ಹನುಮದ್ ವೃತ ಪ್ರಯುಕ್ತ ತೊಟ್ಟಿಲು ಉತ್ಸವ.

ಗಂಗಾವತಿ. ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಂದಿರದ ಶ್ರೀ ಆಂಜನೇಯ ಸ್ವಾಮಿಗೆ ಹನುಮದ್ ವೃತಾಚರಣೆಯ ಪ್ರಯುಕ್ತ ತೊಟ್ಟಿಲು ಉತ್ಸವ. ಶುಕ್ರವಾರದಂದು ಸಂಭ್ರಮದಿಂದ ಜರುಗಿತು.
ಪ್ರದೀಪ್ ಆಚಾರ್ ಅವರು ಸಂಕಲ್ಪ ತೊಟ್ಟಿಲು ಉತ್ಸವ. ಅಷ್ಟಾವಧಾನ ಸೇವೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರಿವೇರಿಸಿದರು. ಬಳಿಕ ರಾತ್ರಿ ದೀಪೋತ್ಸವ, ಮಹಿಳೆಯರಿಂದ ಪುರುಷರಿಂದ ಭಜನೆ ಇತರೆ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಮುರಳಿಧರ್ ಕುಲಕರ್ಣಿ ಮಾತನಾಡಿ ಧಾರ್ಮಿಕ ಆಚರಣೆಯ ಮೂಲಕ ಸಮಾಜದ ಸಂಘಟನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಹಲವು ದಶಕಗಳಿಂದ ದೇವಸ್ಥಾನದಲ್ಲಿ ಹನುಮ ಜಯಂತಿ. ಹನುಮವೃತ್, ಯೋಗೀಶ್ವರ ಯಾಜ್ಞವಲ್ಕ್ಯ ಜಯಂತಿ, ಪ್ರತಿ ಹುಣ್ಣಿಮೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ನಡೆಸುತ್ತಾ ಬರಲಾಗಿದೆ. ಇದರಿಂದ ಸಂಘಟಿತ ಮನೋಭಾವನೆ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಆಚಾರ್, ಪ್ರಸನ್ನ ಆಲಂಪಲ್ಲಿ, ಪ್ರಸಾದ್, ರಂಗನಾಥ್ ವಟಗಲ್, ವೇಣುಗೋಪಾಲ್, ರಾಘವೇಂದ್ರ ಲೆಕ್ಕಿಹಾಳ, ಲಕ್ಷ್ಮಣ ಜಮಖಂಡಿ, ಸತೀಶ್ ಸಮಾಜದ ಹಿರಿಯರು ಮಹಿಳೆಯರು ಪಾಲ್ಗೊಂಡಿದ್ದರು.

Leave a Reply