ಶಾಸಕ, ಸಂಸದರು ಸೇರಿದಂತೆ ಕೈ ನಾಯಕರಿಗೆ ಮಹಾಂತೇಶಗೌಡ ಪಾಟೀಲರಿಂದ ಸನ್ಮಾನ

ಕೊಪ್ಪಳ : ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಆಡಳಿತ ಮಂಡಳಿಯ ನಾಮನಿರ್ದೇಶನ ಸದಸ್ಯರಾಗಿ ಮಹಾಂತೇಶಗೌಡ ಪಾಟೀಲ ಅವರನ್ನು ರಾಜ್ಯಸರ್ಕಾರದ ಶಿಫಾರಸ್ಸು ಮೇರೆಗೆ ರಾಜ್ಯಪಾಲರು ನೇಮಕ ಮಾಡಿದ್ದರು. ಈ ಹಿನ್ನೆಲೆ ನೂತನ ಆಡಳಿತ ಮಂಡಳಿಯ ಸದಸ್ಯರಾದ ಮಹಾಂತೇಶಗೌಡ ಪಾಟೀಲ ಅವರು, ಬುಧವಾರದಂದು ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದರಾದ ರಾಜಶೇಖರ ಹಿಟ್ನಾಳ, ಮಾಜಿ ಸಂಸದರಾದ ಕರಡಿ ಸಂಗಣ್ಣನವರನ್ನು ಭೇಟಿ ಮಾಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಮಹಾಂತೇಶಗೌಡ ಪಾಟೀಲ ಅವರ ಹಿತೈಷಿಗಳು ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಆಡಳಿತ ಮಂಡಳಿಯ ನಾಮನಿರ್ದೇಶನ ಸದಸ್ಯರಾಗಿ ಮಹಾಂತೇಶಗೌಡ. ಬ ಪಾಟೀಲ ನೇಮಕ

ಕೊಪ್ಪಳ : ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಆಡಳಿತ ಮಂಡಳಿ ನಾಮನಿರ್ದೇಶನ ಸದಸ್ಯರಾಗಿ ಕೃಷಿ ಉದ್ಯಮಿ ಮಹಾಂತೇಶಗೌಡ. ಬ. ಪಾಟೀಲ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಮಾಡಿದ್ದಾರೆ. ರಾಜ್ಯಪಾಲರಾದ ಥಾವರರಚಂದ್ ಗೆಹ್ಲೋಟ್ ಅವರ ಅನುಮೋದನೆ ಮೇರೆಗೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಪ್ರಶಾಂತಕುಮಾರ್ ಅವರು ಮಹಾಂತೇಶಗೌಡ. ಬ.ಪಾಟೀಲ ಅವರನ್ನು ಮುಂದಿನ ಮೂರು ವರ್ಷದ ಅವಧಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕ ಮಾಡಿ ಆದೇಶ‌ ಮಾಡಿದ್ದಾರೆ.

ಇನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಲು ಕಾರಣರಾದ ಸಿಎಂ ಸಿದ್ದರಾಮಯ್ಯನವರು, ಡಿಸಿಎಂ ಡಿ.ಕೆ‌ ಶಿವಕುಮಾರ್, ತೋಟಗಾರಿಕೆ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ, ಜಿಲ್ಲಾಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದರಾದ ಕರಡಿ ಸಂಗಣ್ಣ, ಮಾಜಿ ಶಾಸಕರಾದ ಬಸವರಾಜ ಹಿಟ್ನಾಳ, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕರು ಹಾಗೂ ಕಾಡಾ ಅಧ್ಯಕ್ಷರಾದ ಹಸನ್ ಸಾಬ್ ದೋಟಿಹಾಳ್, ಹೆಚ್.ಆರ್ ಶ್ರೀನಾಥ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೆ ಮಹಾಂತೇಶಗೌಡ ಪಾಟೀಲ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ನನನ್ನು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ಸದಸ್ಯನಾಗಿ ಘನವೆತ್ತ ಕರ್ನಾಟಕದ ರಾಜ್ಯಪಾಲರು ನಾಮನಿರ್ದೇಶನ ಮಾಡಿದ್ದಾರೆಂದು ತಿಳಿಸಲು ಹರ್ಷಿತನಾಗಿದ್ದೇನೆ.
ರಾಜ್ಯ ಸರ್ಕಾರ ಸಹಕಾರದಿಂದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ನಾಮನಿರ್ದೇಶನ ಸದಸ್ಯನಾಗಿ ನೇಮಕವಾಗಿದ್ದೇನೆ.. ನನ್ನನ್ನು ನಾಮನಿರ್ದೇಶನ ಮಾಡಿದ ಸರ್ಕಾರಕ್ಕೆ ನಾನು ಅಭಾರಿಯಾಗಿದ್ದು, ಇನ್ನು ಹೆಚ್ಚಿನ ರೀತಿಯಲ್ಲಿ ರೈತಪರ ಕೆಲಸ ಮಾಡುವೆ. ರೈತಪರ ಕೆಲಸಕ್ಕೆ ಇದೇ ರೀತಿ ಎಲ್ಲರ ಸಹಕಾರ ಇರಲಿ.

ಮೆಹಬೂಬ್ ಸುಭಾನಿ ಜೆಂಡ ಕಟ್ಟಿಯ ಸಮಿತಿಗೆ ದಾಸೋಹ ಪರಿಕರಗಳ ವಿತರಣೆ.

ಗಂಗಾವತಿ ಸಮೀಪದ ಮರಳಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಸರ್ವಧರ್ಮದವರು ಕೈ ಹಿಡಿದು ವಿರುಪಾಕ್ಷಪ್ಪ ಹೇಮಗುಡ್ಡ ಅವರ ಗೆಲುವಿಗೆ ಕಾರಣಿಭೂತರಾದ ದಲಿತ ಸಮುದಾಯದ ಕಾಲೋನಿಯ ಹುಲಿಗಮ್ಮ ದೇವಸ್ಥಾನ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನ ಸಮಿತಿಗಳಿಗೆ ಈಗಾಗಲೇ ಅಲ್ಪಸೇವೆಯನ್ನು ಸಲ್ಲಿಸಲಾಗಿದ್ದು. ಅದೇ ಮಾದರಿಯಲ್ಲಿ ಮೆಹಬೂಬ್ ಸುಭಾನಿ ಜೆಂಡ ಕಟ್ಟೆಯ ತಾತನವರ ಸಮಿತಿಗೆ ದಾಸೋಹದ ಪರಿಕರಗಳನ್ನು. ಹೇಮಗುಡ್ಡ ಕುಟುಂಬಸ್ಥರಿಂದ ಬುಧವಾರದಂದು ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ ಅತ್ಯಂತ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಗ್ರಾಮ ಪಂಚಾಯಿತಿ ಸದಸ್ಯ ವಿರೂಪಾಕ್ಷಪ್ಪ ಹೇಮಗುಡ್ಡ ಹೇಳಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಮುಸ್ಲಿಂ ಸಮಾಜ ಬಾಂಧವರು ಪಾಲ್ಗೊಂಡಿದ್ದರು