಧ್ಯಕ್ಷ ಹುಲುಗಪ್ಪ ಮಾಗಿ, ಹುಸೇನಪ್ಪ ಹಂಚಿನಾಳ ವಕೀಲರು, ಲೋಕಪ್ಪ, ರಮೇಶ್ ಗೊಬ್ಬೂರು, ಬಸಪ್ಪ ಆಗೋಲಿ, ಲಿಂಗಣ್ಣ ಜಂಗಮರಹಳ್ಳಿ, ಭೀಮೇಶ್ ಕರಿಮೂತಿ, ಮರಿಸ್ವಾಮಿ ಬರಗೂರು, ತಿಮ್ಮಣ್ಣ ವಕೀಲರು ಮುಂಡೋಸ್, ರಾಮಣ್ಣ ಕಿರಿಕಿರಿ, ರವಿ ಆರತಿ, ಮಲ್ಲಿಕಾರ್ಜುನ್ ಗೋಟೂರು, ವೀರೇಶ್ ಆರತಿ, ಆಂಜನೇಯ ಸೋಮನಾಳ, ಹುಲ್ಲೇಶ್ ಬಂಡಿ ಸೇರಿದಂತೆ ಅನೇಕ ಬೌದ್ದ ಅನುಯಾಯಿಗಳು ಭಾಗವಹಿಸಿದ್ದರು.

ವಿಶ್ವಕರ್ಮ ಸಮಾಜದ ಮೌನೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಸೇವೆ ಹಾಗೂ ನೂತನ ಕಾರ್ಯಕಾರಿ ಮಂಡಳಿ ರಚನೆ.

ಗಂಗಾವತಿ: ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀಗುರು ಮೌನೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್-೯ ಸೋಮವಾರ ಸಂಜೆ ೭:೩೦ ಕ್ಕೆ ಪಲ್ಲಕ್ಕಿ ಸೇವೆ ನಡೆಯಿತು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ನಾಗೇಶಕುಮಾರ ಕಂಸಾಲ ರವರ ನೇತೃತ್ವದಲ್ಲಿ ಗಂಗಾವತಿ ತಾಲೂಕ ವಿಶ್ವಕರ್ಮ ಸಮಾಜದ ಕಾರ್ಯಕಾರಿ ಮಂಡಳಿ ರಚನೆ ಮಾಡಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಕಾರ್ಯಕಾರಿ ಮಂಡಳಿ ರಚನೆ ಮಾಡಿ ಮಾತನಾಡಿದ ನಾಗೇಶಕುಮಾರ ಕಂಸಾಲರವರು ನಮ್ಮ ವಿಶ್ವಕರ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದ್ದು, ಸಮಾಜವನ್ನು ಬಲಪಡಿಸಿ ಶ್ರೇಯೋಭಿವೃದ್ದಿಗೊಳಿಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ಸಂಘ-ಸಂಸ್ಥೆಗಳು, ಮುಖಂಡರು, ಕಾರ್ಯಕಾರಿ ಮಂಡಳಿಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಕಲಾವಿದರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜವನ್ನು ಒಗ್ಗೂಡಿಸಿ ಬಲಪಡಿಸಬೇಕೆಂದು ಕರೆಕೊಟ್ಟರು.
ನೂತನ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷರಾಗಿ ಜಿ. ಮಂಜುನಾಥ ಸರಾಫ್, ಅಧ್ಯಕ್ಷರಾಗಿ ಕಾಳೇಶ ಬಡಿಗೇರ, ಉಪಾಧ್ಯಕ್ಷರುಗಳಾಗಿ ಮನೋಹರ ವಿಶ್ವಕರ್ಮ ಮಲಕನಮರಡಿ, ಗುರುನಾಥ ಬಡಿಗೇರ ಗಂಗಾವತಿ, ಕಾರ್ಯದರ್ಶಿಯಾಗಿ ಚಿದಂಬರ ದಿಕ್ಷಿತ್, ಸಹಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ ಪತ್ತಾರ, ಖಜಾಂಚಿಯಾಗಿ ದೇವೆಂದ್ರಪ್ಪ ಬಡಿಗೇರ ಹಣವಾಳ, ನಿರ್ದೇಶಕರುಗಳಾಗಿ ಗುರಪ್ಪ ಬಡಿಗೇರ ಹೊಸಳ್ಳಿ, ಬಸವರಾಜ ಬಡಿಗೇರ, ಸಣ್ಣೆಪ್ಪ ಕಮ್ಮಾರ, ವೀರೇಶ ಮಾಚಳ್ಳಿ, ಪ್ರಶಾಂತ ಸುತಾರ, ಪ್ರಶಾಂತ ಸೋನಾರ ಶಿಲ್ಪಿ, ರುದ್ರೇಶ ಬಡಿಗೇರ ಆರ‍್ಹಾಳ, ಮಲ್ಲಿಕಾರ್ಜುನ ಆಚಾರ ಇವರುಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿ.ವಿ ಸರ್ವಜ್ಞ ಆಚಾರ್, ಶಂಕ್ರಪ್ಪ ಮನವಾಚಾರ ಸೇರಿದಂತೆ ಸಮಾಜದ ಅನೇಕ ಹಿರಿಯ ಮುಖಂಡರು, ಮಹಿಳಾ ಮಂಡಳಿ ಸದಸ್ಯರು, ಯುವಕರು ಉಪಸ್ಥಿತರಿದ್ದರು.