ಹೂವಿನ ಹಡಗಲಿಯ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷರಾಗಿ ಮಧುನಾಯ್ಕ ಲಂಬಾಣಿ ಮರು ಆಯ್ಕೆ

ಮಾರ್ಚ್‌ -16 ಭಾನುವಾರ ಶಿವಮೊಗ್ಗದ ಕರ್ನಾಟಕ ಸಂಘದ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮುಂದಿನ ೫ ವರ್ಷಗಳ ಅವಧಿಗೆ ಮಧು ನಾಯ್ಕ ಲಂಬಾಣಿಯವರನ್ನು ಅಧ್ಯಕ್ಷರನ್ನಾಗಿ ಮರುಆಯ್ಕೆ ಮಾಡಲಾಯಿತು.

ಸಂಘವು ತಮ್ಮ ೫ ವರ್ಷದ ಅವಧಿಯಲ್ಲಿ ಹಲವಾರು ನೂತನ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ ಕರ್ನಾಟಕ ರಾಜ್ಯದ ಮನೆ ಮಾತಾಗಿದೆ. ಕೇವಲ ಸಾಹಿತ್ಯ ಕೃಷಿಗಾಗಿ ಸೀಮಿತವಾಗಿರದೇ ರೈತರಿಗೆ ಸಲಹೆ, ಆರೋಗ್ಯ ಮಾಹಿತಿ, ಸೈನಿಕರಿಗೆ ಗೌರವ, ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಕಾರ್ಯಗಳನ್ನು ಹಲವಾರು ಆಸಕ್ತರ ಜಿಲ್ಲಾ ಅಧ್ಯಕ್ಷರ ಸಹಕಾರದಿಂದ ನಡೆಸುತ್ತಾ ಬಂದು ಸಂಘವನ್ನು ಇಷ್ಟು ಎತ್ತರಕ್ಕೆ ತಂದ ಕೀರ್ತಿ ಮಧುನಾಯ್ಕ ಲಂಬಾಣಿ ರವರಿಗೆ ಸಲ್ಲುತ್ತದೆ ಎ೦ದು ಸಂಘದ ಗೌರವ ಅಧ್ಯಕ್ಷ ಗೂರೂರು ಅನಂತರಾಜು ಸಭೆಯಲ್ಲಿ ಮಧು ನಾಯ್ಕ ಲಂಬಾಣಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ಇನ್ನೂ ೫ ವರ್ಷಗಳ ಕಾಲ ಮಧುನಾಯ್ಕ ಲಂಬಾಣಿಯವರೇ ಅಧ್ಯಕ್ಷರಾಗಿ ಮುಂದುವರೆಯಲಿ ಎಂದು ಕಾರ್ಯಕಾರಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಧುನಾಯ್ಕ ಲಂಬಾಣಿ ಇವರ ಕಾರ್ಯವೈಖರಿ ಕುರಿತು ಎಲ್ಲಾ ಜಿಲ್ಲಾ ಅಧ್ಯಕ್ಷರು ಮಾತನಾಡಿ ನಿರಂತರವಾಗಿ ನಡೆಸಿಕೊಂಡು ಎಲ್ಲರನ್ನೂ ಪ್ರೀತಿಯಿಂದ ಗೆದ್ದು ರಾಜ್ಯಮಟ್ಟದಲ್ಲಿ ಈ ಸಂಘಟನೆ ಮಧುನಾಯ್ಕ.ಲಂಬಾಣಿಯವರಿಂದ ಇಂದು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ ಎಂದು ಶ್ಲಾಘಿಸಿ ಆಯ್ಕೆ ಮಾಡಿ ಅಭಿನಂದಿಸಿದರು.

ಸಂಘದ ಗೌರವ ಅಧ್ಯಕ್ಷರಾದ ಶ್ರೀ ಗೊರೂರು ಅನಂತರಾಜು, ಉಪಾಧ್ಯಕ್ಷರಾದ ಶ್ರೀಮತಿ ಬಸಮ್ಮ ಹಿರೇಮಠ ಹಾಗೂ ಶ್ರೀಮತಿ ಸುಜಾತ ಚಂದ್ರಧರನಾಯ್ಕ ಹಾಗೂ ರಾಜ್ಯಘಟಕದ ಪದಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಅಧ್ಯಕ್ಷರು ಭಾಗವಹಿಸಿದ್ದರು.

ಶಿವಮೊಗ್ಗ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ, ಐದು ಕೃತಿಗಳ ಲೋಕಾರ್ಪಣೆ ಸಾಧಕರಿಗೆ ಸನ್ಮಾನ

ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ, ಈ ಸಂಘವು ರಾಜ್ಯದ ೩೦ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಸ್ಥಾಪನೆ ಮಾಡಿದ್ದು ಜಿಲ್ಲಾ ಅಧ್ಯಕ್ಷರ ನೇಮಕ ಮಾಡಲಾಗಿದೆ. ಪ್ರತೀ ವರ್ಷ ಕನ್ನಡ ನುಡಿ ವೈಭವ ಕಾರ್ಯಕ್ರಮ ಜೊತೆಗೆ ಹಲವಾರು ವಿಶೇಷ ವಿನೂತನ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಕನ್ನಡ ನಾಡು ನುಡಿ ಸೇವೆ ಮಾಡುತ್ತಾ ಬಂದಿದೆ. ಮಾರ್ಚ್ ೧೬ ರಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಗಾಯನ ಕ್ಷೇತ್ರದಲ್ಲಿ ಹಾಗೂ ಸೇವಾ ಕ್ಷೇತ್ರದಲ್ಲಿ ಮತ್ತು ಕಾವ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಷ್ಟ್ರಮಟ್ಟದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಸುಮಾರು ಎರಡು ನೂರು ಜನಗಳಿಗೆ ಸನ್ಮಾನ ಮಾಡಿದ ಕಾರ್ಯಕ್ರಮದಲ್ಲಿ ಐದು ಕೃತಿಗಳ ಲೋಕಾರ್ಪಣೆಯನ್ನು ರಾಜ್ಯಾಧ್ಯಕ್ಷ ಮಧು ನಾಯ್ಕ ಲಂಬಾಣಿ ಮಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಹಿರಿಯ ಸಾಹಿತಿ ಡಾ. ಹಸೀನರವರು ಕವಿತೆ ವಾಚಿಸುವ ಮುಖೇನ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ರಾಮು ಎನ್ ರಾಥೋಡ್ ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರು ಚಂದ್ರಶೇಖರ್ ಹಡಪದ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಸಂಘದ ಗೌರವ ಅಧ್ಯಕ್ಷರಾದ ಸಾಹಿತಿ ಗೊರೂರು ಅನಂತರಾಜು, ಗೋಪಾಲ ನಾಯಕ್ ವಾಯ್ಸ್ ಆಫ್ ಇವರು ಭಾಗವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಘಟಕದಿಂದ ಪ್ರಾಯೋಜಿತ ಕಾರ್ಯಕ್ರಮಗಳು ನೆರವೇರಿದವು.