ಲಿಟಲ್ ಹಾರ್ಟ್ಸ್‌ ಸ್ಕೂಲ್‌ ವಿದ್ಯಾರ್ಥಿ ಚದುರಂಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಗಂಗಾವತಿ ತಾಲೂಕಾ ಮಟ್ಟದ ೧೪ ವರ್ಷದೊಳಗಿನ ಬಾಲಕರ ಚದುರಂಗ ಸ್ಪರ್ಧೆಯನ್ನು ಆಯೋಸಿದೆ.

ಲಿಟಲ್‌ ಹಾರ್ಟ್ಸ್‌ ಸ್ಕೂಲ್ನ ವಿದ್ಯಾರ್ಥಿ ಪ್ರಣವ್‌ ಆಶ್ರೀತ ಪ್ರಥಮ ಸ್ಥಾನ ಗಳಿಸಿದ್ದಾನೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಗೌರವ ತಂದಿದ್ದಾನೆ.

ವಿದ್ಯಾರ್ಥಿಯ ಈ ಸಾಧನೆಯನ್ನು ಶಾಲೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ, ಮುಖ್ಯೋಪಾಧ್ಯಾಯಿನಿ ಪ್ರಿಯಾಕುಮಾರಿ ಮತ್ತು ಇತರೆ ಶಿಕ್ಷಕರು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳವರ ಭವ್ಯ ರಥೋತ್ಸವ….

ಗಂಗಾವತಿಯ 12 ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಕಲಿಯುಗದ ಕಾಮಧೇನು ಕಲ್ಪವೃಕ್ಷ ಮಂತ್ರಾಲಯದ ಶ್ರೀ ರಾಘವೇಂದ್ರ ಮಹಾಸ್ವಾಮಿಗಳವರ 354ನೆಯ ಆರಾಧನಾ ಮಹೋತ್ಸವದ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಮಂಗಳವಾರದಂದು ಜರುಗಿತು.

ಶ್ರೀಮಠದ ಆವರಣದಿಂದ ಹೊರಟ ರಥೋತ್ಸವ ಶ್ರೀ ನಗರೇಶ್ವರ ದೇವಸ್ಥಾನದವರೆಗೆ ಆಗಮಿಸಿ ಮರಳಿತು.

ಈ ಸಂದರ್ಭದಲ್ಲಿ ರಾಜಮಾರ್ಗ ಉದ್ದಕ್ಕೂ ಭಕ್ತರು ಉತ್ತತ್ತಿ, ನಾಣ್ಯಗಳನ್ನು ಸಮರ್ಪಿಸಿ ಆರತಿಯನ್ನು ಬೆಳಗಿ ತಮ್ಮ ಭಕ್ತಿ ಭಾವವನ್ನು ವ್ಯಕ್ತಪಡಿಸಿದರು.

ರಥೋತ್ಸವದ ರಾಜಮಾರ್ಗದ ಉದ್ದಕ್ಕೂ ವೇದ ಮಂತ್ರ ಘೋಷ, ಭಜನೆ, ನೃತ್ಯ ಗಳಿಂದ ಜನರಲ್ಲಿ ಭಕ್ತಿಭಾವ ಮೂಡಿಸುವಲ್ಲಿ ಸಫಲತೆಗೊಂಡಿತು.