ಎಲ್ಲರ ಸಹಕಾರದಿಂದ ಶರನ್ನನವರಾತ್ರಿ ಕಾರ್ಯಕ್ರಮ ಯಶಸ್ವಿ: ಅಧ್ಯಕ್ಷರು ದರೋಜಿ ನಾಗರಾಜ ಶ್ರೇಷ್ಠಿ.
ಗಂಗಾವತಿ: ನಗರದ ಹಿರೇಜಂತಗಲ್ ವಿರುಪಾಪುರದಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸೆಪ್ಟಂಬರ್ 22ನೇ ತಾರೀಖಿನಿಂದ ಅಕ್ಟೋಬರ್ 1ನೇ ತಾರೀಖಿನವರೆಗೆ ನಡೆದ ಶರನ್ ನವರಾತ್ರಿಯ ಪುರಾಣವು ದೇವಸ್ಥಾನದ ಶ್ರೀ ವಾಸವಿ ವೇದಿಕೆಯಲ್ಲಿ ಹತ್ತು ದಿನಗಳವರೆಗೆ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪುರಾಣದ ಸಾನಿಧ್ಯವನ್ನು ವಹಿಸಿದ ಪರಮ ಪೂಜ್ಯಶ್ರೀ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು ಸುಳೆಕಲ್ ಅವರು ಮಾತನಾಡಿ ಶರನ್ ನವರಾತ್ರಿಯ ಒಂದೊಂದು ದೇವಿಯ ಅವತಾರವು ಪುರಾಣದಲ್ಲಿ ತಿಳಿಸಲಾಯಿತು.
ಈ ಪುರಾಣದಲ್ಲಿ ಸಮಾಜ ಬಾಂಧವರು ಭಾಗವಹಿಸಿ ಪ್ರತಿದಿನವೂ ದೇವಿಗೆ ಕುಂಕುಮಾರ್ಚನೆ, ಲಲಿತ ಸಹಸ್ರನಾಮಾವಳಿ, ಪುರಾಣ ಪ್ರವಚನ ಸಂಗೀತ, ಭಜನಾ ಕಾರ್ಯಕ್ರಮ ಸೇರಿದಂತೆ ಪ್ರತಿನಿತ್ಯವೂ ಸಮಾಜದ ಅಧ್ಯಕ್ಷರ ನೇತೃತ್ವದಲ್ಲಿ ನೆರವೇರಿಸಲಾಗಿದೆ ಎಲ್ಲರಿಗೂ ಶ್ರೀದೇವಿ ಕನ್ನಿಕಾಪರಮೇಶ್ವರಿ ಆಶೀರ್ವದಿಸಲಿ ಜೊತೆಗೆ ಮಹಾನಮಿ ದಿನದಂದು ಬನ್ನಿಯನ್ನು ತೆಗೆದುಕೊಂಡು ನಮ್ಮ ಜೀವನವನ್ನು ಬಂಗಾರ ಮಾಡಿಕೊಳ್ಳೋಣ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ದೇವಸ್ಥಾನದಲ್ಲಿ ಶರನ್ ನವರಾತ್ರಿ ಮುಗಿಯುವರೆಗೂ ಪ್ರತಿನಿತ್ಯವೂ ನಮ್ಮ ಸಮಾಜದ ಬಾಂಧವರು ಸಹಕಾರ ನೀಡಿದ್ದಾರೆ. ವಿಶೇಷವಾಗಿ ಮಹಿಳೆಯರು ದಿನನಿತ್ಯವು ಪುರಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆ ತಾಯಿ ಕನ್ನಿಕಾಪರಮೇಶ್ವರಿ ಕೃಪೆಗೆ ಪಾತ್ರರಾಗಿದ್ದರೆ ಮತ್ತು ದಿನನಿತ್ಯವೂ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಿದಂತ ವ್ಯವಸ್ಥಾಪಕರಿಗೂ ನವ ಬೃಂದಾವನ ಭಜನಾ ಮಂಡಳಿಯವರಿಗೂ ಶ್ರೀವಾಸವಿ ಮಹಿಳಾ ಮಂಡಳಿಯವರಿಗೂ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.
ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರು ದರೋಜಿ ನರಸಿಂಹ ಶ್ರೇಷ್ಠಿ, ಶ್ರೀ ವಾಸವಿ ಯುವಜನ ಸಂಘದ ಅಧ್ಯಕ್ಷ ಎನ್.ವಿ ಮಂಜುನಾಥ, ಗೌರವಾಧ್ಯಕ್ಷ ದರೋಜಿ ವೆಂಕಟೇಶ, ಶ್ರೀ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸೇರಿದಂತೆ ದಮ್ಮೂರು ರಾಜಕುಮಾರ, ಸಿರಿಗೇರಿ ಬಾಲಚಂದ್ರಯ್ಯ, ಮಲ್ಲಿಕಾರ್ಜುನ ಪ್ರಿನ್ಸಿಪಾಲರು ವಿದ್ಯಾನಿಕೇತನ ಕಾಲೇಜ್, ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿ, ಶ್ರೀಮತಿ ಪದ್ಮಾವತಿ, ಶ್ರೀಮತಿ ರಾಧಿಕಾ, ಶ್ರೀಮತಿ ಉಷಾರಾಣಿ, ವಾಸವಿ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ದಮ್ಮೂರು ಮಂಜುಳ, ಶ್ರೀಮತಿ ಎಂ.ಪಿ ಸುಮಲತಾ ಸೇರಿದಂತೆ ಸಮಾಜದ ಅಪಾರ ಮುಖಂಡರು ಹಿರಿಯರ ನೇತೃತ್ವದಲ್ಲಿ ಶರನ್ ನವರಾತ್ರಿಯ ಕೊನೆಯ ದಿನವನ್ನು ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಳಿಸಲಾಯಿತು.