ಗಂಗಾವತಿ ಸಮೀಪದ ಮರಳಿ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಸರ್ವಧರ್ಮದವರು ಕೈ ಹಿಡಿದು ವಿರುಪಾಕ್ಷಪ್ಪ ಹೇಮಗುಡ್ಡ ಅವರ ಗೆಲುವಿಗೆ ಕಾರಣಿಭೂತರಾದ ದಲಿತ ಸಮುದಾಯದ ಕಾಲೋನಿಯ ಹುಲಿಗಮ್ಮ ದೇವಸ್ಥಾನ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನ ಸಮಿತಿಗಳಿಗೆ ಈಗಾಗಲೇ ಅಲ್ಪಸೇವೆಯನ್ನು ಸಲ್ಲಿಸಲಾಗಿದ್ದು. ಅದೇ ಮಾದರಿಯಲ್ಲಿ ಮೆಹಬೂಬ್ ಸುಭಾನಿ ಜೆಂಡ ಕಟ್ಟೆಯ ತಾತನವರ ಸಮಿತಿಗೆ ದಾಸೋಹದ ಪರಿಕರಗಳನ್ನು. ಹೇಮಗುಡ್ಡ ಕುಟುಂಬಸ್ಥರಿಂದ ಬುಧವಾರದಂದು ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ ಅತ್ಯಂತ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಗ್ರಾಮ ಪಂಚಾಯಿತಿ ಸದಸ್ಯ ವಿರೂಪಾಕ್ಷಪ್ಪ ಹೇಮಗುಡ್ಡ ಹೇಳಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಮುಸ್ಲಿಂ ಸಮಾಜ ಬಾಂಧವರು ಪಾಲ್ಗೊಂಡಿದ್ದರು
