ವಿಜಯದ್ರಿ ದೇವಸ್ಥಾನದ ವೀರಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ

ಕೊಪ್ಪಳ ತಾಲೂಕಿನ ಕಾಸನಕಂಡಿಯಲ್ಲಿ ವಿಜಯದ್ರಿ ದೇವಸ್ಥಾನದ ವೀರಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಮತ್ತು ಹಾಸನಖಂಡಿ ನಿಂಗಾಪೂರು ಹೊಸಳ್ಳಿ ಹುಲಿಗಿ ಬಂಡಿ ಅರ್ಲಾಪುರ್, ಬಗ್ನಾಳ್, ಹಿಟ್ನಾಳ ಗ್ರಾಮಸ್ಥರು ವಿಜಯವಾತ್ರಿಯಲ್ಲಿ ವೀರಾಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿದರು.

ಬೆಳಗ್ಗೆ 8:00ಗೆ ಸಂಕಲ್ಪ ಉಮಾ ಹವನಗಳು ಮತ್ತು ತುಂಗಭದ್ರಾ ಹರತಿ ಗೋಪೂಜೆ ಅಶ್ವಪೂಜೆ 111 ಮಹಿಳೆಯರಿಂದ ಕುಂಭ ಮೆರವಣಿಗೆ ವಾದ್ಯ ಮೇಳದೊಂದಿಗೆ ದೇವಸ್ಥಾನದವರೆಗೆ ಮೆರಣಿಗೆ ನಡೆಯಿತು.

ಈ ಸಂದರ್ಭದಲ್ಲಿ ತುಂಗಾ ಹಾರ್ತಿಯಲ್ಲಿ ಸಂಸದರಾದ ರಾಜಶೇಖರ್ ಹಿಟ್ನಾಳ್ ಪಿವಿ ಪಾಟೀಲ್ ಆರ್ ವಿ ಪಾಟೀಲ್ ಯಂಕಪ್ಪ ಹೊಸಳ್ಳಿ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಶ್ರಾವಣ ಸಂಭ್ರಮ ವಿಶೇಷ ಭಜನಾ ಕಾರ್ಯಕ್ರಮ ಸಂಪನ್ನ

ಗಂಗಾವತಿ: ನಗರದ ಶಾರದಾ ದೇಗುಲದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ಸೋಮವಾರ ಶಾರದಾ ಶಂಕರ ಭಕ್ತ ಭಜನಾ ಮಂಡಳಿ ಆಯೋಜಿಸಿರುವ ಶ್ರಾವಣ ಸಂಭ್ರಮ ವಿಶೇಷ ಭಜನಾ ಕಾರ್ಯಕ್ರಮ ನಾಲ್ಕನೆಯ ಸೋಮವಾರ ದಿನದಂದು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ಹಾಗೂ ಭಜನೆಯೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಶೃಂಗೇರಿ ಶಂಕರ ಮಠದ ಜಿಲ್ಲಾ ಸಂಯೋಜಕಿ ಮಾತನಾಡಿ ಶೃಂಗೇರಿಯ ಜಗದ್ಗುರುಗಳ ಅನುಗ್ರಹದ ಮೇರೆಗೆ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ಸೋಮವಾರ ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸುತ್ತಾ ಬರಲಾಗಿದ್ದು, ಭಕ್ತಿ ಮಾರ್ಗಕ್ಕೆ ಭಜನೆ ಅತ್ಯಂತ ಸಹಕಾರಿಯಾಗಿದ್ದು, ದೇವರ ನಾಮ ಸ್ಮರಣೆಯ ಮೂಲಕ ಸರ್ವರಿಗೂ ಸುಖ ಶಾಂತಿ, ಸಮೃದ್ಧಿ ದೊರೆಯುವಂತೆ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೇಮಾವತಿ ಕುಲಕರ್ಣಿ, ಸುಮಾ ಗಡದ್, ರೇಣುಕಾ, ಕುಮದಾ, ಗೀತಾ ಬಾಯಿ, ಶ್ರೀದೇವಿ ಜಗನ್ನಾಥ್ ಅಳವಂಡಿಕರ್, ರಜಿನಿ, ವೀಣಾ ಅಳವಂಡಿ ಇತರರು ಉಪಸ್ಥಿತರಿದ್ದರು.