ಗಂಗಾವತಿಗೆ ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳ ಭೇಟಿ: ಆಶೀರ್ವಾದ ಸ್ವೀಕಾರ

ಗಂಗಾವತಿ: ಡಿಸೆಂಬರ್-೨೯ ರಂದು ನಗರದ ಟೀಚರ್ಸ್ ಕಾಲೋನಿಯ ವಿ.ಎ ಪಾಟೀಲ್ ನಗರದಲ್ಲಿರುವ ಉಮೇಶ ಬಾಬು ಅವರ ನಿವಾಸಕ್ಕೆ ಇಂದು ಪರಮಪೂಜ್ಯರಾದ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಯವರು ಆಗಮಿಸಿದ ಪ್ರಯುಕ್ತ, ಸ್ಥಳೀಯ ಭಕ್ತರು ಹಾಗೂ ಗಣ್ಯರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಮಹತ್ವದ ಸಂದರ್ಭದಲ್ಲಿ ಚಿತ್ರನಟ ವಿಷ್ಣುತೀರ್ಥ ಜೋಷಿ ಅವರು ಅಭಿನಯಿಸಿರುವ “ನಮ್ಮ ಭಾಷೆ, ನಮ್ಮ ಕನ್ನಡ” ಎಂಬ ಕನ್ನಡ ಚಲನಚಿತ್ರದ ಪೋಸ್ಟರ್‌ನ್ನು ಶ್ರೀಗಳ ಸನ್ನಿಧಿಯಲ್ಲಿ ಪ್ರದರ್ಶಿಸಲಾಯಿತು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರತಿಪಾದಿಸುವ ಈ ಚಿತ್ರದ ಉದ್ದೇಶವನ್ನು ತಿಳಿಸಿ, ಶ್ರೀಗಳ ಆಶೀರ್ವಾದವನ್ನು ಪಡೆದರು.

ಈ ವೇಳೆ ವೀರೇಶ್ ಯಾವಗಲ್, ದೊಡ್ಡನಗೌಡ ಪಾಟೀಲ್, ಮಂಜುನಾಥ್ ಕೋರಿ, ಕೊಳ್ಳಿ ಬಸವರಾಜ, ಶಿವಪ್ಪ ಅರಹಾಳ, ಸಾಗರ ಮುಷ್ಟಿ, ಸಿಂಗನಾಳ ಜಗದೀಶಪ್ಪ & ಕುಟುಂಬದವರು, ಶ್ರೀನಿವಾಸ ಅಂಗಡಿ, ವಿಷ್ಣುತೀರ್ಥ ಜೋಷಿ, ರಾಘವೇಂದ್ರ ತೂನ ಹಾಗೂ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ & ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿ ಎ.ಕೆ ಮಹೇಶ್ ಕುಮಾರ್ ಇದ್ದರು. https://aratt.ai/@vishwaroopa_news_blog

ಹೆಚ್.ಎಸ್. ಪ್ರತಿಮಾಹಾಸನ್ ಗೆ “ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ” ಪ್ರಧಾನ

ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣ ಕನ್ನಡ ಭವನದಲ್ಲಿ ಡಿ: 28 ರಂದು  ಅನ್ನಪೂರ್ಣೇಶ್ವರಿ ಹ್ಯುಮಾನಿಟಿ ಫೌಂಡೇಶನ್ (ರಿ) ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ (ರಿ) ವತಿಯಿಂದ ವಿಶ್ವಮಾನವ ದಿನಾಚರಣೆ ಹಾಗೂ ಮೂರು ವರ್ಷ ಪೂರ್ಣಗೊಳಿಸಿದ ಅನ್ನಪೂರ್ಣೇಶ್ವರಿ ಫೌಂಡೇಶನ್ ಸ್ಥಾಪಕ ದಿನೋತ್ಸವ ಮತ್ತು ರಾಜ್ಯಮಟ್ಟದ “ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ” ಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಮೇಲಿನ ಪ್ರಶಸ್ತಿಗೆ ಮಹಿಳಾ ಸಾಧಕಿಯಾದ ಹಾಸನ ನಗರದ ಶಿಕ್ಷಕಿ. ಸಾಮಾಜಿಕ ಚಿಂತಕಿಯಾದ ಹೆಚ್.ಎಸ್. ಪ್ರತಿಮಾ ಹಾಸನ್ ರವರನ್ನು ಶಿಕ್ಷಣ ಕ್ಷೇತ್ರಕ್ಕೆ ಆಯ್ಕೆ ಮಾಡಿ ಪ್ರತಿಷ್ಠಿತವಾದ ” ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು’ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸಾಹಿತಿ.ಪತ್ರಕರ್ತೆ ಹಾಗೂ ‘ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ’ ಸಂಸ್ಥಾಪಕ ಅಧ್ಯಕ್ಷರು, ಬಹುಮುಖ ಪ್ರತಿಭೆಯಾಗಿ ಸದಾ ಕ್ರಿಯಾಶೀಲರಾಗಿ ಜಿಲ್ಲೆ, ರಾಜ್ಯಮಟ್ಟದಲ್ಲಿ ಹಲವಾರು ಸಂಘ ಸಂಸ್ಥೆಯಲ್ಲಿ ಪದಾಧಿಕಾರವನ್ನು ಪಡೆದು ಕಾರ್ಯನಿರ್ವಹಿಸುತ್ತಾ, ನಾಡು ನುಡಿ ಕಲೆ ಸಂಸ್ಕೃತಿಗೆ ನೀಡಿರುವ ಹೆಚ್.ಎಸ್. ಪ್ರತಿಮಾ ಇವರ ಸೇವೆಯು ಅಪಾರವಾಗಿದ್ದು.ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಇವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಶಸ್ತಿಯನ್ನು ಪಡೆದು ಹಾಸನದ ಹೆಮ್ಮೆಯ ಪುತ್ರಿಯಾಗಿ ಗುರುತಿಸಿಕೊಂಡಿರುವ ಮಹಿಳಾ ಸಾಧಕಿಯಾಗಿರುತ್ತಾರೆ. ಹಲವಾರು ಪ್ರಕಾರಗಳಲ್ಲಿ 12 ಕ್ಕೂ ಹೆಚ್ಚು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಹಲವು ಕೃತಿ ಬಿಡುಗಡೆಗೆ ಸಿದ್ಧವಾಗುತ್ತಿದ್ದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಹಾಗೂ ಗಾಯಕಿ, ಅಂಕಣಗಾರ್ತಿ, ಹಲವಾರು ಪ್ರಕಾರಗಳಲ್ಲಿ ಪತ್ರಿಕೆಗಳಿಗೆ ಬರೆಯುತ್ತಿರುವ ಇವರನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಪ.ಪೂ ಶ್ರೀಶ್ರೀಶ್ರೀ ಷ.ಬ್ರ. ಮಹರ್ಷಿ ತಪೋರತ್ನ ಶಿವಾಚಾರ್ಯರು, ಶಿವಸಿದ್ಧಿ ಸೋಮೇಶ್ವರ ಮಹಾ ಸಂಸ್ಕೃತಿಗಳು, ಶ್ರೀ ಕ್ಷೇತ್ರ ಮುಕ್ತಿಮಠ, ಭೂತರಮನಹಟ್ಟಿ, ಬೆಳಗಾವಿ. ಹಾಗೂ ಶ್ರೀಮತಿ ನಿತ್ಯ ಎಂ.ಆಚಾರ್ ಅಧ್ಯಕ್ಷರು ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ (ರಿ). ನಿರಂಜನ್ ಶೆಟ್ಟಿ, ಶ್ರೀ ಸುಜ್ಞಾನಮೂರ್ತಿ. ಪಿ, ಇನ್ನು ಹಲವರು ಉಪಸ್ಥಿತರಿದ್ದರು https://aratt.ai/@vishwaroopa_news_blog

“ಆರೋನ್ ಮಿರಜ್‌ಕರ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಮಕ್ಕಳ ಕ್ರಿಸ್‌ಮಸ್”

ಗಂಗಾವತಿ: ಡಿಸೆಂಬರ್-೨೩ ಮಂಗಳವಾರ ಆರೋನ್ ಮಿರಜ್‌ಕರ್ ಹಾಗೂ ನಿವೇದಿತಾ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ “ಮಕ್ಕಳ ಕ್ರಿಸ್‌ಮಸ್”ನ್ನು ಸಿಹಿ ಹಂಚುವುದರ ಮೂಲಕ ಅದ್ಧೂರಿಯಾಗಿ ಆಚರಿಸಲಾಯಿತು.

ಶಾಲೆಯ ಗೋಡೆಗಳನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಿ, ಮಕ್ಕಳೇ ತಯಾರಿಸಿದ ನಾನಾಬಗೆಯ ಚಿತ್ರಗಳಿಂದ ಗೋಡೆಗಳನ್ನು ಶೃಂಗರಿಸಿ, ಅಪರಾಹ್ನ ೨ ಗಂಟೆಗೆ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ‘ಶ್ರೀಮತಿ ಚಿನ್ನಮ್ಮ ಮಿರಜ್‌ಕರ್’ ವಹಿಸಿದ್ದರು.

ಉದ್ಘಾಟನೆಯನ್ನು ಕೇಕ್ ಕತ್ತರಿಸುವುದರ ಮೂಲಕ ಇಸಿಐ ಕರ್ನಾಟಕ ಚರ್ಚ್‌ನ ರೈ. ರೆ. ಬಿಷಫ್ ರವಿ ಕುಮಾರ್ ಅಂದ್ಲಿ ಅವರು ನೆರವೇರಿಸಿ, “ಮಕ್ಕಳ ಕ್ರಿಸ್‌ಮಸ್ ಹಬ್ಬದ ವಿಶೇಷತೆ ಮತ್ತು ಆಚರಣೆಯ ಮಹತ್ವವನ್ನು” ತಮ್ಮ ಉದ್ಘಾಟಕರ ಭಾಷಣದಲ್ಲಿ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು.

ಏಸುಕ್ರಿಸ್ತನ ಜೀವನ, ಸಾಧನೆಗಳನ್ನು ಕುರಿತು ಹಾಗೂ ಹೊಸ ವರ್ಷದ ಆಚರಣೆಯ ವಿಶೇಷತೆಯ ಬಗ್ಗೆ ಶಾಲೆಯ ಕಾರ್ಯದರ್ಶಿಗಳಾದ ರುಬೇನ್ ಮಿರಜ್‌ಕರ್ ಅವರು ತಿಳಿಸಿದರು.

ರೆವ. ಶ್ರೀ ಯೇಸುದಾಸ್ ಮತ್ತು ರೆವ. ಶ್ರೀ ಯೋಹನ್ ಬಾಬು ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಯೇಸುವಿನ ಪ್ರಾರ್ಥನೆ ಮತ್ತು ದೇವರ ವಾಕ್ಯಗಳನ್ನು ತಿಳಿಸಿದರು.

ಶಾಲೆಯ ಖಜಾಂಚಿಗಳಾದ ಶ್ರೀಮತಿ ಸುನೀತಾ ಮಿರಜ್‌ಕರ್, ಆಡಳಿತಾಧಿಕಾರಿಗಳಾದ ಶ್ರೀ ಚಂದ್ರಕಾಂತ್‌ರಾವ್, ಆರೋನ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಂಜುನಾಥ ನಾಯಕ ಹಾಗೂ ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಖಾ ಠಾಕೂರ್ ಮತ್ತು ಶಾಲೆಯ ಆಡಳಿತ ಮಂಡಳಿಯ ಸದಸ್ಯೆ ಕು. ಏಂಜಲಿನಾ ಮಿರಜ್‌ಕರ್ ವೇದಿಕೆಯಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂತಾಕ್ಲಾಸ್ ಕೆಂಪು ಮತ್ತು ಬಿಳಿ ಬಣ್ಣದ ಸಮವಸ್ತ್ರಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರಗನ್ನು ತಂದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಮನಮುಟ್ಟುವಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಉಭಯ ಶಾಲೆಗಳ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. https://aratt.ai/@vishwaroopa_news_blog

ಹಾಡು ನೃತ್ಯಗಳಲ್ಲಿ ರಂಜಿಸಿದ ದಕ್ಷಬ್ರಹ್ಮ ನಾಟಕ

ಹಾಸನ: ಹಾಸನದ ಹಾಸನಾಂಬ ‘ಕಲಾಕ್ಷೇತ್ರದಲ್ಲಿ ಸ್ಥಳೀಯ ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘವು ಹಮ್ಮಿಕೊಂಡಿರುವ ನಾಲ್ಕು ದಿನಗಳ ನಾಟಕೋತ್ಸವದಲ್ಲಿ ಅನ್ನಪೂಣೇಶ್ವರಿ ಕಲಾಸಂಘದ ಕಲಾವಿದರು ಶುಕ್ರವಾರ ದಕ್ಷಯಜ್ಞ ನಾಟಕ ಪ್ರದರ್ಶಿಸಿದರು.

ಸಂಘದ ಅಧ್ಯಕ್ಷ ಡಿ.ವಿ.ನಾಗಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ ತಾವು ರಂಗಭೂಮಿಗೆ ಬಂದು 18 ವರ್ಷ ಆಗಿದೆ. ಈವರೆಗೆ 200 ನಾಟಕಗಳಲ್ಲಿ ನಟಿಸಿದ್ದೇನೆ. ಸಂಘ ಹಲವಾರು ಹೊಸ ನಾಟಕ ಪ್ರದರ್ಶಿಸಿದೆ. ಪೌರಾಣಿಕ ನಾಟಕೋತ್ಸವ ನಡೆಸಿದ್ದೇವೆ. ಮುಂದೆಯೂ ರಂಗ ಚಟುವಟಿಕೆ ನೆಡೆಸಲು ಸಂಘದ ಕಲಾವಿದರು ಅಧ್ಯಕ್ಷ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾಟಕದ ಮೇಷ್ಟ್ರು ಡಿ.ಸಿ ಪುಟ್ಟರಾಜು ನಮಗೆ ಹೊಸ ಹೊಸ ನಾಟಕ ಕಲಿಸಿಕೊಟ್ಟ ಕಡಿಮೆ ಸಂಭಾವನೆ ಸ್ವೀಕರಿಸಿ ಆತ್ಮೀಯತೆಯಲ್ಲಿ ಕಲಾವಿದರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರಿಗೆ ನಾವು ಕಲಾವಿದರು ಪ್ರೀತಿಯಿಂದ ಬೆಳ್ಳಿ ಕಿರೀಟ ಉಂಗುರ ತೊಡಿಸಿ ಗೌರವಿಸಲಾಗುತ್ತಿದೆ ಎಂದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ ‘ಹೊಂಡರಬಾಳು ಎಸ್. ಲಿಂಗರಾಜೇ ಅರಸ್ ರಚಿತ ದಕ್ಷಯಜ್ಞ ನಾಟಕ ಮೈಸೂರು ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಹತ್ತು ವರ್ಷಗಳ ಹಿಂದೆ ಎ.ಸಿ. ರಾಜು ಈ ನಾಟಕವನ್ನು ಇಲ್ಲಿ ನಿರ್ದೇಶಿಸಿ ನಾಟಕ ಪ್ರದರ್ಶನ ಕುರಿತಾಗಿ ಬರೆದಿದ್ದೆ. ನಾಟಕವೀಕ್ಷಣೆ ವಯಸ್ಕರ ಮನಸ್ಸಿಗೆ ಉಲ್ಲಾಸ ತರುತ್ತದೆ. ಪ್ರೇಕ್ಷಕರೆ ಕಲಾವಿದರಿಗೆ ಸ್ಫೂರ್ತಿ. ಜೀವಂತ ಕಲೆ ನಾಟಕ ಹೀಗೆ ಸಾಗಲಿ ಎಂದು ಆಶಿಸಿದರು.

ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್ ಬಿದರೆ ಸಮಿತಿಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕಲಾವಿದರು ರಮೇಶ್ ಗೌಡಪ್ಪ, ಸಿ.ಎಂ.ಶ್ರೀಕಂಠಪ್ಪ, ವೇದ ಶಿವಕುಮಾರ್, ವಕೀಲರು ಐ.ಎ.ಮಹೇಂದ್ರ, ಬಿ.ಕೆ.ವಿಶ್ವನಾಥಗೌಡ ಎಂ.ಟಿ.ತಿಮ್ಮೇಗೌಡ, ಕಲಾವಿದರು ಕೆ.ಕೆ.ರಂಗಸ್ವಾಮಿ, ಟಿ.ವಿ.ನಾಗರಾಜ್ ಹೆಚ್.ಎಂ.ಪ್ರಭಾಕರ್, ಸಾವಿತ್ರಿ ಗಂಗಾಧರ್, ಯರೇಹಳ್ಳಿ ಮಂಜೇಗೌಡರು, ಜಗದೀಶ್ ರಾಮಘಟ್ಟ, ಗ್ಯಾರಂಟಿ ರಾಮಣ್ಣ, ಶಶಿಕುಮಾರ್ ಸಾಲಗಾಮೆ, ನಾಟಕ ನಿರ್ದೇಶಕರು ಎ.ಸಿ. ರಾಜು, ಸೀನ್ಸ್ ಮಾಲೀಕರು ಲಕ್ಷಣ್ ಕಡಗ, ನಿ. ಪ್ರಾಧ್ಯಾಪಕರು ಎ ಹೆಚ್ ಗಣೇಶ ಅಂಕಪುರ, ಕಾರ್ಲೆ ಗೋವಿಂದೇಗೌಡರು ಇದ್ದರು.

ಸಿಗರನಹಳ್ಳಿ ಚಂದ್ರಶೇಖರ್ ನಿರೂಪಿಸಿದರು. ಬ್ಯಾಟಾಚಾರ್ ಪ್ರಾರ್ಥಿಸಿದರು. ಬಂದೂರು ಶ್ರೀ ಸಿದ್ಧಲಿಂಗೇಶ್ವರ ಡ್ರಾಮಾ ಸೀನರಿಯ ಉತ್ತಮ ಬೆಳಕು ಮೇಕಪ್ ಮೈಕ್ ವಸ್ತ್ರಾಲಂಕಾರಗಳಲ್ಲಿ ದಕ್ಷ ಯಕ್ಷ ನಾಟಕ ಯಶಸ್ವಿ ಪ್ರದರ್ಶನ ಕಂಡಿತು. ನಾಟಕದ ದಕ್ಷಬ್ರಹ್ಮ ಪಾತ್ರದಲ್ಲಿ ಸತೀಶ್ ಕಬ್ಬತ್ತಿ. ಬಾಲ ಬ್ರಹ್ಮ – ಬಾನು ಶೇಖರ್ ಈಶ್ವರ -ನಿರಂಜನ, ಬ್ರಹ್ಮ – ನಾಗರಾಜ್ ಸಿ.ಜಿ. ಗಮನ ಸೆಳೆದರು.

ಚಂದ್ರಮ ರೋಹಿಣಿ ಪಾತ್ರಗಳಲ್ಲಿ ನಿಂಗರಾಜು ಮತ್ತು ನಾಗಮಣಿ, ವಸುಂದರ ಪದ್ಮ ಪಾತ್ರಗಳಲ್ಲಿ ಮಂಜುನಾಥ್ ಚಂದನ ಜೋಡಿ ಚಂದವಾಗಿ ನರ್ತಿಸಿ ಶೃಂಗಾರ ಗೀತೆಗಳಿಂದ ರಂಜಿಸಿದರು. ನಾರದನ ಪಾತ್ರವನ್ನು ಇಬ್ಬರು ರಮೇಶ್ ಕೆ ಮತ್ತು ಆನಂದಮೂರ್ತಿ ನಿಭಾಯಿಸಿದರು.

ಭೃಗು ಮಹರ್ಷಿ – ಡಿ.ವಿ.ನಾಗಮೋಹನ್ ನಂದಿ – ಜಗದೀಶ್, ವೀರಭದ್ರ ಪಾತ್ರ ಕುಮಾರ್ ಸ್ತ್ರೀ ಪಾತ್ರಗಳು ಆದಿಶಕ್ತಿ ದೀಪು, ಪುಪ್ಪವತಿ- ಮಂಜಳ ಉಮೇಶ್, ರೇವತಿ – ಮಮತ, ಭರಣಿ – ಸಾವಿತ್ರಿ ಗಂಗಾಧರ್ ಅಭಿನಯಿಸಿದರು. ವಾದ್ಯ ಗೋಷ್ಠಿ ಕ್ಯಾಸಿಯೋ ವಿಶ್ವ ಮಂಡ್ಯ, ತಬಲ ಲೋಕಾಭಿರಾಮ ಮಂಡ್ಯ ಸಾತ್ ನೀಡಿದರು. https://aratt.ai/@vishwaroopa_news_blog

ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಜಂಪ್‌ರೋಪ್ ಸ್ಪರ್ಧೆಯಲ್ಲಿ ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಕುಮಾರ ಮಂಜುನಾಥ ರಾಷ್ಟ್ರಮಟ್ಟಕ್ಕೆ ಆಯ್ಕೆ.

ಗಂಗಾವತಿ: ನಗರದ ಪ್ರತಿಷ್ಠಿತ ಶ್ರೀಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯು ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಕುಮಾರ ಮಂಜುನಾಥ ತಂ. ದೊಡ್ಡಪ್ಪ ಇವರು ಡಿಸೆಂಬರ್-೧೩ ಮತ್ತು ೧೪ ರಂದು ಹನುಮಸಾಗರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಜಂಪ್‌ರೋಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಈ ವಿದ್ಯಾರ್ಥಿಗೆ ಸಂಘದ ಅಧ್ಯಕ್ಷರಾದ ಶ್ರೀ ಮ.ನಿ.ಪ್ರ ಡಾ. ಕೊಟ್ಟೂರು ಮಹಾಸ್ವಾಮಿಗಳು ಕಲ್ಮಠ ಹಾಗೂ ಕಾರ್ಯದರ್ಶಿಗಳಾದ ಶ್ರೀ ಶರಣೇಗೌಡ ಮಾಲಿಪಾಟೀಲ್ ಹಾಗೂ ಸಂಘದ ಸರ್ವ ಸದಸ್ಯರು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ್ ಜಿ.ಹೆಚ್., ಕಾಲೇಜಿನ ಪ್ರಾಚಾರ್ಯರಾದ ಚಂದ್ರಶೇಖರ ಹಂಚಿನಾಳ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. https://aratt.ai/@vishwaroopa_news_blog

ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಿ ಪ್ರಮುಖ ರಾಜಕೀಯ ನಾಯಕರೊಂದಿಗೆ ಗಂಗಾವತಿ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ ಸೋಮನಾಥ ಪಟ್ಟಣಶೆಟ್ಟಿ.

ಗಂಗಾವತಿ: ಪ್ರಸ್ತುತ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನಕ್ಕೆ ತೆರಳಿದ ಗಂಗಾವತಿಯ ಹಿರಿಯ ವಕೀಲರಾದ ಸೋಮನಾಥ ಪಟ್ಟಣಶೆಟ್ಟಿಯವರು ಡಿಸೆಂಬರ್-೧೧ ರಂದು ಗಂಗಾವತಿಯ ಅಭಿವೃದ್ಧಿ ಕುರಿತು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಬೆಳಗಾವಿಯ ಐಟಿಸಿ ವೆಲ್‌ಕಮ್ ಹೋಟಲ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಭಾಪತಿಗಳಾದ ಯು.ಟಿ. ಖಾದರ್, ಇಂಧನ ಸಚಿವ ಕೆ.ಜೆ ಜಾರ್ಜ್ ಅವರನ್ನು ಭೇಟಿ ಮಾಡಿದರು.

ಮುಖ್ಯಮಂತ್ರಿಗಳು ಹಾಗೂ ಕೆಲವು ಸಚಿವರುಗಳೊಂದಿಗೆ ಉತ್ತಮ ಒಡನಾಟ ಹೊಂದಿರುವ ಸೋಮನಾಥ ಪಟ್ಟಣಶೆಟ್ಟಿಯವರು ವಿಶ್ವವಿಖ್ಯಾತ ಅಂಜನಾದ್ರಿ ಪ್ರಾಧಿಕಾರ ರಚನೆ ಕುರಿತು ಹಾಗೂ ಗಂಗಾವತಿಯಲ್ಲಿ ಹದಗೆಟ್ಟ ರಸ್ತೆಗಳು, ಮೂಲಭೂತ ಸೌಕರ್ಯಗಳ ಕುರಿತು ಈ ಕ್ಷೇತ್ರದ ಸಮಸ್ಯೆಗಳ ಕುರಿತು ಹಾಗೂ ಈ ಭಾಗದ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯದ ಹೂಳು ತೆಗೆದು, ಗೇಟ್‌ಗಳನ್ನು ಭದ್ರವಾಗಿರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಪಟ್ಟಣಶೆಟ್ಟಿ ವಕೀಲರು ತಿಳಿಸಿದರು. https://aratt.ai/@vishwaroopa_news_blog

ಡಿಸೆಂಬರ್-೨೩ ರಂದು ಗಂಗಾವತಿಯಲ್ಲಿ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ಹಾಗೂ ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಉದ್ಘಾಟನಾ ಸಮಾರಂಭ

ಗಂಗಾವತಿ: ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಕೊಪ್ಪಳ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವನ್ನು ಇದೇ ಡಿಸೆಂಬರ್-೨೩ ರಂದು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆಸಲಿದ್ದು, ಅದರ ಜೊತೆಗೆ ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಉದ್ಘಾಟನೆ ಕಾರ್ಯಕ್ರಮ ಕೂಡಾ ನೆರವೇರಲಿದೆ.

ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವ ಕವಿಯತ್ರಿಯರು ಅಶೋಕ ಗುಡಿಕೋಟಿ, ತಾಲೂಕ ಅಧ್ಯಕ್ಷರು, ಚುಟುಕು ಸಾಹಿತ್ಯ ಪರಿಷತ್ ಗಂಗಾವತಿ ಮೊ: ೮೬೬೦೧೬೧೪೩೫, ಸುರೇಶ ಕಲಾಪ್ರಿಯ, ಪ್ರಧಾನ ಕಾರ್ಯದರ್ಶಿಗಳು ಚುಟುಕು ಸಾಹಿತ್ಯ ಪರಿಷತ್ತು ಗಂಗಾವತಿ, ಮೊ: ೯೬೧೧೧೭೦೫೬೦ ಹಾಗೂ ಮಹಾಲಕ್ಷ್ಮಿ ಕೇಸರಹಟ್ಟಿ, ಅಧ್ಯಕ್ಷರು, ಕದಳಿ ಮಹಿಳಾ ವೇದಿಕೆ ಗಂಗಾವತಿ, ಮೊ: ೭೪೮೩೯೭೫೭೧೩ ಗಳಿಗೆ ಸಂಪರ್ಕಿಸಲು ಅಶೋಕ ಗುಡಿಕೋಟಿ ತಿಳಿಸಿದ್ದಾರೆ.

https://aratt.ai/@vishwaroopa_news_blog

ಪ್ರಶಸ್ತಿಗಳು, ಪುರಸ್ಕೃತರ ಜವಾಬ್ದಾರಿಯನ್ನು ಹೆಚ್ಚಿಸಿ ಜಾಗೃತರನ್ನಾಗಿ ಮಾಡುತ್ತವೆ: ಜಗನ್ನಾಥ್ ಆಲಂಪಲ್ಲಿ

ಗಂಗಾವತಿ: ಪ್ರಶಸ್ತಿ ಹಾಗೂ ಪುರಸ್ಕಾರಗಳು ಪುರಸ್ಕೃತರ ಜವಾಬ್ದಾರಿಯನ್ನು ಹೆಚ್ಚಿಸಿ ಜಾಗೃತರನ್ನಾಗಿ ಮಾಡುತ್ತವೆ. ಆ ನಿಟ್ಟಿನಲ್ಲಿ  ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ಇತರೆ ಸಂಘ-ಸಂಸ್ಥೆಗಳಿಂದ ಇದೇ ತಿಂಗಳು ಕೊನೆಯಲ್ಲಿ ನೀಡಲಾಗುವ ಶಿಕ್ಷಣ ತಜ್ಞ ಹೆಚ್ ನರಸಿಂಹಯ್ಯ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಲಿಟಲ್‌ ಹಾಟ್ಸ್‌ ಶಾಲೆಯ ಕಾರ್ಯದರ್ಶಿಯಾದ ಜಗನ್ನಾಥ ಆಲಂಪಲ್ಲಿ ಅಭಿಪ್ರಾಯಪಟ್ಟರು.

ಅವರು ಸ್ವಾಮಿ ವಿವೇಕಾನಂದ ಆಂಗ್ಲಭಾಧ್ಯಮ ಶಾಲೆಯಲ್ಲಿ ಶಾಲೆಯ ಮುಖ್ಯ ಗುರುಗಳು ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳಿಂದ ಅಭಿನಂದನೆ ಜೊತೆಗೆ ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ಇತರೆ ಸಂಘ-ಸಂಸ್ಥೆಗಳಿಂದ ಇದೇ ದಿನಾಂಕ 28 ರಿಂದ ಮೂರು ದಿನಗಳ ಕಾಲ ಯಾದಗಿರಿಯಲ್ಲಿ ಜರುಗಲಿರುವ ರಾಜ್ಯ ಮಟ್ಟದ ಬೃಹತ್ ಸಮಾವೇಶದಲ್ಲಿ ಶಿಕ್ಷಣ ತಜ್ಞ ಹೆಚ್ ನರಸಿಂಹಯ್ಯ ರಾಜ್ಯಮಟ್ಟದ ಪ್ರಶಸ್ತಿಗೆ ನಾನು ಆಯ್ಕೆಯಾಗಿರುವುದು ಒಂದು ಕಡೆ ಸಂತಸವಾದರೆ ಮತ್ತೊಂದು ಕಡೆ ನಾನು ಮತ್ತಷ್ಟು ಜವಾಬ್ದಾರಿ ಅನುಸರಿಸಬೇಕಾದ ಅವಶ್ಯಕತೆ ಇದೆ ಹೇಳಿದರು. ಪ್ರತಿಯೊಬ್ಬರು ನಿರ್ದಿಷ್ಟವಾದ ಗುರಿಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ನಡೆದಾಗ ಯಶಸ್ಸಿನ ದಾರಿ ಸುಲಭವಾಗಲಿದೆ ಎಂದು  ತಾವು ನಡೆದು ಬಂದ ದಾರಿಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶಾರುಣ್ ಕುಮಾರಿ, ಶಿಕ್ಷಕರಾದ ಅಪರ್ಣ, ಭುವನೇಶ್ವರಿ, ಸುನಿತಾ, ಶಾಂತ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡು ಸಂತಸ ಹಂಚಿಕೊಂಡರು. https://aratt.ai/@vishwaroopa_news_blog

ಹಿರಿಯ ನ್ಯಾಯವಾದಿ ಸೋಮನಾಥ ಪಟ್ಟಣಶೆಟ್ಟಿಗೆ ಜೀ ಕನ್ನಡ ನ್ಯೂಸ್‌ನಿಂದ ವೀರ ಕನ್ನಡಿಗ ಅವಾರ್ಡ್

ಗಂಗಾವತಿ: ನಗರದ ಹಿರಿಯ ನ್ಯಾಯವಾದಿ, ವೀರಶೈವ ಸಮಾಜದ ಮುಖಂಡ ಸೋಮನಾಥ ಪಟ್ಟಣಶೆಟ್ಟಿ ಅವರಿಗೆ ಜೀ ಕನ್ನಡ ನ್ಯೂಜ್ ಅವರಿಂದ ವೀರ ಕನ್ನಡಿಗ ಅವಾರ್ಡ್ ಪ್ರದಾನ ಮಾಡಲಾಗಿದೆ. ಕನ್ನಡ ನಾಡು ನುಡಿ ಏಳ್ಗೆಗೆ ಶ್ರಮಿಸುತ್ತಿರುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ರಾಜ್ಯದ ವಿವಿಧ ಜಿಲ್ಲೆಗಳಿಂದ ಗುರುತಿಸಿರುವ ಜೀ ಕನ್ನಡ ನ್ಯೂಜ್ ಅವರು ಪ್ರತಿ ವರ್ಷ ಈ ಅವಾರ್ಡ್ ನೀಡಲಾಗಿದೆ.

ಪ್ರಸಕ್ತ ೨೦೨೫ನೇ ಸಾಲಿನ ಈ ಅವಾರ್ಡ್ ಗೆ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ನ್ಯಾಯವಾದಿ ಪಟ್ಟಣಶೆಟ್ಟಿ ಅವರಿಗೆ ನೀಡಲಾಗಿದೆ. ಕಳೆದ ೪೦ ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿರುವ ಸೋಮನಾಥ ಪಟ್ಟಣಶೆಟ್ಟಿ ಅವರು ಗಂಗಾವತಿಯ ಹಿರಿಯ ನ್ಯಾಯವಾದಿಯಾಗಿ, ವಿವಿಧ ಬ್ಯಾಂಕ್ ಮತ್ತು ಇನ್ಸೂರೆನ್ಸ್ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿದ್ದಾರೆ. ವಕೀಲ ವೃತ್ತಿಯ ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ವಕೀಲ ವೃತ್ತಿಗೆ ಮಾದರಿಯಾಗಿದ್ದಾರೆ. ಬಡವರಿಗೆ ಸರಕಾರಿ ಯೋಜನೆಗಳು ನೇರವಾಗಿ ತಲುಪಬೇಕು. ರಸ್ತೆ ಸುಧಾರಣೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ಅಭಿವೃದ್ಧಿಯಾಗಬೇಕೆಂಬ ಕಳಕಳಿ ಹೊಂದಿದ್ದಾರೆ. ಅವರ ಸೇವಾ ಮನೋಭಾವನೆ ಮತ್ತು ಕನ್ನಡದ ಕಳಕಳಿಯನ್ನು ಗುರುತಿಸಿ ಜೀ ನ್ಯೂಜ್ ಅವರು ಈ ಅವಾರ್ಡ್ ನೀಡಿದ್ದಾರೆ.

ಡಿ.೪ ರಂದು ಬೆಂಗಳೂರಿನ ಲಲಿತ್ ಅಶೋಕ ಹೊಟೇಲ್‌ನಲ್ಲಿ ಸಂಜೆ ೫.೦೦ ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, ಸಚಿವರಾದ ಹೆಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಸೇರಿದಂತೆ ಬಿಜೆಪಿಯ ಚಲುವಾದಿ ನಾರಾಯಣಸ್ವಾಮಿ ಅವರ ಅಮೃತ ಹಸ್ತದಿಂದ ಈ ಅವಾರ್ಡ್ ನೀಡಿ ಅಭಿನಂದಿಸಲಾಗಿದೆ ಎಂದು ಜೀ ಕನ್ನಡ ನ್ಯೂಜ್ ನ ಸಂಪಾದಕ ರವಿ.ಎಸ್ ಅವರು ತಿಳಿಸಿದರು.

ಹಿರಿಯ ನಟಿಯಾದ ತಾರಾ ಅವರು ಮಾತನಾಡಿ, ಝೀ ಕನ್ನಡ ನ್ಯೂಸ್ ಅವರು ನಾಡಿನ ವಿವಿಧ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ವಿಶೇಷವಾದ ವೀರ ಕನ್ನಡಿಗ ಅವಾರ್ಡ್ ಪಡೆದ ಹಿರಿಯ ನ್ಯಾಯವಾದಿ ಸೋಮನಾಥ ಎಸ್ ಪಟ್ಟಣಶೆಟ್ಟಿ ಅವರಿಗೆ ಗಂಗಾವತಿಯ ಮುಖಂಡರು, ಸಾರ್ವಜನಿಕರು ಶುಭ ಹಾರೈಸಿದ್ದಾರೆ. https://aratt.ai/@vishwaroopa_news_blog

ಶಂಕರ ಮಠದಲ್ಲಿ ದತ್ತ ಜಯಂತಿ ಆಚರಣೆ ಜನ್ಮ ಸಾರ್ಥಕತೆಗೆ ಗುರುವಿನ ಅನುಗ್ರಹ ಅವಶ್ಯಕ: ನಾರಾಯಣರಾವ್ ವೈದ್ಯ.

ಗಂಗಾವತಿ: ಹರ ಮುನಿದರೂ ಗುರು ಕಾಯುವನಂತೆ ಎಂಬಂತೆ ಪ್ರತಿಯೊಬ್ಬ ವ್ಯಕ್ತಿಯ ಜೀವನ ಸಾರ್ಥಕತೆಗೆ ಗುರುಗಳ ಅನುಗ್ರಹ ಅತ್ಯವಶ್ಯವಾಗಿದೆ ಎಂದು ಶಂಕರಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ನಗರದ ಶಂಕರ ಮಠದ ಶಾರದಾ ಮಂದಿರದಲ್ಲಿ ಗುರುವಾರದಂದು ತ್ರಿಮೂರ್ತಿ ಅವತಾರಿಗಳಾದ ಶ್ರೀ ದತ್ತಾತ್ರೇಯ ಜಯಂತೋತ್ಸವ ಸಮಾರಂಭದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶ್ರೀಮಠದ ನಿರ್ಮಾಣಕ್ಕೆ ಪೂರ್ವದಲ್ಲಿ ಹಲವು ದಶಕಗಳಿಂದ ಶ್ರೀ ಶಂಕರಾಚಾರ್ಯ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಹಲವು ವೈವಿಧ್ಯಮಯವಾದ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಧರ್ಮಜಾಗೃತಿ ಹಾಗೂ ಸಮಾಜದ ಸಂಘಟನೆಗೆ ಗಮನಹರಿಸುತ್ತಾ ಬರಲಾಗಿದೆ.

ದಿವಂಗತ ಭೀಮಸೇನ್‌ರಾವ್ ಅಳವಂಡಿಕರ್ ಅವರ ಪರಿಶ್ರಮದಿಂದ ಹಾಗೂ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳ ವಜ್ರೋತ್ಸವ ಹಾಗೂ ವಿದುಶೇಖರ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಸರ್ವಜನಾಂಗದವರ ಸಹಕಾರದಿಂದ ನಗರದಲ್ಲಿ ಶೃಂಗೇರಿ ಪೀಠದ ಉಭಯ ಜಗದ್ಗುರುಗಳ ಅನುಗ್ರಹದಿಂದ ಶ್ರೀಮಠ ಸ್ಥಾಪಿಸಿ ಎಂಟು ವರ್ಷಗಳು ಪೂರೈಸಿದ್ದು, ಶ್ರೀಮಠದ ಎಲ್ಲಾ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಾಂಗತವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದತ್ತಾತ್ರೇಯ ಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪಾಲಕಿ ಉತ್ಸವ, ತೊಟ್ಟಿಲು ಸೇವೆ ಕಾರ್ಯಕ್ರಮವನ್ನು ಮಹೇಶ್ ಭಟ್ ಜೋಷಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮವು ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಜಗನ್ನಾಥ್ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಶೇಷಗಿರಿ ಗಡಾದ್, ಶ್ರೀನಿವಾಸ ಕರಮುಡಿ, ಭೀಮಾಶಂಕರ್ ಹೊಸಳ್ಳಿ, ನಾಗೇಶ್, ಅನಿಲ್ ಭಟ್, ಕಾಶಿನಾಥ್ ಭಟ್ ಜೋಶಿ ಸೇರಿದಂತೆ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. https://aratt.ai/@vishwaroopa_news_blog