ಪಾಲಕಿ ಉತ್ಸವ ಹಾಗೂ ತೊಟ್ಟಿಲು ಉತ್ಸವದೊಂದಿಗೆ ಮದ್ವ ಜಯಂತಿ ಸಂಪನ್ನ

ಗಂಗಾವತಿ.:ನಗರದ ಯೋಗೀಶ್ವರ ಯಾಜ್ಞವಲ್ಕ್ಯಮಂದಿರದಲ್ಲಿ ಗುರುವಾರದಂದು ಜರುಗಿದ ಮಧ್ವ ನವಮಿ ಉತ್ಸವ ಪಾಲಕಿ ಹಾಗೂ ತೊಟ್ಟಿಲು ಉತ್ಸವದೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ. ವೇದಮೂರ್ತಿ ಪ್ರದೀಪ ಆಚಾರ್ ಅವರು ವೆಂಕಟೇಶ್ ಲೆಕ್ಕಿಹಾಳ ದಂಪತಿಗಳಿಗೆ ಮಹಾಸಂಕಲ್ಪ, ಅಷ್ಟವಧಾನ ಸೇವೆ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಸಾಂಗತವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಭಜನೆ ನೃತ್ಯಗಳಿಂದ ತಮ್ಮ ಭಕ್ತಿ ಭಾವವನ್ನು ಸಮರ್ಪಿಸಿದರು.

ದೇವಸ್ಥಾನ ಸಮಿತಿಯ ಅಧ್ಯಕ್ಷ ಮುರುಳಿಧರ್ ಕುಲಕರ್ಣಿ. ಸತೀಶ್. ಪ್ರಭಾಕರ್ ದಿನ್ನಿ. ತಿರುಮಲ್ ರಾವ್ ಆಲಂಪಲ್ಲಿ, ರಾಘವೇಂದ್ರ ಮೇಗೂರು ಲಕ್ಷ್ಮಣ ಜಮಖಂಡಿ. ಕೋಮಲಾಪುರ ಪ್ರಹ್ಲಾದ್ ಸೇರಿದಂತೆ ಮಹಿಳಾ ಭಜನಾ ಮಂಡಳಿಯ ಸದಸ್ಯರು. ಭಕ್ತರು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ನೆಕ್ಕಂಟಿ ಸೂರಿಬಾಬು

ಗಂಗಾವತಿ: ಫೆಬ್ರವರಿ-೭ ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜ್ ಗಂಗಾವತಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮ ಉದ್ಘಾಟನೆ ಮಾಡಿ, ಉದ್ಘಾಟನಾ ಭಾಷಣ ಮಾಡಿದ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬುರವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸನ್ನು ಕಾಣಲು ಅನುಸರಿಸಬೇಕಾದ ಕ್ರಮಗಳ ಕುರಿತು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸವೇ ಅಸ್ತ್ರ, ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು. ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು. ನಾವು ಓದಲು ಬಂದಿದ್ದೇನೆ ಓದಬೇಕು ಎನ್ನುವ ಪ್ರಜ್ಞೆಯೊಂದಿಗೆ ನಿರಂತರ ಅಧ್ಯಯನ ನಡೆಸಿದಲ್ಲಿ ಯಶಸ್ಸಿನ ದಾರಿ ಸುಗಮವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಜೊತೆಗೆ ಜೀವನ ನಡೆಸಲು ಸ್ವ ಸಹಾಯಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಕಲಿಯುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಕೆಲಸಕ್ಕೆ ತನ್ನದೇ ಆದ ಗೌರವವಿದೆ, ಮಾಡುವ ಕಾರ್ಯಗಳಲ್ಲಿ ಶ್ರೇಷ್ಠ, ಕನಿಷ್ಠ, ಭಾವನೆಗಳನ್ನು ಇಟ್ಟುಕೊಳ್ಳಬಾರದು, ಸರ್ಕಾರಿ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರು ಮಾತ್ರ ಆರ್ಥಿಕವಾಗಿ ಬಡವರೇ ಹೊರತು ವಿದ್ಯಾರ್ಥಿಗಳು ಅಲ್ಲ. ಬಡವರು ಅಥವಾ ಶ್ರೀಮಂತರಾಗುವುದು ನಿಮ್ಮ ಕೈಯಲ್ಲಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಮುಂದಿನ ಶೈಕ್ಷಣಿಕ ವರ್ಷ ಸಂಸ್ಥೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಉತ್ತಮ ಗುಣಮಟ್ಟದ ೧೦೦ ಚೇರ್‌ಗಳನ್ನು ವಿದ್ಯಾನಿಕೇತನ ಸಂಸ್ಥೆಯಿಂದ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ ನೆರವೇರಿಸಿದರು. ಸ್ವಾಗತವನ್ನು ಈಶ್ವರಪ್ಪ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಮದ್ಯದಲ್ಲಿ ಬಿಡುಗಡೆಯಾದವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಬಸಪ್ಪ ನಾಗೋಲಿ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಸೋಮಶೇಖರ್ ಗೌಡ, ಅಜಗರ ಪಾಶ, ಸಾವಿತ್ರಿ, ಲಕ್ಷ್ಮಿ ಜೆ. ರಮಾ, ಲಲಿತಾ ಕಂದಗಲ್, ನಾಗಪ್ಪ ಎಂ., ಚಿದಾ

ನಂದ ಮೇಟಿ, ಶ್ರೀದೇವಿ, ರುದ್ರೇಶ್ ತಬಾಲಿ, ಹಾಗೂ ಅತಿಥಿ ಉಪನ್ಯಾಸಕರಾದ ಶ್ರೀಮತಿ ಕನಕಮ್ಮ, ಡಾ. ರವಿಚಂದ್ರ, ನಿರುಪಾದಿ ಉಪಸ್ಥಿತರಿದ್ದರು.

ಕುಮಾರಸ್ವಾಮಿ ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಮಹೇಶ್ ವಂದನಾರ್ಪಣೆ ಮಾಡಿದರು.

Read More ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ನೆಕ್ಕಂಟಿ ಸೂರಿಬಾಬು

ಶ್ರೀ ಪ್ರಸನ್ನ ಪಂಪ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದಲ್ಲಿ ಅನ್ನ ಸಂತರ್ಪಣೆ.


ಗಂಗಾವತಿ. ಇತಿಹಾಸ ಪ್ರಸಿದ್ಧ ಹಿರೇ ಜಂತಕಲ್ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಗಂಗಾವತಿ ನಗರ ಸೇರಿದಂತೆ ಜಾತ್ರೆಗೆ ಆಗಮಿಸುವ ಸಕಲ ಭಕ್ತಾದಿಗಳಿಗೆ ಅನ್ನಸಂತರ್ಪಡೆಯನ್ನು ಆಯೋಜಿಸಲಾಗಿದೆ ಎಂದು. ನಗರಸಭೆಯ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹೇಳಿದರು.

ಅವರು ಮಾಧ್ಯಮದೊಂದಿಗೆ ಮಾತನಾಡಿ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ಹಂಪಿಯಲ್ಲಿರುವ ವಿರೂಪಾಕ್ಷೇಶ್ವರ ದೇವಸ್ಥಾನದಷ್ಟೇ ಅತ್ಯಂತ ಶಕ್ತಿ ಪೀಠವಾಗಿ ಕಂಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಆರಂಭಗೊಂಡ ರಥೋತ್ಸವ ಹಾಗೂ ಎರಡು ದಿನಗಳ ಕಾಲ ಜರುಗಲಿರುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಆಗಮಿಸುವ. ಸರ್ವರಿಗೆ. ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬುಧವಾರದ ಜನಪದ ಗೀತೆಗಳು ಕಾರ್ಯಕ್ರಮ ಸೇರಿದಂತೆ ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ಪ್ರತಿದಿನ ಸಂಜೆ 7:00 ಯಿಂದ ರಾತ್ರಿ 11:30ವರೆಗೆ ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು. ಕಲೆ ಸಾಹಿತ್ಯ ಸಂಸ್ಕೃತಿ. ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಈಡಿಗರ ಪರಮೇಶ್ವರ, ಜಿ ಆರ್ ಎಸ್ ಸತ್ಯಕುಮಾರ್, ಉಪ್ಪಾರ್ ಚಂದ್ರಶೇಖರ್, ವೈ ಸೋಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದು. ದಾಸೋಹದ ನೇತೃತ್ವವನ್ನು ಪ್ರಥಮ ದಿನದಂದು ಹೆಚ್ ಜಿ ರಾಮುಲು ಕುಟುಂಬಸ್ಥರು ಬುಧವಾರದಂದು ಜಿ ಆರ್ ಎಸ್. ಕುಟುಂಬಸ್ಥರು ಹಾಗೂ. ಗುರುವಾರದಂದು ಗಾಣಿಗ ಸಮಾಜ ಬಾಂಧವರು ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ. ಮುಖಂಡರು ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು