NTEP ಕಾರ್ಯಕ್ರಮದಡಿಯಲ್ಲಿ ಉತ್ತಮ ಆಶಾಕಾರ್ಯಕರ್ತೆಯಾಗಿ ಹಿರೇಬೆಣಕಲ್‌ನ ಶಾಂತಮ್ಮ ಬೂದಗುಂಪ ಆಯ್ಕೆ.

ಗಂಗಾವತಿ: ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ NTEP ಕಾರ್ಯಕ್ರಮದ ಅಡಿಯಲ್ಲಿ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಆಶಾ ಕಾರ್ಯಕರ್ತೆ ಶ್ರೀಮತಿ ಶಾಂತಮ್ಮ ಬೂದುಗುಂಪರವರು ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ, ೨೦೨೪ನೇ ಸಾಲಿನ ಅತ್ಯುತ್ತಮ ಉದ್ಯೋಗಿ ಎಂದು ಆಯ್ಕೆ ಮಾಡಲಾಗಿದೆ.

ಅವರಿಗೆ ಮಾರ್ಚ್ ೨೪ ಸೋಮವಾರ ಬೆಳಗ್ಗೆ ೧೦ ಗಂಟೆಗೆ ಕೊಪ್ಪಳದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ವಿಶ್ವ ಕ್ಷಯರೋಗ ದಿನ ೨೦೨೫ ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ್ ಹಾಗೂ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಶ್ರೀಮತಿ ಶಾಂತಮ್ಮ ಬೂದಗುಂಪ ಅವರಿಗೆ ಹಿರೇಬೆಣಕಲ್ ಗ್ರಾಮದ ಸಾರ್ವಜನಿಕರು ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು.

ಅಪಾರ ಭಕ್ತಸಮೂಹ ಹೊಂದಿದ ಪೂಜ್ಯ ದೊಡ್ಡ ಯಮನೂರಪ್ಪ ನವಣಕ್ಕಿಯವರ ನಿಧನ: ಭಕ್ತ ಸಮೂಹ ಸಂತಾಪ

ಗಂಗಾವತಿ: ಗಂಗಾವತಿಯ ದೈವೀ ಪುರುಷ ಪೂಜ್ಯನೀಯ ಲಿಂಗೈಕ್ಯ ಶ್ರೀ ನವಣಕ್ಕಿ ನಾಗಪ್ಪ ತಾತನವರ ಹಿರಿಯ ಸುಪುತ್ರರಾದ ಪೂಜ್ಯನೀಯ ಶ್ರೀ ದೊಡ್ಡ ಯಮನಪ್ಪ ನವಣಕ್ಕಿಯವರು ತಂದೆಯವರ ಮಾರ್ಗದಲ್ಲಿಯೇ ಸೇವೆಯನ್ನು ಸಲ್ಲಿಸಿ ಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿಕೊಂಡಿದ್ದು, ಅವರು ಭಾನುವಾರ ರಾತ್ರಿ ೯ ರ ಸುಮಾರಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಇವರ ಅಂತಿಮ ಸಂಸ್ಕಾರವು ಮಾರ್ಚ್-೨೪ ಸೋಮವಾರ ಗಂಗಾವತಿಯ ಜುಲೈನಗರದ ಬೈಪಾಸ್ ರಸ್ತೆಯ ರುದ್ರಭೂಮಿಯಲ್ಲಿ ನೆರವೇರಿತು.

ಪೂಜ್ಯರ ಆತ್ಮಕ್ಕೆ ಶಾಂತಿ ಸಿಗಲೆಂದು ಕುರುಹಿನಶೆಟ್ಟಿ ಸಮಾಜದ ಯಜಮಾನರುಗಳು, ಎಂ. ಮಲ್ಲಿಕಾರ್ಜುನ ನಾಗಪ್ಪ, ಚೆಗೂರು ಶ್ಯಾಮಣ್ಣ, ಏಳುಬಾವಿ ಕುಬೇರಪ್ಪ, ತಟ್ಟಿ ನಾಗಪ್ಪ, ಶ್ಯಾವಿ ತಿಪ್ಪಣ್ಣ ಹಾಗೂ ಕುರುಗೋಡು ಬಸವರಾಜ ಈ ಎಲ್ಲಾ ಸಮಾಜದ ಯಜಮಾನರು ಹಾಗೂ ಅಪಾರ ಬಂದು ಬಳಗದವರು ಮತ್ತು ಭಕ್ತ ಸಮೂಹದವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.