೧ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಬಿ.ಎಲ್ ಬುಲ್ಸ್ ಕರಾಟೆ ಸಂಸ್ಥೆಯ ಕರಾಟೆ ವಿದ್ಯಾರ್ಥಿಗಳ ಅಮೋಘ ಸಾಧನೆ.

ಗಂಗಾವತಿ: ಮೇ-೨೫ ಭಾನುವಾರದಂದು ವಿಜಯನಗರ ಜಿಲ್ಲೆಯ ಹಂಪಿನಗರದ ಪುಣ್ಯಾನಂದಪುರಿ ಕಲ್ಯಾಣ ಮಂಟಪ ಭವನದಲ್ಲಿ ೧ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಆಯೋಜನೆಯಾಗಿತ್ತು. ಈ ಸ್ಪರ್ಧೆಯಲ್ಲಿ ಸರಿಸುಮಾರು ೫೦೦ ಹೆಚ್ಚು ವಿದ್ಯಾರ್ಥಿಗಳು ವಿವಿಧ ತಾಲೂಕು ಮತ್ತು ಜಿಲ್ಲೆಗಳಿಂದ ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ಗಂಗಾವತಿಯ ಪ್ರತಿಷ್ಠಿತ ಕರಾಟೆ ತರಬೇತಿ ಸಂಸ್ಥೆಯಾದ ಬಿ.ಎಲ್. ಬುಲ್ಸ್ ಕರಾಟೆ ಡು ಸ್ಪೋರ್ಟ್ ಅಸೋಸಿಯೇಷನ್ (ರಿ) ಗಂಗಾವತಿ ವತಿಯಿಂದ ೯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಟಾ ವಿಭಾಗದಲ್ಲಿ ೨ ಪ್ರಥಮ ಸ್ಥಾನ, ೪ ದ್ವಿತೀಯ ಸ್ಥಾನ, ೩ ತೃತೀಯ ಸ್ಥಾನ ಹಾಗೂ ಕುಮುಟೆ ವಿಭಾಗದಲ್ಲಿ ೨ ಪ್ರಥಮ ಸ್ಥಾನ, ೨ ದ್ವಿತೀಯ ಸ್ಥಾನ, ೧ ತೃತೀಯ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಅಹಾನ್ ಕಟಾ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ, ಹರಿಣಿ ಕಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಚಿನ್ನು ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ, ಅಖಿಲೇಶ್ ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನ, ಯಷೀಕಾ ಕಟಾ ವಿಭಾಗದಲ್ಲಿ ತೃತೀಯ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಅಬುಬಕರ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಶರತ್ ಪಂಡಿತ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಪ್ರಣವಿ, ದಿಲೀಪ್, ಕಟಾ ವಿಭಾಗದಲ್ಲಿ ತೃತೀಯ ಪಡೆದು ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಈ ಸಂಸ್ಥೆಯ ಅಧ್ಯಕ್ಷರಾದ ಚಂದ್ರೇಗೌಡ ಪೊಲೀಸ್ ಪಾಟೀಲ್ ರವರು ಮಾತನಾಡಿ ಈ ಕರಾಟೆ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕರಾಟೆ ಮುಖ್ಯ ತರಬೇತುದರಾದ ಮಂಜುನಾಥ ರಾಥೋಡ್ ಮಾತನಾಡಿ ಮಕ್ಕಳು ತಮ್ಮ ಆತ್ಮಸ್ಥೈರ್ಯ ಮತ್ತು ಧೈರ್ಯವನ್ನು ಕಳೆದುಕೊಳ್ಳಬಾರದು. ಇವತ್ತಿನ ಸೋಲು ನಾಳಿನ ಗೆಲುವಿನ ಮೆಟ್ಟಲು ಎಂದು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು.

ಕರಾಟೆ ಶಿಕ್ಷಕರಾದ ಶಿಲ್ಪಾ. ಫಯಾಜ್, ಪ್ರಜ್ವಲ್, ಮೀನಾಕ್ಷಿ ಮತ್ತು ಕ್ರೀಡಾಪಟುಗಳ ಪೋಷಕರಾದ ಮಂಜುನಾಥ, ಸುನಿಲ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮೇ-೨೭ ರಂದು ವೆಂಕಟಗಿರಿ ಗ್ರಾಮದ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಜಯಂತಿ ಆಚರಣೆ.

ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮದ ಹಾಲಸ್ವಾಮಿ ಮಠದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸಮಸ್ತ ಭಕ್ತಾದಿಗಳಿಂದ ಇದೇ ಮೇ-೨೭ ರಂದು ಶ್ರೀ ಶನೇಶ್ವರ ಜಯಂತಿ ಆಚರಿಸಲಾಗುವುದು ಎಂದು ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ಹಾಗೂ ಭಕ್ತ ಮಂಡಳಿಯ ಪ್ರಮುಖರಾದ ಮಂಜುನಾಥ ಕುರುಗೋಡು ಅವರು ತಿಳಿಸಿದರು.


ಶ್ರೀ ಶನೇಶ್ವರ ಜಯಂತಿಯ ನಿಮಿತ್ಯವಾಗಿ ಮೇ-೨೬ ಸೋಮವಾರ ದೇವಸ್ಥಾನದಲ್ಲಿ ಶ್ರೀ ಶನೇಶ್ವರ ಸ್ವಾಮಿಗೆ ಅಭಿಷೇಕ, ಹೋಮ-ಹವನ ಸೇರಿದಂತೆ ಲೋಕಕಲ್ಯಾಣಕ್ಕಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಮೇ-೨೭ ಮಂಗಳವಾರದಂದು ಶ್ರೀ ಶನೇಶ್ವರ ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ, ವೈಭವದಿಂದ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಆಚರಿಸಲಾಗುವುದು, ಅಂದು ಮದ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಕಾರಣ ಈ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಕಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಶನೇಶ್ವರಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ವೆಂಕಟಗಿರಿ ಹಾಲಸ್ವಾಮಿ ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಭಕ್ತಮಂಡಳಿ ಪ್ರಮುಖರಾದ ಮಂಜುನಾಥ ಕುರುಗೋಡು ಮೊಬೈಲ್ ಸಂಖ್ಯೆ: ೯೩೪೨೨೭೦೪೦೮ ಗೆ ಸಂಪರ್ಕಿಸಿರಿ.