ಗಂಗಾವತಿ: ಮೇ-೨೫ ಭಾನುವಾರದಂದು ವಿಜಯನಗರ ಜಿಲ್ಲೆಯ ಹಂಪಿನಗರದ ಪುಣ್ಯಾನಂದಪುರಿ ಕಲ್ಯಾಣ ಮಂಟಪ ಭವನದಲ್ಲಿ ೧ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಆಯೋಜನೆಯಾಗಿತ್ತು. ಈ ಸ್ಪರ್ಧೆಯಲ್ಲಿ ಸರಿಸುಮಾರು ೫೦೦ ಹೆಚ್ಚು ವಿದ್ಯಾರ್ಥಿಗಳು ವಿವಿಧ ತಾಲೂಕು ಮತ್ತು ಜಿಲ್ಲೆಗಳಿಂದ ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಗಂಗಾವತಿಯ ಪ್ರತಿಷ್ಠಿತ ಕರಾಟೆ ತರಬೇತಿ ಸಂಸ್ಥೆಯಾದ ಬಿ.ಎಲ್. ಬುಲ್ಸ್ ಕರಾಟೆ ಡು ಸ್ಪೋರ್ಟ್ ಅಸೋಸಿಯೇಷನ್ (ರಿ) ಗಂಗಾವತಿ ವತಿಯಿಂದ ೯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಟಾ ವಿಭಾಗದಲ್ಲಿ ೨ ಪ್ರಥಮ ಸ್ಥಾನ, ೪ ದ್ವಿತೀಯ ಸ್ಥಾನ, ೩ ತೃತೀಯ ಸ್ಥಾನ ಹಾಗೂ ಕುಮುಟೆ ವಿಭಾಗದಲ್ಲಿ ೨ ಪ್ರಥಮ ಸ್ಥಾನ, ೨ ದ್ವಿತೀಯ ಸ್ಥಾನ, ೧ ತೃತೀಯ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಅಹಾನ್ ಕಟಾ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ, ಹರಿಣಿ ಕಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಚಿನ್ನು ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ, ಅಖಿಲೇಶ್ ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನ, ಯಷೀಕಾ ಕಟಾ ವಿಭಾಗದಲ್ಲಿ ತೃತೀಯ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಅಬುಬಕರ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಶರತ್ ಪಂಡಿತ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಪ್ರಣವಿ, ದಿಲೀಪ್, ಕಟಾ ವಿಭಾಗದಲ್ಲಿ ತೃತೀಯ ಪಡೆದು ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ಸಂಸ್ಥೆಯ ಅಧ್ಯಕ್ಷರಾದ ಚಂದ್ರೇಗೌಡ ಪೊಲೀಸ್ ಪಾಟೀಲ್ ರವರು ಮಾತನಾಡಿ ಈ ಕರಾಟೆ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕರಾಟೆ ಮುಖ್ಯ ತರಬೇತುದರಾದ ಮಂಜುನಾಥ ರಾಥೋಡ್ ಮಾತನಾಡಿ ಮಕ್ಕಳು ತಮ್ಮ ಆತ್ಮಸ್ಥೈರ್ಯ ಮತ್ತು ಧೈರ್ಯವನ್ನು ಕಳೆದುಕೊಳ್ಳಬಾರದು. ಇವತ್ತಿನ ಸೋಲು ನಾಳಿನ ಗೆಲುವಿನ ಮೆಟ್ಟಲು ಎಂದು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು.
ಕರಾಟೆ ಶಿಕ್ಷಕರಾದ ಶಿಲ್ಪಾ. ಫಯಾಜ್, ಪ್ರಜ್ವಲ್, ಮೀನಾಕ್ಷಿ ಮತ್ತು ಕ್ರೀಡಾಪಟುಗಳ ಪೋಷಕರಾದ ಮಂಜುನಾಥ, ಸುನಿಲ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.