ಹೊಸಪೇಟೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದಿಂದ ರಾಜ್ಯಮಟ್ಟದ ಕರೋಕೆ ಚಿತ್ರಗೀತೆ ಸ್ಪರ್ಧೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಆಯೋಜಿಸಿರುವ ಕರ್ನಾಟಕ ಧ್ವನಿ ಸಂಚಿಕೆ ಒಂದು ಈ ಸ್ಪರ್ಧೆಯ ಅಂತಿಮ ಹಂತದ ಸ್ಪರ್ಧೆಯನ್ನು ವಿಜಯನಗರ ಜಿಲ್ಲೆ, ಹೊಸಪೇಟೆಯ ಬುದ್ಧ ಬಸವ ಭವನದಲ್ಲಿ ದಿನಾಂಕ 26-10-2025ರ ಭಾನುವಾರದಂದು ಆಯೋಜಿಸಲಾಗಿದೆ. ಈ ಗಾಯನ ಸ್ಪರ್ಧೆಯಲ್ಲಿ 38 ಜನ ಗಾಯಕರಿದ್ದು ಯುಗಳ ಗೀತೆಗಳು ಹಾಡಲಿದ್ದಾರೆ ಅಂತಿಮವಾಗಿ ಆಯ್ಕೆಯಾಗುವ ಗಾಯಕರಿಗೆ ಬೆಳಗಾವಿಯಲ್ಲಿ ನಡೆಯಲಿರುವ ಕನ್ನಡ ನುಡಿ ವೈಭವ 2026ರ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಆಶಾರಾಣಿ ನಡೋಣಿ ಸದಸ್ಯರು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ರಾಷ್ಟ್ರಮಟ್ಟದ ಚಿತ್ರ ಕಲಾವಿದರು ಬೆಳಗಾವಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಕೆ ಎಸ್ ನಾಯ್ಕರವರು ವಹಿಸಲಿದ್ದಾರೆ. ಗೊರೂರು ಅನಂತರಾಜು ಅವರ ಕೃತಿ ನಿಂತು ಹೋದ ರಂಗ ವೈಭವ ಪುಸ್ತಕದ ಲೋಕಾರ್ಪಣೆಯನ್ನು ಡಾ.ಸಿ ಸೋಮಶೇಖರ್, ಐ ಎ ಎಸ್ ಬಸವ ವೇದಿಕೆ ಬೆಂಗಳೂರು ಅಧ್ಯಕ್ಷರು ನೆರವೇರಸುತ್ತಾರೆ. ಸಿಂಗಾರ ಎಂಬ ಹಾಡನ್ನು ಶ್ರೀಮತಿ ಕಮಲ ಕುಲಕರ್ಣಿ ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ. ಶ್ರೀ ಮಧುನಾಯ್ಕ, ಲಂಬಾಣಿ, ಅಧ್ಯಕ್ಷರು ಕರ್ನಾಟಕ ರಾಜ್ಯ ಬರಹಗಾರರ ಸಂಘ (ನೋಂ), ಹೂವಿನ ಹಡಗಲಿ. ಮುಖ್ಯ ಅತಿಥಿಗಳಾಗಿ ಶ್ರೀ ಗೊರೂರು ಅನಂತರಾಜು ಗೌರವ ಅಧ್ಯಕ್ಷರು ಹಾಗೂ ಸಾಹಿತಿಗಳು, ಶ್ರೀ ವಿರುಪಾಕ್ಷಪ್ಪ ಯು ಉಪಾಧ್ಯಕ್ಷರು, ಶ್ರೀ ಉದೇದಪ್ಪ ಕ್ಯಾದಿಗೆಹಾಳ್ ಹೊಸಪೇಟೆ ತಾಲೂಕು ಅಧ್ಯಕ್ಷರು. ಶ್ರೀ ಪಿ.ವಿ ವೆಂಕಟೇಶ ವಕೀಲರು ಕರುನಾಡ ಕ್ರಿಯಾಶೀಲ ಸಮಿತಿ ಅಧ್ಯಕ್ಷರು ಹೊಸಪೇಟೆ ಇವರು ಹಾಜರಿರುತ್ತಾರೆ.

ಈ ಸ್ಪರ್ದೆಯ ತೀರ್ಪುಗಾರರಾಗಿ ಶ್ರೀ ಕುಬೇರನಾಯ್ಕ ದಾವಣಗೆರೆ ಹಾಗೂ ಶ್ರೀ ಸ್ವರೂಪ ಭಾರದ್ವಾಜ್ ರವರು ನಿರ್ವಹಿಸುತ್ತಾರೆ.

ನಾಟಕಕಾರ ಗೊರೂರು ಅನಂತರಾಜು ಅವರಿಗೆ ಕಲಾಭೂಷಣ ಪ್ರಶಸ್ತಿ

ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ(ರಿ)ಯ ಸರ್ವ ಸದಸ್ಯರ 8ನೇ ವಾರ್ಷಿಕ ಮಹಾಸಭೆಯು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರುಗಿತು.ಸಭೆಯಲ್ಲಿ ಇತ್ತೀಚೆಗೆ ಕೀರ್ತಿಶೇಷರಾದ ಹಾಸನದ ಹಿರಿಯ ಕಲಾವಿದರಾದ ಚೆಲುವೆಗೌಡರು, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ. ಶಿವಣ್ಣ, ಕಾದಂಬರಿಕಾರರಾದ ಶ್ರೀ ಎಸ್. ಎಲ್ ಭೈರಪ್ಪ, ಗಾಯಕರಾದ ಹಾಸನ ಬಾಬು ಹಾಗೂ ಹರಿಕಥಾ ವಿದ್ವಾಂಸರು ಹಾಗೂ ಪೌರಾಣಿಕ ರಂಗ ನಿರ್ದೇಶಕರಾದ ಚಂದ್ರಚಾರ್ ಇವರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯ ಆಗುಹೋಗುಗಳ ವರದಿಯ ನಂತರ ಕಲಾವಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ 40 ಕಲಾವಿದರಿಗೆ ಕಲಾಭೂಷಣ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು. ಸಮಿತಿಯ ಶ್ರೇಯೋಭಿವೃದ್ಧಿಗೆ ಸದಸ್ಯರುಗಳೊಡನೆ ಚರ್ಚಿಸಿ ಸಲಹೆಗಳನ್ನು ಪಡೆದು ಅನಂತರ ಅಧ್ಯಕ್ಷರಾದ ರವಿಕುಮಾರ್ ಬಿದರೆಯವರು ಮಾತನಾಡಿ ಇನ್ನೂ ಉನ್ನತ ಮಟ್ಟದಲ್ಲಿ ಸಂಘವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಸದಸ್ಯರೆಲ್ಲರ ಸಹಕಾರವನ್ನು ಕೋರುತ್ತಾ ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದರು.ಮಧ್ಯಾಹ್ನ ಊಟದ ನಂತರ ರಂಗಗೀತೆಗಳ ಕಾರ್ಯಕ್ರಮವನ್ನು ನಡೆಸಲಾಯಿತು.

ವೇದಿಕೆಯಲ್ಲಿ ಅಧ್ಯಕ್ಷರಾದ ಬಿದರೆ ರವಿಕುಮಾರ್, ಕಾರ್ಯದರ್ಶಿ ವೇದ ಶಿವಕುಮಾರ್, ಖಜಾಂಚಿ ರಮೇಶ್ ಗೌಡಪ್ಪ, ಗೌರವಾಧ್ಯಕ್ಷರಾದ ಶೇಖರಪ್ಪ, ಉಪಾಧ್ಯಕ್ಷರಾದ ಶ್ರೀಕಂಠಪ್ಪ, ಸೋಮಶೇಖರ್, ಕಾರ್ಯಾಧ್ಯಕ್ಷರಾದ ನಾಗಮೋಹನ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಗವೇನಹಳ್ಳಿ, ಕಾನೂನು ಸಲಹೆಗಾರರಾದ ಮಹೇಂದ್ರ ಹಾಗೂ ಸಲಹೆಗಾರರಾದ ರಂಗಸ್ವಾಮಿ ಕೆ ಕೆ, ಟಿ ವಿ, ನಾಗರಾಜ್, ನಾಗರಾಜ್ ಸಿ ಜೆ, ತೇಜೂರು ಸೋಮಣ್ಣ ದ್ಯಾವೇಗೌಡ, ಕೇಶವ ಜಿ ಜಿ. ಮುಂತಾದವರು ಉಪಸ್ಥಿತರಿದ್ದರು.

ೋಮಶೇಖರ್ ಸ್ವಾಗತಿಸಿ, ಸಾವಿತ್ರಿ ಗಂಗಾಧರ್ ಪ್ರಾರ್ಥಿಸಿದರು, ಶಶಿಕಾಂತ್ ನಿರೂಪಿಸಿ, ನಾಗಮೋಹನ್ ವಂದಿಸಿದರು.

ಸುಂದರ ನವಿಲಿಗೆ ಚಂದದ ಗರಿ ಪುಸ್ತಕ ಲೋಕಾರ್ಪಣೆ

ಅರಸೀಕೆರೆ: ರೋಟರಿ ಭವನದಲ್ಲಿ ಅಕ್ಟೋಬರ್‌-11 ಶನಿವಾರ ಸುಂದರ ನವಿಲಿಗೆ ಚಂದದ ಗರಿ ಪುಸ್ತಕ ಲೋಕಾರ್ಪಣಿ ಸಮಾರಂಭವು ನೆರವೇರಿತು. ಕಾತ್ಯಾಯಿನಿ ತೇವರಿಮಠ ನಿರೂಪಣೆ, ಶಫೀತಾಬೇಗಂರಿಂದ ಪ್ರಾರ್ಥನೆ , ಬೇಲೂರು ಮಧುಮಾಲತಿ ರುದ್ರೇಶ್ ರಿಂದ ಸ್ವಾಗತ ನಂತರ ಪರಮೇಶ್ ಕಸಾಪ ಅರಸೀಕೆರೆ ಇವರು ಉದ್ಘಾಟನಾ ನುಡಿಯಲ್ಲಿ ಸಾಹಿತ್ಯವು ವಿಶಾಲವಾದ ‌ ಪ್ರಕ್ರಿಯವಾಗಿದೆ. ಇರುವ ಸ್ಥಿತಿಯನ್ನ ವೈಭವೀಕರಿಸಿ ಕಥೆ, ಕವನ , ನಾಟಕ ಹೀಗೆ ವಿವಿಧ‌ ಪ್ರಕಾರವು ರಚಿಸುವುದಾಗಿದೆ ಎಂದು‌ ತಾವು ನಾಟಕದಲ್ಲಿ ನಟಿಸುವಾಗ ಆದ ಕೆಲವು ಅನುಭವಗಳನ್ನು ಹಂಚಿಕೊಂಡರು.

ಪ್ರಾಸ್ತಾವಿಕ ‌ ನುಡಿಯಲ್ಲಿ ಅರಸೀಕೆರೆ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪದ್ಮಮೂರ್ತಿಯವರು ಲೇಖಕಿ ಸಾವಿತ್ರಮ್ಮ ಓಂಕಾರ್ ಅವರು ‌ ಸಾಹಿತ್ಯದಲ್ಲಿ ನಡೆದುಬಂದ ಹೆಜ್ಜೆಗಳನ್ನ ಹೇಳಿ ಅಭಿನಂದನೆ ಸಲ್ಲಿಸಿದರು. ಹಾಸನದ ಸಾಹಿತಿಗಳು ಗೊರೂರು ಅನಂತರಾಜುರವರು ಕೃತಿ ಪರಿಚಯವನ್ನ ಸುದೀರ್ಘವಾಗಿ ಮಾಡಿಕೊಡುತ್ತಾ ಅವರ ಅನೇಕ ಕೃತಿಗಳನ್ನ ಪರಿಚಯಿಸಿಕೊಟ್ಟಿರುವ ಕೃತಿಯ ಲೇಖಕಿ ಸಾವಿತ್ರಮ್ಮ ಓಂಕಾರ್ ಅವರ ಕಾರ್ಯನ ಬಗ್ಗೆ ಶ್ಲಾಘಿಸಿದರು.

ಕೃತಿಯ ‌ ಲೇಖಕಿ ತಮ್ಮ ಮನದ‌‌ ಮಾತಿನಲ್ಲಿ ಬಂದ‌ ಪ್ರತಿಯೊಬ್ಬರಿಗೂ ಕೃತಿಯಲ್ಲಿರುವ ಎಲ್ಲಾ ೭೪ಜನ ಸಾಧಕರ ಬಗ್ಗೆ ಪ್ರಶಂಸೆ ಮತ್ತು ಅಭಿನಂದನೆ ಸಲ್ಲಿಸಿದರು. ನಾಗರತ್ನ ರಾಜಶೇಖರ್ ರವರು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಸ್ವರಚಿತ ಚುಟುಕು ವಾಚನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಾಸನದ ಪತ್ರಕರ್ತರು,‌ ಕಸಾಪ‌‌ ಮಾಜಿ‌ ಅಧ್ಯಕ್ಷರು ‌ ಉದಯರನಿ ಮಾತನಾಡಿ ಸಾಹಿತಿಗಳಿಗಾಗೇ ಒಂದು ಪುಟವನ್ನು ಮೀಸಲಿಟ್ಟ ಪ್ರತಿನಿಧಿ ಪತ್ರಿಕೆಯ ಬಗ್ಗೆ ತಿಳಿಸಿದರು. ಕೃತಿಯ‌ ಬಗ್ಗೆ ಪ್ರಶಂಸನೀಯ ನುಡಿಗಳನ್ನು‌ ಆಡಿ ಪ್ರತಿಯೊಬ್ಬ ಸಾಹಿತಿಗಳನ್ನು ಉತ್ತೇಜಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾಧ್ಯಕ್ಷರು ಸುಂದರೇಶ್ ಡಿ. ಉಡುವಾರೆ, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷರು ಡಾ. ಬರಾಳು ಶಿವರಾಮ ವೇದಿಕೆಯಲ್ಲಿದ್ದು ಮಾತನಾಡಿದರು.

ಪುಸ್ತಕದಲ್ಲಿರುವ ಸಾಧಕರುಗಳಾದ ಮಧುಮಾಲತಿ ರುದ್ರೇಶ್, ಮಾಲಾ ಚಲುವನಹಳ್ಳಿ, ಸುಭದ್ರಾ, ಶಫೀತಾ ಬೇಗಂ, ಪ್ರೇಮಲತಾ ಸೋಮಶೇಖರ್, ಸುಧಾ ಬಾಣಾವರ. ವಿಶ್ವಾಸ್ ಗೌಡ. ಮಲ್ಲೇಶ್, ಉಮೇಶ್ ಹೊಸಹಳ್ಳಿ, ರುದ್ರೇಶ್, ಚಂದ್ರು ಬಾಣಾವರ, ಡಾ. ಹರೀಶ್ ಉಪಾನ್ಯಾಸಕರು, ಮುಂತಾದವರು ಚುಟುಕು ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಬಂದ ಪ್ರತಿಯೊಬ್ಬರಿಗೂ ಪುಸ್ತಕದ ಜೊತೆ ಸನ್ಮಾನ ಸಲ್ಲಿಸಲಾಯಿತು.