ದನಗಳ ಜಾತ್ರೆ ನಾಟಕ ಸಾಂಸ್ಕೃತಿಕ ಕಾರ್ಯಕ್ರಮ ಸನ್ಮಾನ

ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿ ಕೆ. ಹಿರಿಹಳ್ಳಿ ಗ್ರಾಮದಲ್ಲಿ 4ನೇ ವರ್ಷದ ದನಗಳ ಜಾತ್ರೆ ಒಂದು ವಾರ ಯಶಸ್ವಿಯಾಗಿ ನಡೆಯಿತು.

ಈ ಪ್ರಯುಕ್ತ ಕಲಾತಂಡಗಳಿಂದ ಕೋಲಾಟ ಬಯಲಾಟ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಭಾನುವಾರ ರಾತ್ರಿ ಮಹಾಶಿವರಾತ್ರಿ ಪ್ರಯುಕ್ತ ಸ್ಥಳೀಯ ಶ್ರೀ ಆಂಜನೇಯ ಹಾಗೂ ಶನೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಕಲಾವಿದರು ಹರುನಳ್ಳಿ ಕುಮಾರ್ ನಿರ್ದೇಶನ ನಲ್ಲಿ ರಾಜ ಸತ್ಯವ್ರತ ನಾಟಕ ಪ್ರದರ್ಶಿಸಿದರು.

ಮಧ್ಯಾಹ್ನ ಹಾಸನ ಜಿಲ್ಲಾ ಕದಂಬ ಸೈನ್ಯ ಕನ್ನಡ ಸಂಘಟನೆಯ ಕಲಾವಿದರು ಭಕ್ತಿಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿ ನಾಟಕಕಾರರು ಗೊರೂರು ಅನಂತರಾಜು ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಲಾವಿದರಾದ ಅಂಕಪುರ ಎ.ಹೆಚ್. ಗಣೀಶ್, ಅರಕಲಗೂಡು ಬೆಕ್ರೀ ರಾಜೇಗೌಡರು, ಮತ್ತು ಗಾಯಕರು ಶ್ರೀಕಾಂತ್ ಅವರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಸೇವಾ ಕಾರ್ಯಗಳು ನಡೆದವು. ಗ್ರಾಮಸ್ತರು ಮತ್ತು ದನಗಳ ಜಾತ್ರೆಯಲ್ಲಿ ಭಾಗವಹಿಸಿದ ರೈತರಿಗೆ ಗ್ರಾಮದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.  https://aratt.ai/@vishwaroopa_news_blog

ಗಂಗಾವತಿಯ ಸಿದ್ದಿಕೆರೆಯಲ್ಲಿ ಬೇಡರ ಕಣ್ಣಪ್ಪನ ಜಯಂತಿ ಆಚರಣೆ

ಗಂಗಾವತಿ: ಬೇಟೆಗಾರನಾದ ಕಣ್ಣಪ್ಪ ಶಿವನಿಗೆ ತನ್ನ ಕಣ್ಣನ್ನು ನೀಡುವ ಮುಖಾಂತರ ಶಿವಮೆಚ್ಚಿದ ಬೇಡರ ಕಣ್ಣಪ್ಪ ಎಂದು ಖ್ಯಾತಿಯನ್ನು ಪಡೆದಿದ್ದು, ಶಿವನೊಲಿದ ದಿನವೇ ಶಿವರಾತ್ರಿಯಾಗಿದೆ ಎಂದು ಅಖಿಲ ಪಿರಾಮಿಡ್‌ ಧ್ಯಾನ ಕೇಂದ್ರದ ಶ್ರೀಮತಿ ಲಲಿತಾ ವಗ್ಗ ಹೇಳಿದರು.

ಅವರು ಗಂಗಾವತಿಯ ಸಿದ್ದಿಕೆರೆಯಲ್ಲಿ ಫೆಬ್ರವರಿ-15 ರವಿವಾರದಂದು ಬೇಡರ ಕಣ್ಣಪ್ಪ ಸಂಘ ಗಂಗಾವತಿ ಹಾಗೂ ಗಂಗಾವತಿ ತಾಲೂಕು ಶ್ರೀಗುರು ಆದಿಕವಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಕಲಾವಿದರ ಸಂಘದಿಂದ ಆಚರಿಸಿದ ಬೇಡರ ಕಣ್ಣಪ್ಪ ಜಯಂತಿಯಲ್ಲಿ ಬೇಡರ ಕಣ್ಣಪ್ಪ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ದಯಬೇಕು ಸಕಲ ಪ್ರಾಣಿಗಳಲ್ಲಿ, ದಯವೇ ಧರ್ಮದ ಮೂಲ, ಪ್ರತಿ ಪ್ರಾಣಿಗೂ ನಮ್ಮಂತೆ ಬದುಕುವ ಹಕ್ಕಿದೆ, ಮಾಂಸಹಾರ ಬಿಟ್ಟು ಶಾಖಾಹಾರಕ್ಕೆ ಮಹತ್ವ ನೀಡಿ ಎಂದು ಕರೆಕೊಟ್ಟರು.

ಇದೇ ಸಂದರ್ಭದಲ್ಲಿ ಕಾಮಧೇನು ನ್ಯೂಟ್ರಿಷನ್‌ ಸೆಂಟರ್‌ನ ಶಿವದೀಪಕ್‌ ಹಾದಿಮನಿ ಮಾತನಾಡಿ, ಭಕ್ತಿಗೆ ಯಾವುದೇ ನಿಯಮಗಳಿಲ್ಲ, ದೇವರು ಒಲಿಯಲು ಸತ್ಯ, ಶುದ್ಧ ಕಾಯಕದ ಜೊತೆಗೆ ನಿರ್ಮಲವಾದ ಮನಸ್ಸು ಇರಬೇಕೆಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಿಂಗಾಪುರ ಭೀಮರಾಯ ನಾಯಕ, ಬಸಪ್ಪ ನಾಯಕ ಸೋಮಲಾಪುರ, ಭೀಮಣ್ಣ ನಾಯಕ ಗುಡ್ಡೇಕಲ್‌, ಹನುಮಂತಪ್ಪ ನಾಯಕ ಕೋಲ್ಕಾರ್‌, ಗಿರಿಶ್ ನಾಯಕ ಬಸವನದುರ್ಗ, ಜಾನ್‌ ನಾಯಕ ಜೋಗದ, ಪ್ರಭಾಕರ ಅರ್ಚಕರು, ರಾಮಣ್ಣ ನಾಯಕ ತೊಂಡೇಕಟದ, ನಾರಾಯಣ ವಗ್ಗಾ, ಪರಸಪ್ಪ ನಾಯಕ ಕ್ಯಾಡೇವು, ಸಿಂಗಾಪುರ ಶ್ರೀನಿವಾಸ ನಾಯಕ, ಹೇಮಂತ ತಳಕಲ್‌, ಶ್ರೀಮತಿ ವಿನುತಾ ಶಿವದೀಪಕ್‌ ಹಾದಿಮನಿ, ಕುಮಾರಿ ರಿಷಿಕಾ, ಕುಮಾರಿ ಹರ್ಷಿಕಾ ಸೇರಿದಂತೆ ಮತ್ತಿತರು ಇದ್ದರು. https://aratt.ai/@vishwaroopa_news_blog

ಗಂಗಾವತಿ ಸೂರ್ಯನಾಯಕ ತಾಂಡದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ

ಗಂಗಾವತಿ: ತಾಲೂಕಿನ ಬಸಾಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೂರ್ಯನಾಯಕ ತಾಂಡದಲ್ಲಿ ಫೆಬ್ರವರಿ-15 ರಂದು ಶ್ರೀ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಸಮಾಜದ ಮುಖಂಡ ಶಂಕರ ನಾಯ್ಕ ಸಂತ ಶ್ರೀ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಬಳಿಕ ಮಾತನಾಡಿ, ಶ್ರಮ ಜೀವಿಗಳು, ಅಲೆಮಾರಿ ಬುಡಕಟ್ಟು ಸಮುದಾಯದ ಶ್ರಮಿಕ ಬಡ ಕುಟುಂಬದಲ್ಲಿ ಹುಟ್ಟಿದ ಸೇವಾಲಾಲ್ ಅವರ ಕೊಡುಗೆ ಸಮಾಜಕ್ಕೆ ಅಪಾರ ಕೊಡುಗೆ ಇದೆ ಎಂದರು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನ, ಗ್ರಾ.ಪಂ. ಸದಸ್ಯೆ ಗೌರಮ್ಮ ಶಂಕರ ನಾಯ್ಕ, ಸಮಾಜದ ಮುಖಂಡರಾದ ಹನುಮಂತಪ್ಪ ನಾಯ್ಕ, ಶಂಕ್ರಪ್ಪ ಡಾವು, ಸಕ್ರಪ್ಪ ಕಾರಬಾರಿ, ಹನುಮಂತಪ್ಪ ಪೂಜಾರಿ, ಬಾಲಾಜಿ ಮೇಸ್ತ್ರಿ, ಎಸ್.ವಿ ಗೋಪಾಲಕೃಷ್ಣ, ಹಾಗೂ ಯುವಕರು, ಮಹಿಳೆಯರು ಸೇರಿದಂತೆ ಇತರರು ಇದ್ದರು.  https://aratt.ai/@vishwaroopa_news_blog