ಗಂಗಾವತಿ: ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಚನ್ನಬಸವ ಸ್ವಾಮಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಗತಿಸಿದ 40 ವರ್ಷದ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುತ್ತದೆ. ಅದರಂತೆ ಇಂದು ಶಾಲೆಯಲ್ಲಿ ವಿಶೇಷವಾದ ಅಮ್ಮನ ಕೈ ತುತ್ತು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶಾಲೆಯ 350ಕ್ಕೂ ಹೆಚ್ಚು ಪಾಲಕರು ಶಾಲೆಗೆ ಆಗಮಿಸಿ ತಮ್ಮ ಮಕ್ಕಳೊಂದಿಗೆ ತಮ್ಮ ಅಮೃತದ ಕೈಗಳಿಂದ ತುತ್ತು ಮಾಡಿ ಮಕ್ಕಳಿಗೆ ಊಟ ಮಾಡಿಸಿದರು. ಕಾರ್ಯಕ್ರಮವು ಪಾಲಕರಿಂದಲೇ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಪ್ರಕಾಶ್ ಗೌಡ ಪಾಟೀಲ್ ವಹಿಸಿ ಮಾತನಾಡಿದರು. ತಾಯಿಯು ದೇವರ ಸಮಾನರು ಬಾಲ್ಯದ ಮಗುವಿಗೆ ತೆಂಗಿನ ಎಳೆನೀರು ತೆಕ್ಕೊಂಡು ಬಂಗಾರದ ಮೋರೆ ತೊಳೆದವರು. ಇಂದಿನ ದಿನಮಾನಗಳಲ್ಲಿ ಅಂತಹ ಸಂಸ್ಕೃತಿಯನ್ನು ಬೆಳೆಸಿದರೆ ನಮ್ಮ ಸಮಾಜವನ್ನು ಎತ್ತರಕ್ಕೆ ಕಟ್ಟಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಾಲಪ್ಪ ಎಂ ಹಾಗೂ ಕಂಪ್ಯೂಟರ್ ಶಿಕ್ಷಕರಾದ ಮಂಜುನಾಥ್ ಎಂ. ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಶ್ರೀಮತಿ ಶಿವಗೀತಾ ಸಹ ಶಿಕ್ಷಕಿ ನುಡಿಯುತ್ತಾ ಮಕ್ಕಳ ಪ್ರೀತಿ ಹಾಗೂ ಹಾರೈಕೆಯ ಜೊತೆಗೆ ಕೈ ತುತ್ತಿನ ಮೌಲ್ಯವನ್ನು ಪಾಲಕರಿಗೆ ಮಕ್ಕಳಿಗೆ ಹೃದಯಕ್ಕೆ ಮುಟ್ಟುವಂತೆ ಹೇಳಿಕೊಟ್ಟರು. ಶಾಲೆಯ ಅನೇಕ ಮಕ್ಕಳು ತಮ್ಮ ತಾಯಂದಿರ ಬಗ್ಗೆ ಗೌರವದ ಹಾಗೂ ಮಮತೆಯ ಹಿರಿದಾದ ಮಾತುಗಳನ್ನು ನುಡಿದರು. ತಾಯಿಯ ಅಮೃತದ ಕೈತುತ್ತನ್ನು ಊಟ ಮಾಡಿ ಮಕ್ಕಳು ಹಿರಿಹಿರಿ ಹಿಗ್ಗಿದರು. ಎಲ್ಲ ಶಿಕ್ಷಕ ಹಾಗೂ ಸಿಬ್ಬಂದಿ ಮತ್ತೂ ಅಕ್ಷರ ದಾಸೋಹ ಸಿಬ್ಬಂದಿಯವರು ಭಾಗಿಯಾಗಿ ಪಾಲಕರಿಗೆ ಊಟದ ವ್ಯವಸ್ಥೆ ಕೈಗೊಂಡರು. ಎಲ್ಲ ಪಾಲಕರು ಅಭಾರಿಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ಶಾಂತ, ಶ್ರೀಮತಿ ಸುಧಾಮಣಿ, ಶ್ರೀಮತಿ ನಾಗರತ್ನ, ಶ್ರೀಮತಿ ಲಕ್ಷ್ಮಿ ಹಾಗೂ ದೈಹಿಕ ಶಿಕ್ಷಕ ವಿರುಪಾಕ್ಷ, ಚಂದ್ರಕಲಾ, ಕುಮಾರ, ರೇಣುಕಾ ಹೆಚ್, ಶ್ರೀಮತಿ ಜುಲೇಖ, ಕು. ಶ್ರೀದೇವಿ ಎಲ್ಲರೂ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಕುಮಾರಿ ರೇಣುಕ ಶಿಕ್ಷಕಿಯರು ಮಾಡಿದರೆ, ಶ್ರೀಮತಿ ಚಂದ್ರಕಲಾ ವಂದಿಸಿದರು.