
ಚಿತ್ರ ಸಂತೆ ಪತ್ರಿಕೆಯಿಂದ ನೀಡಲಾಗುವ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿಗೆ ಗಂಗಾವತಿಯ ಚನ್ನಬಸವ ಕೊಟಗಿ ಆಯ್ಕೆ.
ಗಂಗಾವತಿ: ರಾಜ್ಯದ ಚಿತ್ರರಂಗ ವಿಭಾಗದ ಪ್ರತಿಷ್ಠಿತ ಪತ್ರಿಕೆಯಾದ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಉತ್ತಮ ಕನ್ನಡಿಗ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ. ಅದರಂತೆ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿಗೆ ಗಂಗಾವತಿಯ ಚನ್ನಬಸವ ಕೊಟಗಿ ಅವರು ಆಯ್ಕೆಯಾಗಿದ್ದಾರೆ. ಅವರಿಗೆ ಜುಲೈ-೧೫ ಮಂಗಳವಾರ ಬೆಂಗಳೂರಿನ ಸದಾಶಿವ ನಗರದ ಹೈಪಾರ್ಕ್ ಅಪಾರ್ಟ್ ಹೋಟಲ್‌ನ ಸಭಾಂಗಣದಲ್ಲಿ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಚನ್ನಬಸವ ಕೊಟಗಿಯವರು ಗಂಗಾವತಿಯ ನಿವಾಸಿಯಾಗಿದ್ದು, ಅವರು ಒಬ್ಬ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ…