ಶ್ರದ್ಧೆ ಭಕ್ತಿಯಿಂದ ಜರುಗಿದ ಕಾಲಜ್ಞಾನಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಲ್ಯಾಣ ಮಹೋತ್ಸವ.

ಗಂಗಾವತಿ: ಸಮೀಪದ ಶ್ರೀ ರಾಮನಗರದ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಗೋವಿಂದಾಂಬ ಸಮಿತ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಲ್ಯಾಣ ಮಹೋತ್ಸವ ಅಪಾರ ಭಕ್ತಾದಿಗಳ ಮಧ್ಯೆ. ಶ್ರದ್ಧೆ ಭಕ್ತಿಯಿಂದ ಜರುಗಿತು.

ದೇವಸ್ಥಾನದ ಪ್ರಧಾನ ಅರ್ಚಕ. ಶ್ರೀಕಾಂತ್ ನೇತೃತ್ವದಲ್ಲಿ. ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಸೇರಿದಂತೆ ಪರಿವಾರ ದೇವರುಗಳಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ ಸೇರಿದಂತೆ ವಿಶ್ವಕರ್ಮ ಸಮಾಜದ ದೇವಸ್ಥಾನ ಸಮಿತಿಯ ಯುವ ಮುಖಂಡ ರಾಮ ಬ್ರಹ್ಮ ದಂಪತಿಗಳಿಂದ ಮಹಾಸಂಕಲ್ಪ ಕಲ್ಯಾಣೋತ್ಸವ ಹಾಗೂ ವೆಂಕಟ ಸೋಮೇಶ್ವರ ದಂಪತಿಗಳು ನೇತೃತ್ವವನ್ನು ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ರಾಮ ಬ್ರಹ್ಮ ಮಾತನಾಡಿ ಕಾಲಜ್ಞಾನಿ ಪೋತಲೂರು ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಮಹಿಮೆ ಅಪಾರವಾಗಿದ್ದು, ಸಾವಿರಾರು ವರ್ಷಗಳ ಹಿಂದೆ ಬರೆದಂತ ಅವರ ಭವಿಷ್ಯತ್ಕಾಲದ ಕಾಲಜ್ಞಾನದ ಹೇಳಿಕೆಗಳು ಈಗಾಗಲೇ ಶೇಕಡ 80 ರಷ್ಟು ಕಲಿಯುಗದಲ್ಲಿ ಕಾಣಬಹುದಾಗಿದೆ. ಶೀಘ್ರದಲ್ಲಿ ಮತ್ತೊಂದು ಅವತಾರದಲ್ಲಿ ಜನ್ಮ ತಾಳುವುದಾಗಿ ಹೇಳಿದ ಅವರು, ತಮ್ಮನ್ನು ನಂಬಿದ ಭಕ್ತರಿಗೆ ಸದಾಕಾಲ ರಕ್ಷಿಸುವುದಾಗಿ. ತಿಳಿಸಿದ್ದಾರೆ ಎಂದು ಹೇಳಿದರು.

ಅರ್ಚಕ ಶ್ರೀಕಾಂತ್ ಮಾತನಾಡಿ ಕಲಿಯುಗದಲ್ಲಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳವರ ಕಾಲಜ್ಞಾನ ಅತ್ಯಂತ ಮಹತ್ವವಾಗಿದೆ. ಅವರ ದ್ವಾದಶ ಮಂತ್ರದಿಂದ ಸಂಕಷ್ಟಗಳು ದೂರವಾಗುತ್ತದೆ ಎಂದು ಹೇಳಿದರು.

ಬಳಿಕ ಮಹಾಮಂಗಳಾರತಿ ಮಹಾಪ್ರಸಾದ ದೊಂದಿಗೆ ಕಲ್ಯಾಣೋತ್ಸವ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಸೂರಿ ಬಾಬು, ಸತ್ಯನಾರಾಯಣ, ರಾಮಕೃಷ್ಣ, ಪರಬ್ರಹ್ಮ ಸೇರಿದಂತೆ ಗಂಗಾವತಿ ತಾಲೂಕ ಸೇರಿದಂತೆ ಹೊಸಪೇಟೆ, ಸಿಂಧನೂರು ಭಾಗದಿಂದ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು.

Leave a Reply