ಪರಶುರಾಮರವರ ಕರೋಕೆಯಲ್ಲಿ ಪುನೀತ್‌ ರಾಜಕುಮಾರ್‌ ಜನ್ಮದಿನಾಚರಣೆ

ಗಂಗಾವತಿ: ಕನ್ನಡ ನಾಡಿನ ರಾಜಕುಮಾರ, ಡಾ. ಪುನೀತ್‌ ರಾಜಕುಮಾರ ರವರು ಒಬ್ಬ ನಟನಾಗಿ ಮಾತ್ರವಲ್ಲದೇ ಸಾಮಾಜಿಕ ಸೇವೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿ ಮಾದರಿಯಾಗಿದ್ದಾರೆ. ಯುವಪೀಳಿಗೆ ಯುವಕರು ಅವರನ್ನು ಮಾರ್ಗದರ್ಶನವಾಗಿಟ್ಟುಕೊಂಡು ಸಮಾಜ ಸೇವೆಯಲ್ಲಿ ತೊಡಗಲಿ ಎಂದು ಹವ್ಯಾಸಿ ಹಾಡುಗಾರರಾದ ಪರಶುರಾಮ ದೇವರಮನೆ ಹೇಳಿದರು.

ಅವರು ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಸಂಗೀತ ಸ್ವರಾಂಜಲಿ ಕರೋಕೆ ಕಲಾ ತಂಡದ ವತಿಯಿಂದ ಏರ್ಪಡಿಸಿದ್ದ ಪುನೀತ್ ರಾಜಕುಮಾರ ಅವರ 50ನೇ ಹುಟ್ಟು ಹಬ್ಬದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವ ಕಾರ್ಯಕ್ರಮದಲ್ಲಿ ತಿಳಿಸಿದರು. ಅವರು ಕಿಷ್ಕಿಂದಾ ಅಂಜನಾದ್ರಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಈ ಭಾಗದಲ್ಲಿ ಸಿನೆಮಾ ಶೂಟಿಂಗ್ ಸಂದರ್ಭದಲ್ಲಿ ಆನೆಗೊಂದಿ ಭಾಗದಲ್ಲಿ ಸುತ್ತಾಟ ಮಾಡಿ ಜನರೊಂದಿಗೆ ಬೆರೆಯುತ್ತಿದ್ದರು. ಇಲ್ಲಿಯ ಶಾಲೆಗಳಿಗೆ ಕಂಪ್ಯೂಟರ್, ವಿಜ್ಞಾನ ವಿಷಯಗಳ ಸಲಕರಣೆಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಶಿಕ್ಷಣ ಸೇವೆ ಮಾಡಿದ್ದಾರೆ. ಇದನ್ನು ನಮ್ಮ ಯುವಕರು ರೂಢಿಸಿಕೊಂಡು ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕೆಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಕರೋಕೆ ಕಲಾವಿದರಾದ ಅಂಬಿಕಾ, ಸುಧಾ ಆನೆಗೊಂದಿ, ವಿಜಯಲಕ್ಷ್ಮಿ, ಗಿರಿಜಮ್ಮ, ಬೆಂಗಳೂರು, ತಟ್ಟಿ ಶಾಮಣ್ಣ, ತಿಪ್ಪೇಸ್ವಾಮಿ ಹೊಸಮಠ, ಪಪ್ತಿ ವಿರೇಶ, ಧೂಳು ವೆಂಕಟೇಶ, ಛತ್ರಪ್ಪ ತಂಬೂರಿ, ಐಲಿ ರಮೇಶ, ಕುರುಗೋಡು ವೆಂಕಟೇಶ, ಕೃಷ್ಣವೇಣಿ ಅನೇಕರಿದ್ದರು.

ರಂಗಸಿರಿ ಮತ್ತು ನಾಲ್ಕು ಕವನ ಸಂಕಲನಗಳು ಲೋಕಾರ್ಪಣಿ

ಕರ್ನಾಟಕ ರಾಜ್ಯ ಬರಹಗಾರರ ಸಂಘದ 5ನೇ ವರ್ಷದ ವಾರ್ಷಿಕೊತ್ಸವ ಪ್ರಯುಕ್ತ ನಡೆದ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ಹಾಸನದ ಸಾಹಿತಿ ನಾಟಕಕಾರ ಗೊರೂರು ಅನಂತರಾಜು ಅವರ ರಂಗಭೂಮಿ ಕುರಿತಾದ ಪುಸ್ತಕ ರಂಗ ಸಿರಿ ಕೃತಿಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರು ಮಧು ನಾಯ್ಕ ಲಂಬಾಣಿ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆದ ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ ಸಮಾರ೦ಭದಲ್ಲಿ ಲೋಕರ್ಪಣೆ ಮಾಡಿ ಮಾತನಾಡಿ ಈಗಾಗಲೇ 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಗೊರೂರು ಅನಂತರಾಜು ಹಲವಾರು ಉದಯೋನ್ಮುಖ ಕವಿ ಸಾಹಿತಿಗಳ ಕೃತಿಗಳ ವಿಮರ್ಶೆ ಮಾಡಿ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ. ರಂಗಭೂಮಿಯಲ್ಲೂ ಸಾಕಷ್ಟು ಕ್ರಿಯಶೀಲರಾಗಿ ರಂಗದ ಮೇಲೆ ಪ್ರದರ್ಶಿತ ನಾಟಕಗಳನ್ನು ನೋಡಿ ವಿಮರ್ಶೆಯನ್ನು ಮಾಡಿ ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನನ್ನ ಒಂದು ಮಿನಿ ಕಾದಂಬರಿ ಸುಡುಗಾಡು ಕಥೆ ನಾಟಕವಾಗಿ ರೂಪಾಂತರಿಸಿದ್ದಾರೆ. ಇದನ್ನು ರಂಗದ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಇದೇ ವೇದಿಕೆಯಲ್ಲಿ ಆನಂದ ಕುಮಾರ್ ಜಿ. ವಿ. ಯಾದವ್ ಅವರ ಭಾವದ ಬೆಳಕು, ಕವನ ಸಂಕಲನ, ನಾಗರಾಜ ಟಿ.ವಿ. ಅವರ ಕವನ ಸಂಕಲನ ಮೂಕ ಸಾಕ್ಷಿಗಳು, ವೆಂಕಣ್ಣ ಮಾಳೆಕೊಪ್ಪ ಅವರ ಧರಣಿ ಕವನ ಸಂಕಲನ, ಹಾಲೇಶ್ ಹಕ್ಕಂಡಿ ಅವರ ಅಂಬರ ಮಣಿಯ ಶೃಂಗಾರ ಕವನ ಸಂಕಲನ ಮತ್ತು ಪ್ರಮೀಳಾ ಪಾಟೀಲ ಎಸ್ ಬಿಬ್ಬಳ್ಳಿ ಅವರ ಬೆಳದಿಂಗಳು ಕವನ ಸ೦ಕಲನ ಲೋಕಾರ್ಪಣೆಗೊಂಡವು