ಶ್ರಾವಣ ಸಂಭ್ರಮ ವಿಶೇಷ ಭಜನಾ ಕಾರ್ಯಕ್ರಮ ಸಂಪನ್ನ

ಶ್ರಾವಣ ಸಂಭ್ರಮ ವಿಶೇಷ ಭಜನಾ ಕಾರ್ಯಕ್ರಮ ಸಂಪನ್ನ

ಗಂಗಾವತಿ: ನಗರದ ಶಾರದಾ ದೇಗುಲದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ಸೋಮವಾರ ಶಾರದಾ ಶಂಕರ ಭಕ್ತ ಭಜನಾ ಮಂಡಳಿ ಆಯೋಜಿಸಿರುವ ಶ್ರಾವಣ ಸಂಭ್ರಮ ವಿಶೇಷ ಭಜನಾ ಕಾರ್ಯಕ್ರಮ ನಾಲ್ಕನೆಯ ಸೋಮವಾರ ದಿನದಂದು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ಹಾಗೂ ಭಜನೆಯೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಶೃಂಗೇರಿ ಶಂಕರ ಮಠದ ಜಿಲ್ಲಾ ಸಂಯೋಜಕಿ ಮಾತನಾಡಿ ಶೃಂಗೇರಿಯ ಜಗದ್ಗುರುಗಳ ಅನುಗ್ರಹದ ಮೇರೆಗೆ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ಸೋಮವಾರ ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸುತ್ತಾ ಬರಲಾಗಿದ್ದು, ಭಕ್ತಿ ಮಾರ್ಗಕ್ಕೆ ಭಜನೆ ಅತ್ಯಂತ ಸಹಕಾರಿಯಾಗಿದ್ದು, ದೇವರ ನಾಮ ಸ್ಮರಣೆಯ ಮೂಲಕ ಸರ್ವರಿಗೂ ಸುಖ ಶಾಂತಿ, ಸಮೃದ್ಧಿ ದೊರೆಯುವಂತೆ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೇಮಾವತಿ ಕುಲಕರ್ಣಿ, ಸುಮಾ ಗಡದ್, ರೇಣುಕಾ, ಕುಮದಾ, ಗೀತಾ ಬಾಯಿ, ಶ್ರೀದೇವಿ ಜಗನ್ನಾಥ್ ಅಳವಂಡಿಕರ್, ರಜಿನಿ, ವೀಣಾ ಅಳವಂಡಿ ಇತರರು ಉಪಸ್ಥಿತರಿದ್ದರು.

Leave a Reply