ಭಾರತೀಯ ಪ್ರಜಾಸೇನೆಯ ನೂತನ ಜಿಲ್ಲಾಧ್ಯಕ್ಷರಾಗಿ ನರಸಿಂಹಲು ಚಿಂತಲಕುಂಟ ನೇಮಕ-ಪಂಪಾಪತಿ ಸಿದ್ದಾಪುರ

ಗಂಗಾವತಿ: ಭಾರತೀಯ ಪ್ರಜಾ ಸೇನೆಯ ಸಂಸ್ಥಾಪಕರು ಮಂಜುನಾಥ್ ಆರ್., ರಾಜ್ಯ ಅಧ್ಯಕ್ಷರಾದ ಟಿ ವೇಣುಗೋಪಾಲ್ ಅವರ ಆದೇಶದ ಮೇರೆಗೆ ಜೂನ್-೦೪ ಬುಧವಾರ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಂಪಾಪತಿ ಸಿದ್ದಾಪುರ, ವಿಭಾಗೀಯ ಕಾರ್ಯದರ್ಶಿ ಹುಲುಗಪ್ಪ ಕೊಜ್ಜಿಯವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ನರಸಿಂಹಲು ಚಿಂತಲಕುಂಟ ಅವರನ್ನು ನೇಮಕ ಮಾಡಲಾಗಿದೆ.

ನೇಮಕಾತಿ ಆದೇಶ ಪತ್ರ ನೀಡಿ ಮಾತನಾಡಿದ ಪಂಪಾಪತಿ ಸಿದ್ದಾಪುರ ಅವರು, ಕೊಪ್ಪಳ ಜಿಲ್ಲಾ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬಡವರ, ದೀನ ದಲಿತರ, ಅನ್ಯಾಯಕ್ಕೊಳಗಾದವರ, ನೊಂದವರ, ಶೋಷಿತರ ಪರ ಸಾಮಾಜಿಕ ಹೋರಾಟಗಳನ್ನು ಮಾಡುತ್ತಾ ಸಂಘಟನೆಯ ಶಕ್ತಿ ಮತ್ತು ಕೀರ್ತಿಯನ್ನು ಹೆಚ್ಚಿಸುವಂತೆ ಆದೇಶಿಸಿದರು.

ಇದೇ ಸಂದರ್ಭದಲ್ಲಿ ಸಂಘಟನೆಯ ವಿಭಾಗಿಯ ಸಹಕಾರ್ಯದರ್ಶಿ ಅಬೂಬಕರ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸೋಮಪ್ಪ ಅಕ್ಕಿರೊಟ್ಟಿ, ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷರಾದ ಹನುಮಂತಪ್ಪ ಹೊಸಪೇಟೆ, ಜಿಲ್ಲಾ ಸಹಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಯುವ ಘಟಕ ಉಪಾಧ್ಯಕ್ಷ ಅಯ್ಯಪ್ಪ, ಗಂಗಾವತಿ ತಾಲೂಕ ಅಧ್ಯಕ್ಷರು ಕೃಷ್ಣ ಹೊಸಳ್ಳಿ, ಗಂಗಾವತಿ ತಾಲೂಕು ಸಂಘಟನಾ ಕಾರ್ಯದರ್ಶಿ ಪರಶುರಾಮ್ ಅಕ್ಕಿರೊಟ್ಟಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.

 

ಗಂಗಾವತಿ ತಾಲೂಕು ಹಡಪದ ಅಪ್ಪಣ್ಣ ಸಮಾಜದ ನೂತನ ಅಧ್ಯಕ್ಷರಾಗಿ ನಿರುಪಾದಿ ಕೇಸರಹಟ್ಟಿ ನೇಮಕ

ಗಂಗಾವತಿ: ಗಂಗಾವತಿ ತಾಲೂಕು ಕಾರ್ಯಕಾರಣಿ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಗಂಗಾವತಿ ತಾಲೂಕು ನೂತನ ಅಧ್ಯಕ್ಷರನ್ನಾಗಿ ನಿರುಪಾದಿ ಕೇಸರಹಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.

ಈ ನೇಮಕಾತಿಯು ಜೂನ್-೦೩ ಮಂಗಳವಾರ ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಉಳ್ಳಿಡಗ್ಗಿಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಹನುಮಂತಪ್ಪ ಸರಿಗಮ ಇವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಭೀಮನಗೌಡ, ಪ್ರಧಾನ ಕಾರ್ಯದರ್ಶಿಗಳಾದ ಶಿವಣ್ಣ ನೀಲಕಮಲ್, ಶರಣಪ್ಪ ಬಂಗಾರದ ಅಂಗಡಿ, ಶರಣಪ್ಪ ಡಿಸ್ಕೋ, ಬಸವರಾಜ್ ಎಸ್.ಬಿ ನಗರ್, ವೀರಭದ್ರಪ್ಪ ಅಮಾತೆಪ್ಪ, ಪಂಪಾಪತಿ ಹೊಸಳ್ಳಿ, ಮಂಜುನಾಥ ಸೋಮಸಾಗರ, ನಾಗರಾಜ ಬೊಮ್ನಾಳ, ಬಸವರಾಜ ಬುನ್ನಟ್ಟಿ, ಕಳಕಪ್ಪ ಮತ್ತು ರಮೇಶ್ ಮೆಹಬೂಬ್ ನಗರ, ವೀರೇಶ್ ಸರಿಗಮ, ಗವಿಸಿದ್ದಪ್ಪ ಇವರುಗಳು ಉಪಸ್ಥಿತರಿದ್ದರು.