ಮೌನ ಸಾಧಕರಾಗಿ ಒಳಿತನ್ನು ಮಾಡಿ: ಹೆಚ್.ಎಸ್. ಪ್ರತಿಮಾ ಹಾಸನ್

ಹಾಸನ: ಮಾರ್ಚ್‌-14 ರಂದು ಹಾಸನದ ಹೌಸಿಂಗ್ ಬೋರ್ಡ್, ಚನ್ನಪಟ್ಟಣದಲ್ಲಿ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ತಾಲೂಕು ಅಧ್ಯಕ್ಷರಾದ ರಮ್ಯಾರವರ ನಿವಾಸದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಹಾಸನದ ಹೆಮ್ಮೆಯ ಪುತ್ರಿಯಾಗಿರುವ ಸಾಹಿತಿ, ಸಮಾಜ ಸೇವಕಿ, ಶಿಕ್ಷಕಿ, ಪತ್ರಕರ್ತೆ, ಸಾಮಾಜಿಕ ಚಿಂತಕಿ, ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಸಾಧಕಿ, ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ ) ಸಂಸ್ಥಾಪಕ ಅಧ್ಯಕ್ಷರಾಗಿರುವ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಡಿ ಅವರನ್ನು ಎಲ್ಲ ಮಹಿಳೆಯರು ಅರಿಶಿಣ ಕುಂಕುಮ, ಬಳೆ. ಸೀರೆ ಜೊತೆಗೆ ಬಾಗಿನ ನೀಡಿ ಅವರ ಸಾಧನೆಯ ಹಲವಾರು ಪ್ರಶಸ್ತಿ ಪಡೆದ ಭಾವಚಿತ್ರವಿರುವ ಫಲಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ನಂತರ ಬದುಕು ಎಂದ ಮೇಲೆ ಜೀವನದಲ್ಲಿ ಏರುಪೇರು ಸಹಜ. ಕಷ್ಟ ಸುಖ ಎಂಬುದು ಎಲ್ಲರ ಬದುಕಿನಲ್ಲಿ ಬರುತ್ತದೆ. ಕೈಲಾದಷ್ಟು ಸಹಾಯವನ್ನು ಕಷ್ಟದಲ್ಲಿ ಇರುವವರಿಗೆ, ಅಂಗವಿಕಲರು, ನೊಂದವರಿಗೆ, ನಿರ್ಗತಕರಿಗೆ ಮಾಡಬೇಕು ಮಾಡುವ ಕೆಲಸವಾಗಲಿ ಸಾಧನೆ ಆಗಲಿ ಮೌನದಲ್ಲಿ ಸಾಗಬೇಕು, ಎಂದಿಗೂ ಮೌನ ಸಾಧಕರಾಗಿ ಒಳಿತನ್ನು ಮಾಡುತ್ತಾ ಸಾಗಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಹೇಳುತ್ತಾ ಮಹಿಳೆಯರು ಪ್ರಬಲರಾಗಿ ಬದುಕಬೇಕು, ಆರ್ಥಿಕವಾಗಿ ಎಷ್ಟೇ ಪ್ರಬಲರಾದರು ದುಡಿಮೆಯನ್ನು ಮಾಡುತ್ತ ಸಾಗಿದರೆ ಸಮಾಜಕ್ಕೆ ಮಾದರಿಯಾಗಬಹುದು. ಅಷ್ಟೇ ಅಲ್ಲ ಮಹಿಳೆಯು ಅಬಲೆಯಲ್ಲ ಸಬಲೇ ಎಂಬ ಮಾತಿಗೆ ಎಲ್ಲಾ ಮಹಿಳೆಯರು ಸಂಸ್ಕೃತಿಯನ್ನು ಉಳಿಸುತ್ತಾ ಉಡುಗೆ-ತೊಡುಗಿಗಳಲ್ಲಿ ಬದಲಾವಣೆಗಳನ್ನು ತೋರದೆ ನಮ್ಮ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನವನ್ನು ನೀಡುತ್ತಾ ನಮ್ಮ ಸಂಸ್ಕೃತಿಗೆ ವಿರುದ್ಧ ನಡೆಯದೆ ಕಾರ್ಯವನ್ನು ನಿರ್ವಹಿಸುತ್ತಾ ಸಾಗಿದರೆ ನಮ್ಮ ಸಮಾಜ ಸುಭದ್ರವಾಗಿರುತ್ತದೆ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಅರಿತು ಸಾಗಬೇಕಿದೆ. ಒಟ್ಟಾರೆ ಮಹಿಳೆಯಿಂದ ಸಮಾಜ ಸುಭದ್ರತೆಯನ್ನು ಕಾಣಬಹುದಾಗಿದೆ. ಎಂದು ಹೆಚ್.ಎಸ್ ಪ್ರತಿಮಾ ಹಾಸನ್ ಅವರು ತಿಳಿಸಿದರು.

ನಂತರ ಹೆಚ್.ಎಸ್. ಪ್ರತಿಮಾ ಹಾಸನ್ ರವರ ಸಾಧನೆ ಬಹಳವಾಗಿದೆ, ಅವರು ನೂರಾರು ಮಹಿಳೆಯರಿಗೆ ಸ್ಪೂರ್ತಿದಾಯಕ ಹಾಗೂ ಮಾದರಿಯಾಗಿದ್ದಾರೆ. ನೊಂದ ಮಹಿಳೆಯರಿಗೆ ನ್ಯಾಯ ನೀಡುವುದಾಗಲಿ, ಕರಕುಶಲ ತರಬೇತಿಯಾಗಲಿ, ಸಾಹಿತಿಕವಾಗಿ ಕಾರ್ಯಕ್ರಮಗಳಾಗಲಿ ಗುರುತಿಸಿ ನಮ್ಮೆಲ್ಲರಿಗೂ ಪ್ರೋತ್ಸಾಹ ನೀಡುತ್ತಿರುವುದು ಅವರ ಸಾಧನೆಯಾಗಿ ಕಾಣುತ್ತದೆ. ಇವರು ಬಹುಮುಖ ಪ್ರತಿಭೆಯಾಗಿದ್ದು.ಯಾವುದೇ ನಿಷ್ಕಲ್ಮಶವನ್ನು ತೋರದೆ ನೇರ ನುಡಿಯ ಮಾತುಗಾರ್ತಿಯಾಗಿ ನಮ್ಮೆಲ್ಲರಿಗೂ ಗುರುವಿನಂತೆ. ಇವರನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾ ಇಂದು ನಮ್ಮಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್(ರಿ ) ವತಿಯಿಂದ ಗೌರವಿಸುತ್ತಿರುವುದು ನಮಗೆಲ್ಲ ಹೆಮ್ಮೆ ಎನ್ನಿಸುತ್ತದೆ. ಹೀಗೆ ಇವರ ಕಾರ್ಯವು ಸುಗಮವಾಗಿ ನಡೆಯಲೆಂದು ಆಶಿಸುತ್ತೇವೆ ಎಂದು ತಾಲೂಕು ಅಧ್ಯಕ್ಷರಾದ ರಮ್ಯಾ ತಿಳಿಸಿದರು.

ನಮ್ಮ ಟ್ರಸ್ಟ್ ನ ಕಾರ್ಯವು ಸುಗಮವಾಗಿ ಸಾಗುತ್ತಾ ಸಮಾಜಕ್ಕೆ ಒಳಿತನ್ನು ಮಾಡಿದರೆ ಸಾಕೆಂದು ಎಲ್ಲಾ ಟ್ರಸ್ಟ್ ನ ಸದಸ್ಯರು ತಿಳಿಸಿದರು.

ಕಾರ್ಯಕ್ರಮದಲ್ಲಿಸೌಮ್ಯ, ಅಭಿಲಾಷ, ಕಲ್ಪನಾ, ಸಂಗೀತ, ಜಯಮ್ಮ ಪ್ರವೀಣ್ ಗೌಡ, ಬೇಬಿ ರಶಿಕ,ಬೇಬಿ ದಿಯಾ ಗೌಡ ಕೆ ಆರ್. ಇನ್ನೂ ಹಲವರು ಇದ್ದರು.  https://aratt.ai/@vishwaroopa_news_blog

ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ

ಬೆಂಗಳೂರು: 50 ವರ್ಷದ ಸನಿಹದಲ್ಲಿರುವ ಬೆಂಗಳೂರಿನ ಗೆಜ್ಜಹೆಜ್ಜೆ ರಂಗತಂಡವು ಬೆಂಗಳೂರು ಸೇವಾ ಸದನ ರಂಗಮಂದಿರದಲ್ಲಿ ಮಾರ್ಚ್‌-12 ರಂದು ಯುಗಾದಿ ರಂಗ ಸಂಭ್ರಮ ನಾಟಕೋತ್ಸವ ಏರ್ಪಡಿಸಿತ್ತು.

ರಂಗಭೀಷ್ಮ ಬಿ.ವಿ ಕಾರಂತರ ಸಂಗೀತ ಸುಂಯೋಜನೆಯಲ್ಲಿ ಮೂಡಿ ಬಂದ ಗಜವದನ ಏರಂಬ ಎಂಬ ಗೀತೆಯನ್ನು ಗಣೇಶಯ್ಯನವರು ಆಡುವುದರ ಮುಖೇನ ನಾಟಕೋತ್ಸವಕ್ಕೆ ಚಾಲನೆ ನೀಡಿದರು.

ಹಲವಾರು ಪ್ರಸಿದ್ಧ ನಾಟಕಗಳ ರಂಗಗೀತೆಗಳನ್ನು ಒಂದು ಗಂಟೆಗಳ ಕಾಲ ಹಾಡಲಾಯಿತು. ತಂಡದ ಹೊಸ ಪ್ರಯೋಗ ಮಾದಕ ಯುವ ಮಾರಕ ಪ್ರದರ್ಶಿಸಲಾಯಿತು. ಯುವ ಜನತೆ ದುಶ್ಚಟಕ್ಕೆ ದಾಸರಾಗ್ತಾ ಇದ್ದಾರೆ. ಇದರ ಸುತ್ತ ಹೆಣೆಯಲಾದ ಕಥಾ ಹಂದರ ಮನುಷ್ಯ ಅನುಮಾನ ಮತ್ತು ಅವಮಾನದಿಂದ ಕೋಪ ತಾಪ ಆವೇಶ ಚಟ ಬಿದ್ದು ಚಟ್ಯಕೆ ಏರುತ್ತಾನೆ. ಬೀದಿ ಬದಿಗಳಲ್ಲಿ ಜನಸಂದಣಿ ಇರುವ ಜಾಗಗಳಲ್ಲಿ ಶಾಲಾ-ಕಾಲೇಜುನ ಸಮೀಪ ಏರ್ಪೋರ್ಟ್ ಬಸ್ಟ್ಯಾಂಡ್ ರೈಲು ನಿಲ್ದಾಣ ಮುಂತಾದ ಕಡೆಗಳಲ್ಲಿ ಗಾಂಜಾ ಅಫೀಮು ಎಲಾಯಿನ್ ಮತ್ತೇರಿಸುವ ಪದಾರ್ಥಗಳನ್ನು ಮಾರುತಿರುತ್ತಾರೆ. ಯುವಕ ಯುವತಿಯರನ್ನು ದುಶ್ಚಟಕ್ಕೆ ದಾಸರನ್ನಾಗಿಸುವ ವಂಚಕರ ಜಾಲವೇ ವಿಪರೀತವಾಗಿದೆ. ಪ್ರೇಕ್ಷಕರಿಗೆ ನೇರವಾಗಿ ಡ್ರಗ್ಸ್ ಮಾರಾಟ ಕಂಡು ಬಂದಲ್ಲಿ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಒಂದು ಪಾತ್ರ ಹೇಳುತ್ತದೆ. ಯುವ ಜನತೆಯನ್ನು ದುಸ್ಥಿತಿಯಿಂದ ಕಾಪಾಡಬೇಕಾದ ಪರಿಸ್ಥಿತಿ ಒದಗಿ ಬಂದಿರುವುದು ನೋವಿನ ಸಂಗತಿ.

ಧರೆಗೆ ತಂದು ಬಿಟ್ಬಿಟ್ನಪ್ಪ ಆಟ ಆಡ್ಸೋಕೆ ಪಾಠ ಕಲ್ಸೋಕೆ ಈ ಭೂಮಿ ಎಂಬ ರಂಗದ ಮೇಲೆ ಹಾಡೋಕ್ ಬಿಟ್ಟವ್ನೆ, ಕಾಮ ನೇಮ ಲೋಭ ಲಾಭದ ಪಾತ್ರ ಕೊಟ್ಟವ್ನೆ ಅಂತ ಹೇಳ್ತಾ ಪ್ರಹಸನ ಮುಕ್ತಾಯವಾಗುತ್ತದೆ. ನಿಂತ್ಕೋಳಿ ಅಲ್ಲಲ್ಲ ಕುಳಿತುಕೊಳ್ಳಿ ಎಂಬ ಹಾಸ್ಯ ಕಿರು ನಾಟಕ ಮತ್ತು ಎಂಡ್ ಇಲ್ಲದ ಬಂಡ್ ಅವತಾರ ರಾಜಕೀಯ ವಿಡಂಬನಾತ್ಮಕ ನಗೆ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ ತಂಡ.

ರಂಗ ಉಪನ್ಯಾಸ ರಂಗ ಗೀತೆಗಳು, ಕಿರು ನಾಟಕ ರಂಗದ ಬಗ್ಗೆ ಮಾತುಗಳು ರಂಗ ಹಾಸ್ಯ ಪಟಾಕಿ ಎಲ್ಲಾ ಸರಿಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿತು ಚಿಂತನೆಗೂ ಚಾಲನೆ ನೀಡಿತು. ಬೆಳಕು ವಿನ್ಯಾಸ ರವಿಶಂಕರ್ ಪ್ರಸಾದನ ಶಿವು, ಉಪನಿಷ ವಸ್ತ್ರಾಲಂಕಾರ ಪುಷ್ಪಲತಾ. ಪ್ರಚಾರ ಅಮಿತಾನಂದ ಶೇಖ ಪಾತ್ರವರ್ಗದಲ್ಲಿ ಮೈಸೂರು ರಮಾನಂದ್, ಶೇಖರ್ ಸೂರ್ಯನಾರಾಯಣರಾವ್, ಲಲಿತಾ ಗಣೇಶಯ್ಯ, ಟಿ.ಜಿ ಹರೀಶ್ ಸಂಗೀತ. ನಾಟಕ ಬರೆದಾಡಿಸಿದವರು ಮೈಸೂರು  ರಮಾನಂದ.  https://aratt.ai/@vishwaroopa_news_blog

ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್

ಪ್ಲಾಸ್ಟಿಕ್‌ ಬಳಕೆ ಆರೋಗ್ಯಕ್ಕೆ ಮಾರಕ

ಗಂಗಾವತಿ: ನಗರದ ಪ್ರತಿಷ್ಠಿತ ಸಂಕಲ್ಪ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಹಿರೇಜಂತಕಲ್ ಹಾಗೂ ವಿಪ್ರ ಪ್ರದೇಶದಲ್ಲಿ ಶ್ರಮದಾನ ಮಾಡುವ ಮೂಲಕ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ವಸ್ತುಗಳನ್ನು ಆಯ್ದು ಪ್ರದೇಶವನ್ನು ಸ್ವಚ್ಛಗೊಳಿಸುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಸಂಕಲ್ಪ ಪದವಿ ಮಹಿಳಾ ಮಹಾವಿದ್ಯಾಲಯ ಕಾರ್ಯಾಧ್ಯಕ್ಷರು ಹಾಗೂ ವಕೀಲರಾದ ನಾಗರಾಜ್ ಗುತ್ತೇದಾರ ಭೇಟಿ ನೀಡಿದರು.

ನಂತರ ಮಾತನಾಡಿದ  ಅವರು, ಪರಿಸರಕ್ಕೆ ಮಾರಕವಾದ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಾವುಗಳೆಲ್ಲ ಸ್ವ ಇಚ್ಛೆಯಿಂದ ತ್ಯಜಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಜೀವನಶೈಲಿಗೆ ಬದಲಾಗಬೇಕಿದೆ. ಆ ಮೂಲಕ ಹಿರಿಯರಿಂದ ಬಳುವಳಿಯಾಗಿ ಬಂದ ಸುಂದರ-ಸ್ವಚ್ಚ ಪರಿಸರವನ್ನು ಯಥಾವತ್ತಾಗಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸಾಧ್ಯವಾಗುತ್ತದೆ. ನಾಗರೀಕತೆಯ ಬೆಳವಣಿಗೆಯ ಭಾಗವಾಗಿ ದಿನನಿತ್ಯದ ಜೀವನಶೈಲಿಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಅತಿಯಾಗಿ ಅವುಗಳು ಪರಿಸರಕ್ಕೆ ಮತ್ತು ಮಾನವನ ಆರೋಗ್ಯಕ್ಕೆ ತೀವ್ರವಾದ ಹಾನಿಯನ್ನು ಉಂಟುಮಾಡುತ್ತಿವೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ವಸ್ತುಗಳ ಬದಲಾಗಿ ಪರ್ಯಾಯ ಬಳಕೆಯ ಕಡೆಗೆ ನಾವೆಲ್ಲ ಗಮನಹರಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆಯಬೇಕಾಗಿದೆ ಎಂದು ಕರೆ ನೀಡಿದರು. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಹಲವಾರು ಕಾಯ್ದೆ ಕಾನೂನುಗಳಿದ್ದರೂ ಸಹ ಜನ ಅವುಗಳನ್ನು ಗಮನಿಸದೆ ಮುಂದುವರೆದಲ್ಲಿ ಮಾನವ ಸಂಕುಲ ಅಪಾಯಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಈ ಪವಿತ್ರ ಪರಿಸರದಲ್ಲಿ ವಾಸಿಸುವ ನಾವೆಲ್ಲರೂ ನಮ್ಮ ಸ್ವ-ಇಚ್ಚೆಯಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಹಾಗೂ ನಮ್ಮಗಳ ಆರೋಗ್ಯಯುತ ಜೀವನಕ್ಕೆ ಸಂಕಲ್ಪ ಮಾಡಬೇಕಾಗಿದೆ ಎಂದು ತಿಳಿಸಿದರು.

2021 ಆಗಸ್ಟ್ 12ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿದ ಅಧಿಸೂಚನೆಯಂತೆ ರಾಜ್ಯದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧವಿದ್ದರೂ ಅದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವೆಲ್ಲರೂ ರಕ್ಕಸ ಪ್ಲಾಸ್ಟಿಕ್ ಅನ್ನು ತ್ಯಜಿಸಿ ಉತ್ತಮ ಪರಿಸರ ಮತ್ತು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ರಮೇಶ್, ಶಿವಶರಣ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿಯಾದ ರಾಹುಲ್ ಉಪಸ್ಥಿತರಿದ್ದರು.    https://aratt.ai/@vishwaroopa_news_blog

ವಾಸವಿ ಮಹಿಳಾ ಮಂಡಳಿ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.

ಹೆಣ್ಣು ಜಗತ್ತು ಸೃಷ್ಟಿಯ ಪ್ರತೀಕ: ಶ್ರೀಮತಿ ಭಾಗ್ಯ ಈಶ್ವರಶೆಟ್ಟಿ.

ಗಂಗಾವತಿ. ಜನ್ಮದಾತೆಯಿಂದ ಹಿಡಿದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾಣಬಹುದಾದ ಹೆಣ್ಣು ಸೃಷ್ಟಿಯ ಪ್ರತಿಕವಾಗಿ ಗೋಚರಿಸುತ್ತಾಳೆ ಎಂದು ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಭಾಗ್ಯ ಈಶ್ವರಶೆಟ್ಟಿ ಹೇಳಿದರು.

ಅವರು ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ವಾಸವಿ ಮಹಿಳಾ ಮಂಡಳಿ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಹೆಣ್ಣಿನ ಮೇಲೆ ಶೋಷಣೆ ಪ್ರಕರಣಗಳನ್ನು ಗಮನಿಸಿದಾಗ ಭ್ರೂಣ ಹತ್ಯೆಯಿಂದ ಹಿಡಿದು, ಶೋಷಣೆ, ಅತ್ಯಾಚಾರ, ಕೊಲೆ ನಿರಂತರವಾಗಿ ಜರುಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪರಾಣಿ ರಾಯ್ಕರ್ ಮಾತನಾಡಿ, ಒಲಿದರೆ ನಾರಿ ಮುನಿದರೆ ಮಾರಿ ಎನ್ನುವಂತೆ ಹೆಣ್ಣು ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಸಮಾಜದ ವಿವಿಧ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇರಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಿಎಂ ರಾಧಿಕಾ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿವಿಧ ಸಂಪ್ರದಾಯಕ ಆಟಗಳು ಹಳೆಯ ನೆನಪುಗಳನ್ನು ಹಂಚಿಕೊಳ್ಳಲಾಯಿತು.

ಸಾಧಕರ ಪರಿಚಯವನ್ನು ವಿನೋದ್ ನೆರವೇರಿಸಿದರು. ಇಲ್ಲೂರ್ ಲಕ್ಷ್ಮಿ ದೇವಿ. ಎಂ ಭಾರತಿ. ಗಾಯಿತ್ರಿ ವಾಸು. ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  https://aratt.ai/@vishwaroopa_news_blog