ಗಂಗಾವತಿ: ಕನ್ನಡ ನಾಡಿನ ರಾಜಕುಮಾರ, ಡಾ. ಪುನೀತ್ ರಾಜಕುಮಾರ ರವರು ಒಬ್ಬ ನಟನಾಗಿ ಮಾತ್ರವಲ್ಲದೇ ಸಾಮಾಜಿಕ ಸೇವೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿ ಮಾದರಿಯಾಗಿದ್ದಾರೆ. ಯುವಪೀಳಿಗೆ ಯುವಕರು ಅವರನ್ನು ಮಾರ್ಗದರ್ಶನವಾಗಿಟ್ಟುಕೊಂಡು ಸಮಾಜ ಸೇವೆಯಲ್ಲಿ ತೊಡಗಲಿ ಎಂದು ಹವ್ಯಾಸಿ ಹಾಡುಗಾರರಾದ ಪರಶುರಾಮ ದೇವರಮನೆ ಹೇಳಿದರು.
ಅವರು ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಸಂಗೀತ ಸ್ವರಾಂಜಲಿ ಕರೋಕೆ ಕಲಾ ತಂಡದ ವತಿಯಿಂದ ಏರ್ಪಡಿಸಿದ್ದ ಪುನೀತ್ ರಾಜಕುಮಾರ ಅವರ 50ನೇ ಹುಟ್ಟು ಹಬ್ಬದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವ ಕಾರ್ಯಕ್ರಮದಲ್ಲಿ ತಿಳಿಸಿದರು. ಅವರು ಕಿಷ್ಕಿಂದಾ ಅಂಜನಾದ್ರಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಈ ಭಾಗದಲ್ಲಿ ಸಿನೆಮಾ ಶೂಟಿಂಗ್ ಸಂದರ್ಭದಲ್ಲಿ ಆನೆಗೊಂದಿ ಭಾಗದಲ್ಲಿ ಸುತ್ತಾಟ ಮಾಡಿ ಜನರೊಂದಿಗೆ ಬೆರೆಯುತ್ತಿದ್ದರು. ಇಲ್ಲಿಯ ಶಾಲೆಗಳಿಗೆ ಕಂಪ್ಯೂಟರ್, ವಿಜ್ಞಾನ ವಿಷಯಗಳ ಸಲಕರಣೆಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಶಿಕ್ಷಣ ಸೇವೆ ಮಾಡಿದ್ದಾರೆ. ಇದನ್ನು ನಮ್ಮ ಯುವಕರು ರೂಢಿಸಿಕೊಂಡು ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕೆಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಕರೋಕೆ ಕಲಾವಿದರಾದ ಅಂಬಿಕಾ, ಸುಧಾ ಆನೆಗೊಂದಿ, ವಿಜಯಲಕ್ಷ್ಮಿ, ಗಿರಿಜಮ್ಮ, ಬೆಂಗಳೂರು, ತಟ್ಟಿ ಶಾಮಣ್ಣ, ತಿಪ್ಪೇಸ್ವಾಮಿ ಹೊಸಮಠ, ಪಪ್ತಿ ವಿರೇಶ, ಧೂಳು ವೆಂಕಟೇಶ, ಛತ್ರಪ್ಪ ತಂಬೂರಿ, ಐಲಿ ರಮೇಶ, ಕುರುಗೋಡು ವೆಂಕಟೇಶ, ಕೃಷ್ಣವೇಣಿ ಅನೇಕರಿದ್ದರು.