ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಗೆ 25 ವರ್ಷ ತುಂಬಿದ ಪ್ರಯುಕ್ತ ವೇದಿಕೆಯು ತನ್ನ 25ನೇ ವಾರ್ಷಿಕೋತ್ಸವ ರಜತ ಮಹೋತ್ಸವ ಲೇಖಿಕಾ ಸಾಹಿತ್ಯ ಸಂಭ್ರಮದ ಅಂಗವಾಗಿ 25 ಸಾಧಕರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪ್ರಶಸ್ತಿ ಫಲಕ, ಸ್ಮರಣಿಕೆ, ಶಾಲು, ಫಲ ತಾಂಬೂಲಗಳನ್ನು ನವೆಂಬರ್ 9ರ ಭಾನುವಾರ ಹಾಸನದ ಎವಿಕೆ ಕಾಲೇಜು ಸಭಾಂಗಣದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಶ್ರೀಮತಿ ಶೈಲಜಾ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರು: ಗೊರೂರು ಅನಂತರಾಜು (ಹಾಸನ), ಡಾ. ವೀಣಾ ( ಸುಳ್ಯ), ಲೀಲಾವತಿ (ಹಾಸನ), ಪದ್ಮ ಆನಂದ್ (ಮೈಸೂರು) ದೀಪಿಕಾ ಚಾಟಿ (ಬೆಳಗಾವಿ), ರಾಧಾ ಟೇಕಲ್ (ಬೆಂಗಳೂರು), ಉಷಾ ನರಸಿಂಹನ್ (ಮೈಸೂರು), ಉದಯರವಿ (ಹಾಸನ), ಕೆ. ಎಂ. ಲೋಲಾಕ್ಷಿ (ಮೈಸೂರು), ಕೃಷ್ಣ ಪದಕಿ (ಶಿರಸಿ), ವಿದ್ಯಾ ಶಿರಹಟ್ಟಿ (ಧಾರಾವಾಡ ), ಗಣೇಶ ಅಮೀನಗಡ (ಮೈಸೂರು) ಯಶೋಧಾ ಡಿ (ಬೆಂಗಳೂರು), ಎನ್.ಎಲ್. ಚನ್ನೇಗೌಡ (ಹಾಸನ), ಸುಮಾ ವೀಣಾ (ಹಾಸನ), ರೂಪಾ ಜೋಶಿ (ಹುಬ್ಬಳ್ಳಿ), ಮುಕುಂದ ಗಂಗೂರ್ (ಹೊಸಪೇಟೆ), ನಾಗಲಕ್ಷ್ಮಿ ಎಂ.ಜೆ. (ಚಿಕ್ಕಮಗಳೂರು), ಡಾ. ಕರುಣಾ ಲಕ್ಷ್ಮಿ (ಮೈಸೂರು), ದಮಯಂತಿ ನರೇಗಲ್ (ಧಾರವಾಡ ), ಮಧುರಾ ಕರ್ಣಂ (ಬೆಳಗಾವಿ), ಭಾಗಿರಥಿ ಹೆಗಡೆ (ಶಿರಸಿ), ಸುಕನ್ಯಾ ಮುಕುಂದ್ (ಹಾಸನ), ಪ್ರಭಾ ದಿನಮಣಿ (ಹಾಸನ).