ಶ್ರದ್ಧೆ ಭಕ್ತಿಯಿಂದ ಜರುಗಿದ ಕಾಲಜ್ಞಾನಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಲ್ಯಾಣ ಮಹೋತ್ಸವ.

ಗಂಗಾವತಿ: ಸಮೀಪದ ಶ್ರೀ ರಾಮನಗರದ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಗೋವಿಂದಾಂಬ ಸಮಿತ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಲ್ಯಾಣ ಮಹೋತ್ಸವ ಅಪಾರ ಭಕ್ತಾದಿಗಳ ಮಧ್ಯೆ. ಶ್ರದ್ಧೆ ಭಕ್ತಿಯಿಂದ ಜರುಗಿತು.

ದೇವಸ್ಥಾನದ ಪ್ರಧಾನ ಅರ್ಚಕ. ಶ್ರೀಕಾಂತ್ ನೇತೃತ್ವದಲ್ಲಿ. ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಸೇರಿದಂತೆ ಪರಿವಾರ ದೇವರುಗಳಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ ಸೇರಿದಂತೆ ವಿಶ್ವಕರ್ಮ ಸಮಾಜದ ದೇವಸ್ಥಾನ ಸಮಿತಿಯ ಯುವ ಮುಖಂಡ ರಾಮ ಬ್ರಹ್ಮ ದಂಪತಿಗಳಿಂದ ಮಹಾಸಂಕಲ್ಪ ಕಲ್ಯಾಣೋತ್ಸವ ಹಾಗೂ ವೆಂಕಟ ಸೋಮೇಶ್ವರ ದಂಪತಿಗಳು ನೇತೃತ್ವವನ್ನು ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ರಾಮ ಬ್ರಹ್ಮ ಮಾತನಾಡಿ ಕಾಲಜ್ಞಾನಿ ಪೋತಲೂರು ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಮಹಿಮೆ ಅಪಾರವಾಗಿದ್ದು, ಸಾವಿರಾರು ವರ್ಷಗಳ ಹಿಂದೆ ಬರೆದಂತ ಅವರ ಭವಿಷ್ಯತ್ಕಾಲದ ಕಾಲಜ್ಞಾನದ ಹೇಳಿಕೆಗಳು ಈಗಾಗಲೇ ಶೇಕಡ 80 ರಷ್ಟು ಕಲಿಯುಗದಲ್ಲಿ ಕಾಣಬಹುದಾಗಿದೆ. ಶೀಘ್ರದಲ್ಲಿ ಮತ್ತೊಂದು ಅವತಾರದಲ್ಲಿ ಜನ್ಮ ತಾಳುವುದಾಗಿ ಹೇಳಿದ ಅವರು, ತಮ್ಮನ್ನು ನಂಬಿದ ಭಕ್ತರಿಗೆ ಸದಾಕಾಲ ರಕ್ಷಿಸುವುದಾಗಿ. ತಿಳಿಸಿದ್ದಾರೆ ಎಂದು ಹೇಳಿದರು.

ಅರ್ಚಕ ಶ್ರೀಕಾಂತ್ ಮಾತನಾಡಿ ಕಲಿಯುಗದಲ್ಲಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಾಲಜ್ಞಾನ ಅತ್ಯಂತ ಮಹತ್ವವಾಗಿದೆ. ಅವರ ದ್ವಾದಶ ಮಂತ್ರದಿಂದ ಸಂಕಷ್ಟಗಳು ದೂರವಾಗುತ್ತದೆ ಎಂದು ಹೇಳಿದರು.

ಬಳಿಕ ಮಹಾಮಂಗಳಾರತಿ ಮಹಾಪ್ರಸಾದ ದೊಂದಿಗೆ ಕಲ್ಯಾಣೋತ್ಸವ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಸೂರಿ ಬಾಬು, ಸತ್ಯನಾರಾಯಣ, ರಾಮಕೃಷ್ಣ, ಪರಬ್ರಹ್ಮ ಸೇರಿದಂತೆ ಗಂಗಾವತಿ ತಾಲೂಕ ಸೇರಿದಂತೆ ಹೊಸಪೇಟೆ, ಸಿಂಧನೂರು ಭಾಗದಿಂದ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು.

ಮಹಾ ಶಿವರಾತ್ರಿ ಹುಣಸಿನಕೆರೆ ಬಡಾವಣೆ ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ 101 ಲೀ. ಹಾಲಿನ ಅಭಿಷೇಕ, ಭಜನೆ ಹಾಡುಗಾರಿಕೆ ಕಾರ್ಯಕ್ರಮ.

ಹಾಸನ: ನಗರದ ಹುಣಸಿನಕೆರೆ ಬಡಾವಣೆಯ ಶ್ರೀ ಕಾಶಿ ವಿಶ್ವನಾಥ ದೇವಾಲಯ ಜೀರ್ಣೊದ್ಧಾರ ಸಮಿತಿ ಹಾಗೂ ಕನ್ನಡ ರತ್ನ ಯುವಕರ ಸಂಘ, ಹುಣಸಿನಕೆರೆ ಬೀದಿ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯಕ್ತ ಇದೇ ಫೆಬ್ರವರಿ 26ರ ಬುಧವಾರ ಸಂಜೆ 4 ರಿಂದ 6ರವರಗೆ 101 ಲೀ. ಹಾಲಿನ ಅಭಿಷೇಕ ನಂತರ ರಾತ್ರಿ 7ಕ್ಕೆ ಮಹಾ ಮಂಗಳಾರತಿ, 7.30ಕ್ಕೆ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ.

ದೇವಾಲಯದ ಆವರಣದಲ್ಲಿನ ರಂಗ ವೇದಿಕೆಯಲ್ಲಿ ಸಂಜೆ 5.30ಕ್ಕೆ ಶ್ರೀ ಶಾರದ ಭಜನಾ ಮಂಡಳಿಯಿಂದ ಹಾಗೂ 6.30 ರಿಂದ ಶ್ರೀ ಛಾಯಾಪುತ್ರ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯುವುದು. 7.30 ರಿಂದ ಶ್ರೀಮತಿ ರಾಣಿ ಚರಾಶ್ರೀ ಮತ್ತು ಸಂಗಡಿಗರಿಂದ ಭಕ್ತಿ ಕೋಲಾಟ ಮತ್ತು ಭಕ್ತಿ ಗೀತೆ ಕಾರ್ಯಕ್ರಮ ಇರುವುದು. ರಾತ್ರಿ 11.30 ರಿಂದ ಬೆಳಗಿನ ಜಾವ 5.30 ವರೆಗೆ ಏಕಲವ್ಯ ಅಖಂಡ ಭಜನಾ ಮಂಡಳಿಯವರಿಂದ ಅಮೋಘ ಭಜನಾ ಕಾರ್ಯಕ್ರಮ ಇರುತ್ತದೆ.
ಮತ್ತು ಮಾರನೇ ದಿನ 27ರ ಗುರುವಾರ ಇದೇ ದೇವರ ಸನ್ನಿದಾನದಲ್ಲಿ ಮದ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಆರ್. ಕೃಷ್ಣಶೆಟ್ಟಿ, ಅಧ್ಯಕ್ಷರು ಸಮಿತಿಯ ಪರವಾಗಿ ವಿನಂತಿಸಿದ್ದಾರೆ.

ಇತರ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ: https://aratt.ai/@vishwaroopa_news_blog

ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಚನ್ನಬಸವ ಸ್ವಾಮಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷವಾದ ಅಮ್ಮನ ಕೈ ತುತ್ತು ಕಾರ್ಯಕ್ರಮ

ಗಂಗಾವತಿ: ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಚನ್ನಬಸವ ಸ್ವಾಮಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಗತಿಸಿದ 40 ವರ್ಷದ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುತ್ತದೆ. ಅದರಂತೆ ಇಂದು ಶಾಲೆಯಲ್ಲಿ ವಿಶೇಷವಾದ ಅಮ್ಮನ ಕೈ ತುತ್ತು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶಾಲೆಯ 350ಕ್ಕೂ ಹೆಚ್ಚು ಪಾಲಕರು ಶಾಲೆಗೆ ಆಗಮಿಸಿ ತಮ್ಮ ಮಕ್ಕಳೊಂದಿಗೆ ತಮ್ಮ ಅಮೃತದ ಕೈಗಳಿಂದ ತುತ್ತು ಮಾಡಿ ಮಕ್ಕಳಿಗೆ ಊಟ ಮಾಡಿಸಿದರು. ಕಾರ್ಯಕ್ರಮವು ಪಾಲಕರಿಂದಲೇ ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಪ್ರಕಾಶ್ ಗೌಡ ಪಾಟೀಲ್ ವಹಿಸಿ ಮಾತನಾಡಿದರು. ತಾಯಿಯು ದೇವರ ಸಮಾನರು ಬಾಲ್ಯದ ಮಗುವಿಗೆ ತೆಂಗಿನ ಎಳೆನೀರು ತೆಕ್ಕೊಂಡು ಬಂಗಾರದ ಮೋರೆ ತೊಳೆದವರು. ಇಂದಿನ ದಿನಮಾನಗಳಲ್ಲಿ ಅಂತಹ ಸಂಸ್ಕೃತಿಯನ್ನು ಬೆಳೆಸಿದರೆ ನಮ್ಮ ಸಮಾಜವನ್ನು ಎತ್ತರಕ್ಕೆ ಕಟ್ಟಲು ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಾಲಪ್ಪ ಎಂ ಹಾಗೂ ಕಂಪ್ಯೂಟರ್ ಶಿಕ್ಷಕರಾದ ಮಂಜುನಾಥ್ ಎಂ. ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಶ್ರೀಮತಿ ಶಿವಗೀತಾ ಸಹ ಶಿಕ್ಷಕಿ ನುಡಿಯುತ್ತಾ ಮಕ್ಕಳ ಪ್ರೀತಿ ಹಾಗೂ ಹಾರೈಕೆಯ ಜೊತೆಗೆ ಕೈ ತುತ್ತಿನ ಮೌಲ್ಯವನ್ನು ಪಾಲಕರಿಗೆ ಮಕ್ಕಳಿಗೆ ಹೃದಯಕ್ಕೆ ಮುಟ್ಟುವಂತೆ ಹೇಳಿಕೊಟ್ಟರು. ಶಾಲೆಯ ಅನೇಕ ಮಕ್ಕಳು ತಮ್ಮ ತಾಯಂದಿರ ಬಗ್ಗೆ ಗೌರವದ ಹಾಗೂ ಮಮತೆಯ ಹಿರಿದಾದ ಮಾತುಗಳನ್ನು ನುಡಿದರು. ತಾಯಿಯ ಅಮೃತದ ಕೈತುತ್ತನ್ನು ಊಟ ಮಾಡಿ ಮಕ್ಕಳು ಹಿರಿಹಿರಿ ಹಿಗ್ಗಿದರು. ಎಲ್ಲ ಶಿಕ್ಷಕ ಹಾಗೂ ಸಿಬ್ಬಂದಿ ಮತ್ತೂ ಅಕ್ಷರ ದಾಸೋಹ ಸಿಬ್ಬಂದಿಯವರು ಭಾಗಿಯಾಗಿ ಪಾಲಕರಿಗೆ ಊಟದ ವ್ಯವಸ್ಥೆ ಕೈಗೊಂಡರು. ಎಲ್ಲ ಪಾಲಕರು ಅಭಾರಿಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ಶಾಂತ, ಶ್ರೀಮತಿ ಸುಧಾಮಣಿ, ಶ್ರೀಮತಿ ನಾಗರತ್ನ, ಶ್ರೀಮತಿ ಲಕ್ಷ್ಮಿ ಹಾಗೂ ದೈಹಿಕ ಶಿಕ್ಷಕ ವಿರುಪಾಕ್ಷ, ಚಂದ್ರಕಲಾ, ಕುಮಾರ, ರೇಣುಕಾ ಹೆಚ್, ಶ್ರೀಮತಿ ಜುಲೇಖ, ಕು. ಶ್ರೀದೇವಿ ಎಲ್ಲರೂ ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆ ಕುಮಾರಿ ರೇಣುಕ ಶಿಕ್ಷಕಿಯರು ಮಾಡಿದರೆ, ಶ್ರೀಮತಿ ಚಂದ್ರಕಲಾ ವಂದಿಸಿದರು.