ಕರ್ನಾಟಕ ರಾಜ್ಯ ಬರಹಗಾರರ ಸಂಘದ ಹಾಸನ ಜಿಲ್ಲಾ ಘಟಕದ ಸಂಚಾಲಕರಾಗಿ ಶ್ರೀಮತಿ ಇಂದಿರಾ ಲೋಕೇಶ್ ಆಯ್ಕೆ.

ಹಾಸನ: ಕರ್ನಾಟಕ ರಾಜ್ಯ ಬರಹಗಾರರ ಸಂಘವು ಒಂದು ನೋಂದಾಯಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಕೇಂದ್ರ ಕಛೇರಿ ಹೂವಿನ ಹಡಗಲಿಯಾಗಿದ್ದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು, ತಾಲ್ಲೂಕು ಘಟಕಗಳನ್ನು ಹೊಂದಿದೆ. ಅಲ್ಲದೇ ಹೊರ ರಾಜ್ಯದಲ್ಲೂ ತನ್ನ ಘಟಕಗಳನ್ನು ವಿಸ್ತರಿಸಿಕೊಂಡು ಈಗಾಗಲೇ ಹಲವಾರು ಸಾಹಿತ್ಯ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಹಾಸನ ಜಿಲ್ಲಾ ಘಟಕವು ರಾಜ್ಯದಲ್ಲೆ ಅತ್ಯುತ್ತಮವಾದ ನಾಡು ನುಡಿ ಕಲೆ ಸಾಹಿತ್ಯ ಕವಿ ಕಾವ್ಯ ಗಾಯನ ಕಲಾ ಕುಂಚ ಹೀಗೆ ವಿಭಿನ್ನ ಕಾರ್ಯಕ್ರಮಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಲವಾರು ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿಗಳನ್ನು ನೀಡುತ್ತಾ ಎಲೆಮರೆಕಾಯಿಯಂತಿರುವ ನೂರಾರು ಪ್ರತಿಭೆಗಳನ್ನು ಗುರುತಿಸುತ್ತಾ ಬಂದಿದೆ.

ಪ್ರಸ್ತುತ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹಾಸನ ಜಿಲ್ಲಾ ಘಟಕದ ಸಂಚಾಲಕರಾನ್ನಾಗಿ ನೇಮಿಸಿ ರಾಜ್ಯಾಧ್ಯಕ್ಷರಾದ ಶ್ರೀ ಮಧುನಾಯ್ಕ ಲಂಬಾಣಿ ಅವರು ಅನುಮೋದನೆ ಮಾಡಿದ್ದಾರೆ. ಇಂದಿರಾ ಲೋಕೇಶ್ ರವರು ಸರಕಾರಿ ಪ್ರೌಢಶಾಲೆ ಬೆಳಗೋಡು ಸಕಲೇಶಪುರ ತಾಲೂಕು ಹಿಂದಿ ಭಾಷಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಹವ್ಯಾಸ ಕವನ, ಕಥೆ, ಲೇಖನ ಹಾಗೂ ಪ್ರಬಂಧಗಳ ರಚನೆ ಆಗಿರುತ್ತದೆ. ಜಿಲ್ಲಾ ಮಟ್ಟದ ಕವಿ ವಿಭೂಷಣ, ರಾಜ್ಯ ಮಟ್ಟದ ಕನ್ನಡ ರತ್ನ, ರಾಜ್ಯಮಟ್ಟದ ಕವಿರತ್ನ, ರಾಜ್ಯ ಮಟ್ಟದ ಕರುನಾಡು ಸಿರಿ ಸಂಪದ ಸಾಹಿತ್ಯ ಸೇವಾ ಪ್ರಶಸ್ತಿ, ಡಾ. ಪುನೀತ್ ರಾಜ್ ಕುಮಾರ್ ಪುರಸ್ಕಾರ, ಸಾಹಿತ್ಯ ಸೌರಭ, ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ರಾಜ್ಯ ಮಟ್ಟದ ರಾಷ್ಟ್ರ ಭಾಷಾ ಸೇವಾ ರತ್ನ ಪುರಸ್ಕಾರ, ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಗಳಿಸಿರುತ್ತಾರೆ.

ಹಾಸನ ಜಿಲ್ಲಾ ಅಧ್ಯಕ್ಷರಾದ ಸುಂದರೇಶ್ ಡಿ.ಉಡುವಾರೆ, ಗೌರವಾಧ್ಯಕ್ಷರು ಶ್ರೀ ವೆಂಕಟೇಶ.. ಉದಯ ವರದಿ ಪತ್ರಿಕೆಯ ಸಂಪಾದಕರು ಹಾಸನ, ಡಾ.ಲೋಕೇಶ ಉಪನ್ಯಾಸಕರು ಹೊಳೆನರಸೀಪುರ, ಡಾ. ಬರಾಳು ಶಿವರಾಮ, ಚನ್ನರಾಯಪಟ್ಟಣ ತಾಲ್ಲೂಕು. ಕಾರ್ಯದರ್ಶಿ ದಿಬ್ಬೂರು ರಮೇಶ, ಸಂಘಟನಾ ಕಾರ್ಯದರ್ಶಿ, ಶಿವಕುಮಾರ ಆರ್. ವಿಶ್ವಾಸ್ ಡಿ. ಗೌಡರು ಸಕಲೇಶಪುರ ತಾ. ಅಧ್ಯಕ್ಷರು. ಪರಮೇಶ್ ಮಡಬಲು. ಗಿರಿಜಾ ನಿರ್ವಾಣಿ. ರಾಣಿ ಚರಾಶ್ರಿ. ಬೋರೇಗೌಡರು ಅರಸೀಕೆರೆ. ಕಿರಣ್ ಅಧ್ಯಕ್ಷರು ಚುಸಾಪ ಬೇಲೂರು. ಎಸ್. ಎಸ್. ಪುಟ್ಟೇಗೌಡರು ಅಧ್ಯಕ್ಷರು ಅರಕಲಗೂಡು ತಾ. ಹಾಗು ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಎಸ್.ಎಫ್.ಐ ನೂತನ ಕೊಪ್ಪಳ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ.

ಗಂಗಾವತಿ: ಅಕ್ಟೋಬರ್-8 ರಂದು ಗಂಗಾವತಿ ನಗರದಲ್ಲಿ ನಡೆದ ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ನಡೆದ ಎಸ್.ಎಫ್.ಐ ಜಿಲ್ಲಾ ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾಧ್ಯಕ್ಷರಾಗಿ ಶಿವುಕುಮಾರ್ ಈಚನಾಳ್, ಜಿಲ್ಲಾ ಕಾರ್ಯದರ್ಶಿಯಾಗಿ ಬಾಲಾಜಿ ಚಳ್ಳಾರಿ, ಉಪಾಧ್ಯಕ್ಷರಾಗಿ ನಾಗರಾಜು ಯು, ಹನುಮೇಶ್ ಮ್ಯಾಗೇಡಿ, ಷರೀಫ್ ಎಂ.ಪಿ., ಪೂಜಾ ಕೊಪ್ಪಳ, ಜಂಟಿ ಕಾರ್ಯದರ್ಶಿಗಳಾಗಿ ರೋಜಾ ಬಿ., ದರ್ಶನ್ ಹೊಸ್ಕೇರ, ಬಸಯ್ಯ ಹಿರೇಮಠ್, ಸದಸ್ಯರಾಗಿ ಮಾರುತಿ ಕನಕಗಿರಿ, ರಮೇಶ್ ಅಗಸಿಮುಂದಿನ ಕುಷ್ಟಗಿ, ಹನುಮೇಶ್ ಚಳ್ಳಾರಿ, ದೊಡ್ಡಬಸವ ಕುಷ್ಟಗಿ, ರಾಜು ಕೊಪ್ಪಳ, ಮೌನೇಶ್ ಕುಷ್ಟಗಿ, ದೀಪಾ ಚಲವಾದಿ, ವೈಶಾಲಿ ಹಣವಾಳ್, ಲಕ್ಷö್ಮಣ ಹೊಸಗುಡ್ಡ, ಶರಣಬಸವ. ಬಿ ಆಯ್ಕೆಯಾದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿಯವರು, ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತದಲ್ಲಿದೆ, ಶಿಕ್ಷಣದ ಖಾಸಗೀಕರಣ ಹೆಚ್ಚುತ್ತಿದೆ. ಕನ್ನಡ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳಿಲ್ಲ, ಸೂಸಜ್ಜಿತ ಕಟ್ಟಡಗಳಿಲ್ಲ, ವಿದ್ಯಾರ್ಥಿಗಳ ಅನುಗುಣವಾಗಿ ಹಾಸ್ಟೆಲ್ ಸೌಲಭ್ಯವಿಲ್ಲ, ಗ್ರಾಮೀಣ ಭಾಗಗಳಿಗೆ ರಸ್ತೆ-ಬಸ್ ವ್ಯವಸ್ಥೆ ಇಲ್ಲ, ಹೀಗೆ ಹತ್ತಾರು ಸಮಸ್ಯೆಗಳು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯಲು ನೇರ ಕಾರಣವಾಗಿವೆ. ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚುವ ದುಷ್ಟ ಯೋಜನೆಯು ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲೆ ತರುತ್ತಿದೆ. ಶಿಕ್ಷಣದ ಹಕ್ಕು ಎಲ್ಲರಿಗೂ ಎನ್ನುವುದು ಸಂವಿಧಾನದ ಆಶಯ, ಆದರೆ ಸರ್ಕಾರ ಅದನ್ನು “ಹಣವಿದ್ದವರಿಗೆ ಮಾತ್ರ” ಎಂಬ ರೀತಿಗೆ ತರುತ್ತಿದೆ. ಭಾರತ ವಿದ್ಯಾರ್ಥಿ ಫೆಡರೇಶನ್ ಸಂಘಟನೆಯನ್ನು ಜಿಲ್ಲಾಧ್ಯಂತ ವಿಸ್ತರಿಸಿ, ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಿ ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳ ಧ್ವನಿಯಾಗಿ ಎಸ್.ಎಫ್.ಐ. ನೂತನ ಜಿಲ್ಲಾ ಸಮಿತಿಯು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಗಂಗಾವತಿಯ ಡಾ. ಚನ್ನಬಸವ ಕೊಟಗಿ ಅವರಿಗೆ ರಾಷ್ಟ್ರೀಯ ಸಾಧಕ ಪ್ರಶಸ್ತಿ

ಗಂಗಾವತಿ: ನಗರದ ನಿವಾಸಿಯಾದ ಚನ್ನಬಸವ ಕೊಟಗಿಯವರು ಒಬ್ಬ ವರದಿಗಾರರಾಗಿ ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ೧೫ ವರ್ಷಗಳಿಂದ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಬೆಂಗಳೂರಿನ ಗ್ಲೋಬಲ್ ಎಂಟರ್‌ ಪ್ರೈಸಸ್‌ ವತಿಯಿಂದ ರಾಷ್ಟ್ರೀಯ ಸಾಧಕ ಪ್ರಶಸ್ತಿ-೨೦೨೫ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಶಾಂತಾ ತಿಳಿಸಿದ್ದಾರೆ.

ಚನ್ನಬಸವ ಕೊಟಗಿಯವರು ಒಬ್ಬ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ, ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳಲ್ಲಿ ಪ್ರವಾಸಿಗರ ಮಾರ್ಗದರ್ಶಕರಾಗಿ, ಸಂಘಟಕರಾಗಿ, ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ, ಗಣ್ಯವ್ಯಕ್ತಿಗಳ ಆಪ್ತ ಸಹಾಯಕರಾಗಿ ಹತ್ತಾರು ಸೇವೆಗಳನ್ನು ಸಲ್ಲಿಸುತ್ತಾ, ವಿವಿಧ ಖಾಸಗಿ ಟಿ.ವಿ ಚಾನೆಲ್‌ಗಳು ಹಾಗೂ ಪತ್ರಿಕೆಗಳಲ್ಲಿ ಕರ್ತವ್ಯನಿರ್ವಹಿಸಿ, ಪ್ರಸ್ತುತ ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಹಾಗೂ ಭಾರತೀಯ ಜೀವ ವಿಮಾ ನಿಗಮದ ಏಜೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಹರಿಯಾಣ ರಾಜ್ಯದ ಫರಿದಾಬಾದ್‌ನ ಮ್ಯಾಜಿಕ್ & ಆರ್ಟ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇವರ ಈ ಸಾಧನೆಯನ್ನು ಗುರುತಿಸಿದ ಬೆಂಗಳೂರಿನ ಗ್ಲೋಬಲ್ ಎಂಟರ್‌ ಪ್ರೈಸಸ್‌ ರವರು ಇವರಿಗೆ ಅಕ್ಟೋಬರ್-೧೩ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಟೌನ್‌ಹಾಲ್‌ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಇವರಿಗೆ ಕರ್ನಾಟಕ ರಾಜ್ಯದ ಸಮಸ್ತ ನಾಗರಿಕರು, ಕಲಾವಿದರು, ಪತ್ರಕರ್ತರು, ಸಾಹಿತಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.