ಮೂಲ ಸೋಮನಾಥ ಜ್ಯೋತಿರ್ಲಿಂಗ ಮಾರ್ಚ್‌-15 ರಂದು ಗಂಗಾವತಿ ಆಗಮನ: ರಘುನಾಥ ಪವಾರ್‌

ಗಂಗಾವತಿ: 1000 ವರ್ಷದ ಹಿಂದಿನ ಮೂಲ ಸೋಮನಾಥ ಜ್ಯೋತಿರ್ಲಿಂಗವು ಮೊಘಲರ ಆಕ್ರಮಣದಿಂದ ಲುಕ್ತವಾಗಿದದ್ದು ಅದನ್ನು ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಪುನರ್ ಪ್ರತಿಷ್ಠಾಪಿಸಿ ಸಾರ್ವಜನಿಕ ವೀಕ್ಷಣೆಗಾಗಿ ಇಡೀ ಕರ್ನಾಟಕದಾದ್ಯಂತ ಪ್ರತಿ ತಾಲೂಕಿಗೆ ಜ್ಯೋತಿರ್ಲಿಂಗವು ಆಗಮಿಸುತ್ತಿದೆ. ಅದರಂತೆ ನಾಳೆ ರವಿವಾರ ಮಾರ್ಚ್-15 ರಂದು ಬೆಳಗ್ಗೆ ಗಂಗಾವತಿಗೆ ಆಗಮಿಸಲಿದೆ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಗಂಗಾವತಿ ಮುಖ್ಯ ಸಂಚಾಲಕರಾದ ರಘುನಾಥ ರಘುನಾಥ ಪವಾರ್‌ ಪ್ರಕಟಣೆಯಲ್ಲಿ ತಿಳಿಸಿದರು.

ಸನಾತನ ಧರ್ಮದ ಪ್ರಕಾರ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಾಲಯವನ್ನು ಸತ್ಯಯುಗದಲ್ಲಿ ಸೋಮ: ಅಂದರೆ ಚಂದ್ರನು ಪ್ರತಿಷ್ಠಾಪಿಸಿದನು ಮತ್ತು ಇಲ್ಲಿ ಶ್ರೀ ಕೃಷ್ಣನು ತಪಸ್ಸು ಮಾಡಿದ್ದನು ಎಂಬ ಪ್ರತೀತಿ ಇದೆ. ಈ ಮೂಲ ಜ್ಯೋತಿರ್ಲಿಂಗವು ಗಾಳಿಯಲ್ಲಿ ತೇಲುತ್ತಿತ್ತು ಎಂದು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಈ ಶಿಲೆಯ ಕೇಂದ್ರ ಭಾಗವು ಅತ್ಯಂತ ಪ್ರಬಲವಾದ ಕಾಂತೀಯ ಶಕ್ತಿಯಿಂದ ಕೂಡಿದೆ. ಕ್ರಿ.ಶ 1026ರಲ್ಲಿ ಮೊಹಮ್ಮದ್ ಘಜನಿಯು ದೇವಾಲಯದ ಮೇಲೆ ಆಕ್ರಮಣ ಮಾಡಿ ಈ ಜ್ಯೋತಿರ್ಲಿಂಗವನ್ನು ಛಿದ್ರಗೊಳಿಸಿದನು. ಶಾಶ್ವತವಾಗಿ ನಷ್ಟವಾಗಿದೆ ಎಂದುಕೊಂಡಂತಹ ಈ ಶಿವಲಿಂಗದ ಭಾಗಗಳನ್ನು ಅಗ್ನಿಹೋತ್ರಿ ಪುರೋಹಿತರು ರಹಸ್ಯವಾಗಿ ತಮ್ಮ ಬಳಿ ಸಂರಕ್ಷಿಸಿದರು. ಅವರು ಈ ಚೂರುಗಳಿಗೆ ಶಿವಲಿಂಗದ ಆಕಾರವನ್ನು ನೀಡಿದರು ಮತ್ತು ಸುಮಾರು ಸಾವಿರ ವರ್ಷಗಳ ಕಾಲ ತಲೆ-ತಲಾಂತರದಿಂದ ಇದನ್ನು ಸಂರಕ್ಷಿಸಿಕೊಂಡು ಬಂದರು.

1924ರಲ್ಲಿ ಕಂಚಿ ಶಂಕರಾಚಾರ್ಯರು ಈ ಅಗ್ನಿಹೋತ್ರಿಗಳಿಗೆ ಈ ಶಿವಲಿಂಗಗಳನ್ನು ನೂರು ವರ್ಷಗಳ ಕಾಲ ಗುಪ್ತವಾಗಿ ಸಂರಕ್ಷಿಸುವಂತೆ ತಿಳಿಸಿದರು ಮತ್ತು ಅದನ್ನು ಗುರುದೇವರಿಗೆ ನೀಡುವಂತೆ ಸೂಚಿಸಿದ್ದರು. ಅದೇ ರೀತಿ ಜನವರಿ 2025 ರಲ್ಲಿ ಅಗ್ನಿಹೋತ್ರಿಗಳು ಈ ಶಿವಲಿಂಗಗಳನ್ನು ಗುರುದೇವರಿಗೆ ಹಸ್ತಾಂತರಿಸಿದರು. ಮಹಾಶಿವರಾತ್ರಿಯಂದು ಜ್ಯೋತಿರ್ಲಿಂಗದ ಈ ಭಾಗಗಳನ್ನು ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ, ಒಂದು ಸಾವಿರ ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ವೀಕ್ಷಣೆಗೆ ಮತ್ತು ದರ್ಶನಕ್ಕೆ ಮುಕ್ತಗೊಳಿಸಲಾಯಿತು.

ಈ ಜ್ಯೋತಿರ್ಲಿಂಗವನ್ನು ಮಾರ್ಚ್‌-15 ರವಿವಾರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆರವರೆಗೆ ಹಿರೇಜಂತಕಲ್ ಪ್ರಸನ್ನ ಪಂಪಾಪತಿ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಸಾಯಂಕಾಲ 4:30 ಇಂದ 7:00 ರ ವರೆಗೆ ಶ್ರೀ ಮಲ್ಲಿಕಾರ್ಜುನ ಮಠದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನೋಂದಣಿ ಮಾಡಿಕೊಂಡಂತ ಭಕ್ತರಿಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30 ಗಂಟೆವರೆಗೆ ಸಂಕಲ್ಪ ರುದ್ರಪೂಜೆ ಮಾಡಿಸಲಾಗುವುದು. ಕಾರಣ ಗಂಗಾವತಿ ನಗರದ ಹಾಗೂ ಸುತ್ತಮುತ್ತಲಿನ ಭಕ್ತರು ಈ ಮೂಲ ಜ್ಯೋತಿರ್ಲಿಂಗ ದರ್ಶನ ಪಡೆದುಕೊಂಡು ಪುನೀತರಾಗಬೇಕೆಂದು ವಿನಂತಿಸಿದ್ದಾರೆ. https://aratt.ai/@vishwaroopa_news_blog

ಅದ್ಧೂರಿಯಾಗಿ ಜರುಗಿದ ಬೆಟ್ಟದ ಲಿಂಗೇಶ್ವರ ಜಾತ್ರಾ ಮಹೋತ್ಸವದ ಜೋಡು ರಥೋತ್ಸವ ಮತ್ತು ಸಾಮೂಹಿಕ ವಿವಾಹಗಳು.

ಗಂಗಾವತಿ: ಮಾರ್ಚ್-11 ರಂದು ತಾಲೂಕಿನ ಚಿಕ್ಕಬೆಣಕಲ್ ಗ್ರಾಮದಲ್ಲಿ 134ನೇ ಬೆಟ್ಟದ ಲಿಂಗೇಶ್ವರರ ಜಾತ್ರಾ ಮಹೋತ್ಸವ ಅಂಗವಾಗಿ ಜೋಡು ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಹಿಂದಿನ ದಿನ ಅಂದರೆ ಮಾರ್ಚ್-10 ರಂದು 134ನೇ ಪುಣ್ಯತಿಥಿಯ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿತು. ಮಾರ್ಚ್-11 ಫಾಲ್ಗುಣ ಬಹುಳ ಅಷ್ಠಮಿ ಬುಧವಾರ ಬೆಳಗಿನ ಜಾವ 5:30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ತದನಂತರ ಮಹಾಮಂಗಳಾರತಿ, 11:30 ರಿಂದ 12:30 ರವರೆಗೆ ಸಲ್ಲುವ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ 11 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಕಾರ್ಯಕ್ರಮ ಜರುಗಿತು.

 

ಈ ಉತ್ಸವದ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಶ್ರೀ ಮ.ನಿ.ಪ್ರ ಅಭಿನವ ಪ್ರಭು ಮಹಾಸ್ವಾಮಿಗಳು, ಶಾ.ಗ  ಹೂವಿನಹಡಗಲಿ ಶ್ರೀ ಮ.ನಿ.ಪ್ರ. ಹಿರೇಶಾಂತವೀರ ಮಹಾಸ್ವಾಮಿಗಳು, ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾವನೂರಿನ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸುಳೇಕಲ್ ಬೃಹನ್ಮಠದ ಶ್ರೀಶೀಶ್ರೀ ಭುವನೇಶ್ವರಯ್ಯ ತಾತನವರು, ಉಡುಮಕಲ್ ಹಿರೇಮಠದ ಶ್ರೀ ವೀರಬಸಯ್ಯ ಮಹಾಸ್ವಾಮಿಗಳು ವಹಿಸಿದ್ದರು.

 

ಮುಖ್ಯ ಅತಿಥಿಗಳಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಗಾಲಿ ಜನಾರ್ಧನರೆಡ್ಡಿ , ಮಾಜಿ ವಿಧಾನ ಪರಿಷತ್‌ ಸದಸ್ಯರಾದ  ಹೆಚ್.ಆರ್. ಶ್ರೀನಾಥ್‌, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು ಪಾಲ್ಗೊಂಡಿದ್ದರು.

 

ಸಂಜೆ 5:00 ಗಂಟೆಗೆ ಸರಿಯಾಗಿ ಶ್ರೀ ಬೆಟ್ಟದೇಶ್ವರ ಹಾಗೂ ಶ್ರೀ ಲಿಂಗೇಶ್ವರರ ಜೋಡು ರಥೋತ್ಸವವು ಭಕ್ತರ ಸಮೂಹದಲ್ಲಿ ಅದ್ಧೂರಿಯಾಗಿ ಜರುಗಿತು.

ಅದೇರೀತಿ ಇಂದು ಸಾಯಂಕಾಲ ಕಡುಬಿನ ಕಾಳಗ ನಡೆಯಿತು. https://aratt.ai/@vishwaroopa_news_blog

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಮಹಿಳೆಯರ ಚಿತ್ರಕಲಾ ಪ್ರದರ್ಶನ

ಹಾಸನ: ಹಾಸನಾoಬ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಇವರು ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಸನದ ಮಹಿಳಾ ಚಿತ್ರ ಕಲಾವಿದೆಯರು ರೂಪಿಸಿರುವ ಕಲಾಕೃತಿಗಳು ಪ್ರದರ್ಶನಗೊಂಡವು.

ಪ್ರಕೃತಿಯಿಂದ ಹಿಡಿದು ಮಹಿಳೆಯರ, ಮಕ್ಕಳ ಚಿತ್ರಗಳು ಪ್ರಕೃತಿಯ ಮಡಿಲಲ್ಲಿ ಬುದ್ಧನ ಚಿತ್ರ, ಪ್ರಕೃತಿಯಲ್ಲಿ ಹಾವಿನ ಜೀವನದ ಹಾದಿ, ಹೂಗಳಲ್ಲಿ ತಾವರೆ, ಗುಲಾಬಿ ಚಿತ್ರಕಲೆಗಳು. ಕೃಷ್ಣ ಮತ್ತು ಹಡಗು,
ರಾಧಾಕೃಷ್ಣರ ಪ್ರೀತಿಯ ನೋಟ, ಕ್ರಿಯೇಟಿವ್ ವರ್ಕ್ಸ್. ಮಹಿಳಾ ದೌರ್ಜನ್ಯ ವಿರೋಧಿ ಚಿತ್ರಗಳು ಹೀಗೆ ಹಲವಾರು ವೈವಿಧ್ಯ ಚಿತ್ರಗಳು ಮಹಿಳೆಯರ ಕೈಚಳಕದಲ್ಲಿ ರೂಪು ತೆಳೆದಿವೆ.

ಎರಡು ದಿನಗಳು ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಟ್ಟು ಅವರ ಪ್ರತಿಭೆಯನ್ನು ಗುರುತಿಸುವ ಪ್ರಯತ್ನ ಶ್ಲಾಘನೀಯ. ಈಗಿನ ಜಗತ್ತಿನಲ್ಲಿ ಎಲ್ಲಾ ಹೆಣ್ಣು ಮಕ್ಕಳು ಸಾಧನೆ ಮಾಡುವಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. ತಮ್ಮ ಸಂಸಾರದ ನೌಕೆ ಮತ್ತು ಅವರವರ ವೈಯಕ್ತಿಕ ಬದುಕಿನ ಕೆಲಸಗಳನ್ನು ಮಾಡಿಕೊಂಡು ಅವರು ತಮ್ಮ ಸಾಧನೆ ಮಾಡುವಲ್ಲಿ ಗಮನ ವಹಿಸುತ್ತಾ ಬಂದಿದ್ದಾರೆ.

ಹಾಸನ ಜಿಲ್ಲೆ ಕಲೆಯ ಬೀಡು ಎಂದು ಪ್ರಸಿದ್ಧಿ ಪಡೆದಿದೆ. ಚಿತ್ರಕಲಾ ಪ್ರದಶ೯ನದಲ್ಲಿ ಭಾಗವಹಿಸಿದ ಕಲಾವಿದೆಯರೆಂದರೆ ಶೋಭಾ ಆರ್., ಸೌಮ್ಯ ಎಸ್., ಅಶ್ವಿನಿ ಹೆಚ್.ವಿ., ಲತಾ ಎಲ್‌.ಜಿ., ಹೇಮಲತಾ, ಮಂಜುಳಾ, ಚಂದ್ರಪ್ರಭ, ಅಕ್ಷರ, ಹೇಮಲತಾ ಆರ್., ಹಂಸವೇಣಿ, ವೃತಿಕ ಕುಮಾರಿ, ಸ್ಪೂರ್ತಿ, ಕೋಮಲ, ಪ್ರಕೃತಿ ಜಿ.ಆರ್., ಭೂಮಿಕ, ನಂದಿನಿ.

ಅಚ್ಚುಕಟ್ಟಾಗಿ ಚಿತ್ರಕಲೆ ಪ್ರದರ್ಶಿಸಲು ಮಹಿಳೆಯರಿಗೆ ಬೆಂಬಲ ನೀಡಿ ಮಾರ್ಗದರ್ಶನ ನೀಡಿದವರು ಹಿರಿಯ ಕಲಾವಿದರಾದ ಹಾಸನದ ಬಿ.ಎಸ್. ದೇಸಾಯಿ, ಚನ್ನರಾಯಪಟ್ಟಣದ ಪ್ರಭಾಕರ್ ಎಸ್.ವೈ., ಸುರೇಶ್ ಅತ್ನಿ ಮತ್ತು ಶಿವಕುಮಾರ್ ಆರ್., ಕಲಾವಿದೆಯರಿಗೆ ಸ್ಪೂರ್ತಿ ನೀಡಿ ಅಭಿನಂದಿಸಲು ಬಂದು ಮಾರ್ಗದರ್ಶನ ಮಾಡಿದವರು ಗೊರೂರು ಆನಂತರಾಜು ಸಾಹಿತಿಗಳು, ಹಾಸನ ಮತ್ತು ಕೆ.ಎನ್. ಶಂಕರಪ್ಪ ಕಲ್ಯಾಡಿ
ಕಾರ್ಯದರ್ಶಿಗಳು, ಸಂಸ್ಕಾರ ಭಾರತಿ ಮತ್ತು ಚಿತ್ರಕಲಾವಿದರು.

ಹೊರರಾಜ್ಯ ಮಹಿಳೆಯರ ಸಹಕಾರದಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಉತ್ತಮ ಕಾರ್ಯಕ್ರಮವಾಗಿತ್ತು.  https://aratt.ai/@vishwaroopa_news_blog