ಹನುಮದ್ ವೃತ ಪ್ರಯುಕ್ತ ತೊಟ್ಟಿಲು ಉತ್ಸವ.

ಗಂಗಾವತಿ. ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಂದಿರದ ಶ್ರೀ ಆಂಜನೇಯ ಸ್ವಾಮಿಗೆ ಹನುಮದ್ ವೃತಾಚರಣೆಯ ಪ್ರಯುಕ್ತ ತೊಟ್ಟಿಲು ಉತ್ಸವ. ಶುಕ್ರವಾರದಂದು ಸಂಭ್ರಮದಿಂದ ಜರುಗಿತು.
ಪ್ರದೀಪ್ ಆಚಾರ್ ಅವರು ಸಂಕಲ್ಪ ತೊಟ್ಟಿಲು ಉತ್ಸವ. ಅಷ್ಟಾವಧಾನ ಸೇವೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರಿವೇರಿಸಿದರು. ಬಳಿಕ ರಾತ್ರಿ ದೀಪೋತ್ಸವ, ಮಹಿಳೆಯರಿಂದ ಪುರುಷರಿಂದ ಭಜನೆ ಇತರೆ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಮುರಳಿಧರ್ ಕುಲಕರ್ಣಿ ಮಾತನಾಡಿ ಧಾರ್ಮಿಕ ಆಚರಣೆಯ ಮೂಲಕ ಸಮಾಜದ ಸಂಘಟನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಹಲವು ದಶಕಗಳಿಂದ ದೇವಸ್ಥಾನದಲ್ಲಿ ಹನುಮ ಜಯಂತಿ. ಹನುಮವೃತ್, ಯೋಗೀಶ್ವರ ಯಾಜ್ಞವಲ್ಕ್ಯ ಜಯಂತಿ, ಪ್ರತಿ ಹುಣ್ಣಿಮೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ನಡೆಸುತ್ತಾ ಬರಲಾಗಿದೆ. ಇದರಿಂದ ಸಂಘಟಿತ ಮನೋಭಾವನೆ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಆಚಾರ್, ಪ್ರಸನ್ನ ಆಲಂಪಲ್ಲಿ, ಪ್ರಸಾದ್, ರಂಗನಾಥ್ ವಟಗಲ್, ವೇಣುಗೋಪಾಲ್, ರಾಘವೇಂದ್ರ ಲೆಕ್ಕಿಹಾಳ, ಲಕ್ಷ್ಮಣ ಜಮಖಂಡಿ, ಸತೀಶ್ ಸಮಾಜದ ಹಿರಿಯರು ಮಹಿಳೆಯರು ಪಾಲ್ಗೊಂಡಿದ್ದರು.

೫ನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಬಿ.ಎಲ್ ಬುಲ್ಸ್ ಕರಾಟೆ ಸಂಸ್ಥೆಯ ಕರಾಟೆ ವಿದ್ಯಾರ್ಥಿಗಳ ಅಮೋಘ ಸಾಧನೆ.

ಗಂಗಾವತಿ: ಡಿಸೆಂಬರ್-೧೪ ಶನಿವಾರ ನಡೆದ ೫ನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಸಿಂಧನೂರಿನ ಮಿಲಪ್ ಶಾದಿಮಹಲ್‌ನಲ್ಲಿ ಡಾ. ರಜಾಕ್ ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಈ ಒಂದು ಸ್ಪರ್ಧೆಯಲ್ಲಿ ಬಿ.ಎಲ್ ಬುಲ್ಸ್ ಕರಾಟೆ ಡು ಸ್ಪೋರ್ಟ್ಸ್ ಅಸೋಸಿಯೇಷನ್ (ರಿ) ಗಂಗಾವತಿ ಸಂಸ್ಥೆ ವತಿಯಿಂದ ೨೦ ಕರಾಟೆ ಕ್ರೀಡಾಪಟುಗಳು ಭಾಗವಹಿಸಿ ಅಮೋಘವಾದ ಸಾಧನೆ ಮಾಡಿದಾರೆ.
ಕಟಾ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಚಿನ್ನು, ಭೀಮ್‌ಸಿಂಗ್, ನಿರ್ಮಲ, ಪ್ರತಾಪ್ ಪಡೆದಿದ್ದು, ಅದೇರೀತಿ, ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಅವೇಜ್, ಚಿರು, ಚರಣ್, ಅಹಾನ್ ಪಡೆದಿದ್ದು, ಅದೇರೀತಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಮನೋಜ್, ವಿಜಯ್ ಕುಮಾರ, ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಆಲಿಯಾ, ರಾಘವೇಂದ್ರ, ಆದ್ವಿಕ್, ಯಶಿಕಾ, ಮಣಿಕಂಠ, ಚೇತನ್ ಪಡೆದಿದ್ದು, ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ರಾಮಾರ್ಜುನ ಪಡೆದಿದ್ದು, ಅದೇರೀತಿ ಕಟಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಮುತ್ತುರಾಜ್, ವಿಜಯ್, ಪ್ರಥಮ್ ಪಡೆದಿರುತ್ತಾರೆ.
ಒಟ್ಟಾರೆಯಾಗಿ ಕಟಾ ವಿಭಾಗದಲ್ಲಿ ೧೦ ಪ್ರಥಮ ಸ್ಥಾನ, ೬ ದ್ವಿತೀಯ ಸ್ಥಾನ, ೪ ತೃತೀಯ ಸ್ಥಾನ ಹಾಗೂ ಕುಮುಟೆ ವಿಭಾಗದಲ್ಲಿ ೫ ಪ್ರಥಮ, ೪ ದ್ವಿತೀಯ, ೮ ತೃತಿಯ ಸ್ಥಾನ ಪಡೆದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಚಂದ್ರೇಗೌಡ ಪೊಲೀಸ್ ಪಾಟೀಲ್ ಪ್ರಶಂಸೆ ವ್ಯಕ್ತಪಡಿಸಿದರು. ಕರಾಟೆ ಶಿಕ್ಷಕರಾದ ಮಂಜುನಾಥ ರಾಠೋಡ್, ಮೀನಾಕ್ಷಿ, ಫಯಾಜ್, ಪ್ರಜ್ವಲ್ ನಿಂಗರಾಜ್, ಆಂಜನೇಯರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

೧೫ನೇ ವರ್ಷದ ಶ್ರೀ ದತ್ತಾತ್ರೇಯ ಜಯಂತೋತ್ಸವ ಗುರುದೋಷ ನಿವಾರಣೆಗೆ ದತ್ತ ನಾಮಸ್ಮರಣೆ ಅವಶ್ಯಕ: ಧರ್ಮದರ್ಶಿ ನಾರಾಯಣರಾವ್ ವೈದ್ಯ.

ಗಂಗಾವತಿ: ಹರ ಮುನಿದರು ಗುರು ಕಾಯುವ ಎಂಬ ಮಾತಿನಂತೆ ಪ್ರತಿಯೊಬ್ಬರ ಬದುಕಿನಲ್ಲಿ ಮುಂದೆ ಗುರಿ ಹಿಂದೆ ಗುರುವಿನ ಅನುಗ್ರಹ ಅವಶ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಗುರುದೋಷ ನಿವಾರಣೆಗೆ ತ್ರಿಮೂರ್ತಿ ಅವತಾರಿಗಳಾದ ಶ್ರೀ ದತ್ತಾತ್ರೇಯ ಗುರುಗಳ ನಾಮಸ್ಮರಣೆ ಅತ್ಯಂತ ಅವಶ್ಯಕವಾಗಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಅವರು ಶಂಕರ ಮಠದ ಶಾರದಾ ದೇಗುಲದಲ್ಲಿ ಶೃಂಗೇರಿ ಜಗದ್ಗುರುಗಳ ಸುವರ್ಣ ಮಹೋತ್ಸವದ ಪ್ರಯುಕ್ತ ಉಭಯ ಜಗದ್ಗುರುಗಳ ಅನುಗ್ರಹದ ಮೇರೆಗೆ ೧೫ನೇ ವರ್ಷದ ದತ್ತಾತ್ರೇಯ ಜಯಂತೋತ್ಸವ ಉಪಯುಕ್ತ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ದತ್ತ ಕ್ಷೇತ್ರಗಳಾದ ಗಾಣಗಾಪುರ, ರಾಯಚೂರು ಸಮೀಪದ ಕೃಷ್ಣ ನದಿಯ ನಡುಗಡ್ಡೆಯಾದ ಕುರುವಪುರ ಕ್ಷೇತ್ರದ ದರ್ಶನ ಪಡೆಯಲು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸಮಾಜದ ಹಿರಿಯರು ಕಳೆದ ೧೫ ವರ್ಷದ ಶ್ರೀ ದತ್ತಾತ್ರೇಯ ಜಯಂತಿ, ಗುರುದ್ವಾದಶಿ ಆಚರಣೆಯ ಮೂಲಕ ಗುರುಗಳ ಕೃಪೆಗೆ ಪಾತ್ರರಾಗುತ್ತಾ ಬರಲಾಗಿದೆ ಎಂದು ತಿಳಿಸಿದರು.
ಸಮಾರಂಭದ ಸಂಯೋಜಕರಾದ ಜಗನ್ನಾಥ ರಾವ್ ಅಳವಂಡಿಕರ ಮಾತನಾಡಿ, ದತ್ತ ಜಯಂತಿ ಉತ್ಸವಕ್ಕೆ ಶೃಂಗೇರಿ ಉಭಯ ಜಗದ್ಗುರುಗಳ ಪ್ರೇರಣೆ ಸಹಕಾರದಿಂದಾಗಿ ಸಂಪೂರ್ಣ ಯಶಸ್ಸಿಗೊಂಡಿದೆ. ಧಾರ್ಮಿಕತೆ ಬೆಳೆಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದೆ ಎಂದರು.
ಸಮಾರಂಭಕ್ಕೆ ಪೂರ್ವದಲ್ಲಿ ಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪಾಲಕಿ ಉತ್ಸವ, ತೊಟ್ಟಿಲು ಉತ್ಸವ ಸೇರಿದಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಹಾಗೂ ವೇದಮೂರ್ತಿ ಮಹೇಶಭಟ್ ಜೋಶಿ ನೆರವೇರಿಸಿದರು. ಚಿಕ್ಕಮಕ್ಕಳಿಂದ, ಹಿರಿಯರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಗಮನ ಸೆಳೆದವು.
ಈ ಸಂದರ್ಭದಲ್ಲಿ ಶಂಕರ ಮಠದ ಸೇವಾ ಟ್ರಸ್ಟ್ ಹಿರಿಯರಾದ ರಾಘವೇಂದ್ರ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಶ್ರೀಪಾದರಾವ್ ಮುಧೋಳಕರ್, ದತ್ತಾತ್ರೇಯ ಹೊಸಳ್ಳಿ, ವಿಶ್ವನಾಥ್ ಅಳವಂಡಿಕರ್, ಸುಧಾಕರ್ ಜೋಶಿ, ಸೇರಿದಂತೆ ವಿವಿಧ ಭಜನಾ ಮಂಡಳಿಯ ಮಹಿಳೆಯರು ಪಾಲ್ಗೊಂಡಿದ್ದರು.