ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಿ ಪ್ರಮುಖ ರಾಜಕೀಯ ನಾಯಕರೊಂದಿಗೆ ಗಂಗಾವತಿ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ ಸೋಮನಾಥ ಪಟ್ಟಣಶೆಟ್ಟಿ.

ಗಂಗಾವತಿ: ಪ್ರಸ್ತುತ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನಕ್ಕೆ ತೆರಳಿದ ಗಂಗಾವತಿಯ ಹಿರಿಯ ವಕೀಲರಾದ ಸೋಮನಾಥ ಪಟ್ಟಣಶೆಟ್ಟಿಯವರು ಡಿಸೆಂಬರ್-೧೧ ರಂದು ಗಂಗಾವತಿಯ ಅಭಿವೃದ್ಧಿ ಕುರಿತು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಬೆಳಗಾವಿಯ ಐಟಿಸಿ ವೆಲ್‌ಕಮ್ ಹೋಟಲ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಭಾಪತಿಗಳಾದ ಯು.ಟಿ. ಖಾದರ್, ಇಂಧನ ಸಚಿವ ಕೆ.ಜೆ ಜಾರ್ಜ್ ಅವರನ್ನು ಭೇಟಿ ಮಾಡಿದರು.

ಮುಖ್ಯಮಂತ್ರಿಗಳು ಹಾಗೂ ಕೆಲವು ಸಚಿವರುಗಳೊಂದಿಗೆ ಉತ್ತಮ ಒಡನಾಟ ಹೊಂದಿರುವ ಸೋಮನಾಥ ಪಟ್ಟಣಶೆಟ್ಟಿಯವರು ವಿಶ್ವವಿಖ್ಯಾತ ಅಂಜನಾದ್ರಿ ಪ್ರಾಧಿಕಾರ ರಚನೆ ಕುರಿತು ಹಾಗೂ ಗಂಗಾವತಿಯಲ್ಲಿ ಹದಗೆಟ್ಟ ರಸ್ತೆಗಳು, ಮೂಲಭೂತ ಸೌಕರ್ಯಗಳ ಕುರಿತು ಈ ಕ್ಷೇತ್ರದ ಸಮಸ್ಯೆಗಳ ಕುರಿತು ಹಾಗೂ ಈ ಭಾಗದ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯದ ಹೂಳು ತೆಗೆದು, ಗೇಟ್‌ಗಳನ್ನು ಭದ್ರವಾಗಿರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಪಟ್ಟಣಶೆಟ್ಟಿ ವಕೀಲರು ತಿಳಿಸಿದರು. https://aratt.ai/@vishwaroopa_news_blog

ಡಿಸೆಂಬರ್-೨೩ ರಂದು ಗಂಗಾವತಿಯಲ್ಲಿ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ಹಾಗೂ ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಉದ್ಘಾಟನಾ ಸಮಾರಂಭ

ಗಂಗಾವತಿ: ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಕೊಪ್ಪಳ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವನ್ನು ಇದೇ ಡಿಸೆಂಬರ್-೨೩ ರಂದು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆಸಲಿದ್ದು, ಅದರ ಜೊತೆಗೆ ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಉದ್ಘಾಟನೆ ಕಾರ್ಯಕ್ರಮ ಕೂಡಾ ನೆರವೇರಲಿದೆ.

ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವ ಕವಿಯತ್ರಿಯರು ಅಶೋಕ ಗುಡಿಕೋಟಿ, ತಾಲೂಕ ಅಧ್ಯಕ್ಷರು, ಚುಟುಕು ಸಾಹಿತ್ಯ ಪರಿಷತ್ ಗಂಗಾವತಿ ಮೊ: ೮೬೬೦೧೬೧೪೩೫, ಸುರೇಶ ಕಲಾಪ್ರಿಯ, ಪ್ರಧಾನ ಕಾರ್ಯದರ್ಶಿಗಳು ಚುಟುಕು ಸಾಹಿತ್ಯ ಪರಿಷತ್ತು ಗಂಗಾವತಿ, ಮೊ: ೯೬೧೧೧೭೦೫೬೦ ಹಾಗೂ ಮಹಾಲಕ್ಷ್ಮಿ ಕೇಸರಹಟ್ಟಿ, ಅಧ್ಯಕ್ಷರು, ಕದಳಿ ಮಹಿಳಾ ವೇದಿಕೆ ಗಂಗಾವತಿ, ಮೊ: ೭೪೮೩೯೭೫೭೧೩ ಗಳಿಗೆ ಸಂಪರ್ಕಿಸಲು ಅಶೋಕ ಗುಡಿಕೋಟಿ ತಿಳಿಸಿದ್ದಾರೆ.

https://aratt.ai/@vishwaroopa_news_blog