ಶೃಂಗೇರಿಯ ಕಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳವರ ಪುರ ಪ್ರವೇಶ ಹಾಗೂ ಶ್ರದ್ಧೆ ಭಕ್ತಿಯಿಂದ ಜರುಗಿದ ಶೋಭಾಯಾತ್ರೆ

ಗಂಗಾವತಿ: ಶೃಂಗೇರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ ಪ್ರಯುಕ್ತ ಕಿರಿಯ ಸ್ವಾಮೀಜಿಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳ ವಿಜಯ ಯಾತ್ರೆ ಪ್ರಯುಕ್ತ, ಪುರಪ್ರವೇಶ ಮಾಡುವುದರ ಮೂಲಕ ಸರ್ವ ಭಕ್ತಾದಿಗಳು ಸಕಲ ವಾದ್ಯ ವೈಭವದೊಂದಿಗೆ ವಿವಿಧ ಮಹಿಳಾ ಭಜನಾ ಮಂಡಳಿಯವರ ಸೊಗಸಾದ ಕೋಲಾಟ, ಭಜನೆ. ಋತಿಜ್ವರ, ವೇದ ಮಂತ್ರ ಘೋಷದೊಂದಿಗೆ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿಕೊಳ್ಳುವುದರ ಮೂಲಕ ವಾಲ್ಮೀಕಿ ವೃತ್ತದಲ್ಲಿ ವೇದಮೂರ್ತಿ ಮಹೇಶ್ ಭಟ್ ತಂಡದವರಿಂದ ಮಹರ್ಷಿ ವಾಲ್ಮೀಕಿ ಅವರಿಗೆ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಸರ್ವಲಾoಕೃತ ತೆರೆದ ವಾಹನ ಮೂಲಕ ಶೋಭಾ ಯಾತ್ರೆ ನಡೆಸಲಾಯಿತು.

ಈ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರುಗಳಾದ ವೀರಭದ್ರಪ್ಪ ನಾಯಕ. ಜೋಗದ ನಾರಾಯಣಪ್ಪ ನಾಯಕ ಸೇರಿದಂತೆ ತಾಲೂಕ ಬ್ರಾಹ್ಮಣ ಸಮಾಜದ ಭಾಂಧವರು. ವಿವಿಧ ಸಮಾಜದ ಮುಖಂಡರು ಯಾವುದೇ ಭೇದ ಭಾವ ಇಲ್ಲದೆ ಸರ್ವ ಜನಾಂಗದವರು ಪಾಲ್ಗೊಂಡಿದ್ದು ವಿಶೇಷವಾಗಿ ಕಂಡುಬಂದಿತು.

ರಾಜಬೀದಿಯ ಉದ್ದಕ್ಕೂ ಸತೀಶ್ ಗುರೂಜಿ ಅವರ ನೇತೃತ್ವದ ಶ್ರೀ ರಾಮನಗರ ಕಲ್ಗೂಡಿ ಹೇರೂರು ನವ ಬೃಂದಾವನ ಭಜನಾ ಮಂಡಳಿ, ಶಾರದಾ ಶಂಕರ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ಮಂಡಳಿ ಮಹಿಳೆಯರು ದಾರಿ ಉದ್ದಕ್ಕೂ ವಿಶೇಷ ಗಮನ ಸೆಳೆದರು. ಕೊಪ್ಪಳ ರಾಯಚೂರು ವಿಜಯನಗರ ಜಿಲ್ಲೆ ಗದಗ ಭಾಗಗಳಿಂದ ಅಪಾರ ಭಕ್ತಾದಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ. ರಾಘವೇಂದ್ರ ಮೇಗೂ ರ್ ಸುದರ್ಶನ್ ಜೋಶಿ. ಆರ್ಯವೈಶ್ಯ ಸಮಾಜದ ಬಾಂಧವರು ಪಾಲ್ಗೊಂಡಿದ್ದರು .

ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯ ಫಲಿತಾಂಶ

ಗಂಗಾವತಿ: ಇತ್ತೀಚೆಗೆ ಕಲಬುರ್ಗಿಯಲ್ಲಿ ೬ನೇ ರಾಷ್ಟ್ರಮಟ್ಟದ ಅಬಾಕಸ್ & ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು ೧೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಗಂಗಾವತಿ ನಗರದ ಜೀನಿಯಸ್ ಅಬಾಕಸ್ ಸೆಂಟರ್‌ನ ೪೫ ವಿದ್ಯಾರ್ಥಿಗಳು ಭಾಗವಹಿಸಿದ್ದು, ೧೦ ವಿದ್ಯಾರ್ಥಿಗಳು ಸೂಪರ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಕುಶಿತ್ ಆರಾಧ್ಯ ಯು., ಪ್ರಥಮ್, ಆಯುಷ್ ಎನ್., ಫಾತಿಮ ತು ಜೋರಾ, ಅಮತು ರೆಹಮಾನ್, ಸೋನುಶ್ರೀ ಎ.ಟಿ., ನಿರೀಕ್ಷಾ, ರೋಜಾ ಯು., ರಿತಿಕಾ ಐಲಿ ಮತ್ತು ಶಿವಾಂಶ್ ಕೌಟಿ ಇವರುಗಳು ಪಡೆದುಕೊಂಡಿರುತ್ತಾರೆ.

ಗಡಿನ್ ಹೆಚ್.ಡಿ., ಮೊಹಮ್ಮದ್ ಅಯಾನ್, ಕೃತಿಕಾ ಎಸ್.ಹೆಚ್., ಪ್ರಿಯಾಶ್ರೀ, ಸಾತ್ವಿಕಾ ಆರ್., ಸನಾತನಿ ಹಿರೇಮಠ, ಯಶೋಧರೆ ಧಾನಿ ಈ ಏಳು ವಿದ್ಯಾರ್ಥಿಗಳು ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಉಳಿದ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನೋಬಲ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ ನೀಡಲಾಗಿದೆ.
ಈ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಸಹಕರಿಸಿದ ಪಾಲಕರಿಗೂ ಜೀನಿಯಸ್ ಅಬಾಕಸ್ ಸೆಂಟರ್‌ನ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಮತ್ತು ಆಡಳಿತಾಧಿಕಾರಿಯಾದ ಬಿ.ಎಸ್ ಪ್ರಕಾಶರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಸಮಾಜದಲ್ಲಿ ಅನಿಷ್ಟ ಮೂಡನಂಬಿಕೆಗಳ ವಿರುದ್ಧ ನಿಷ್ಠುರವಾಗಿ ವಚನಗಳನ್ನು ಬರೆದ ಏಕೈಕ ನಿಜಶರಣ ಚೌಡಯ್ಯ

ಗಂಗಾವತಿ: ನಗರದ ದುರ್ಗಮ್ಮ ದೇವಸ್ಥಾನದ ಹತ್ತಿರವಿರುವ ಶ್ರೀ ಅಂಬಿಗರ ಚೌಡಯ್ಯನವರ ವೃತ್ತದಲ್ಲಿ ಸಮಾಜ ಬಾಂಧವರೆಲ್ಲರೂ ಸೇರಿ ನಿಜಶರಣ ಚೌಡಯ್ಯ ಶರಣರ ಜಯಂತಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.

ಡಂಬದವೈರಿ ವೀರಗಣಾಚಾರಿ, ನಿಜದನಗಾರಿ, ಸಮಾಜದಲ್ಲಿ ಮೌಡ್ಯತೆಯ ವಿರುದ್ದ, ಅನಿಷ್ಠ ಪದ್ದತಿಗಳ ವಿರುದ್ದ, ಮೂಡನಂಬಿಕೆಗಳ ವಿರುದ್ಧ ನೇರವಾಗಿ ತಮ್ಮ ವಚನಾಮೃತದ ಮೂಲಕ ಸಮಾಜದ ಅಂಕುಡೊಂಕುಗಳನ್ನು ಕಠೋರವಾಗಿ ನಿಷ್ಠುರವಾಗಿ ತನ್ನ ಹೆಸರಿನಲ್ಲಿಯೇ ವಚನಗಳನ್ನು ಬರೆದ ಏಕೈಕ ನಿಜಶರಣ ಅಂದರೆ ಅದು ಅಂಬಿಗರ ಚೌಡಯ್ಯನವರು ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ತಾಲೂಕ ಅಧ್ಯಕ್ಷರಾದ ಹನುಮೇಶ ಭಟಾರಿ ಹೇಳಿದರು.

ಮುಂದುವರೆದು ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಶರಣರಲ್ಲಿ ಇವರು ಕೂಡ ಒಬ್ಬರಾಗಿ ಸಮನ್ವಯತೆ, ಸಹಬಾಳ್ವೆ, ಸಮಾನತೆ ವಿಷಯವಾಗಿ ನೇರವಾಗಿ ಪ್ರತಿಪಾದಿಸುತ್ತಿದ್ದರು. ಇಂತಹ ಒಬ್ಬ ನಾಡಿನ ಶ್ರೇಷ್ಠ ದಾರ್ಶನಿಕನ ೯೦೫ನೇ ಜಯಂತಿಯನ್ನು ಈ ದಿನ ನಾವು ಆಚರಿಸುತ್ತಿದ್ದೇವೆ. ಈ ಶರಣರ ಸಂಸ್ಕೃತಿಯನ್ನು ಉಳಿಸಿ, ಬೆಳೆಸೋಣ ಎಂದು ತಿಳಿಸಿದರು.
ಹಾಗೆಯೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ನೀಡುವ ರಾಜ್ಯಮಟ್ಟದ ಜೆ ನಾರಾಯಣಸ್ವಾಮಿ ಪ್ರಶಸ್ತಿಗೆ ಬಾಜನರಾದ ಗಂಗಾಮತ ಸಮಾಜದ ಪತ್ರಕರ್ತ ಚಂದ್ರಶೇಖರ್ ಮುಕ್ಕುಂದಿ ಇವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್.ಶ್ರೀನಾಥ, ನಗರಸಭೆಯ ಅಧ್ಯಕ್ಷ ಮೌಲಸಾಬ, ತಹಸಿಲ್ದಾರರಾದ ಯು. ನಾಗರಾಜ, ಮುಖಂಡರಾದ ನಾರಾಯಣಪ್ಪ ನಾಯಕ, ಸಮಾಜದ ಮುಖಂಡರಾದ ಮುಸ್ಟೂರು ರಾಜಶೇಖರಪ್ಪ, ಗಂಗಾಮತ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಪರಶುರಾಮ ಮಡ್ಡೇರ್, ಬಿ. ಅಶೋಕ, ಅಂಬಿಗರ ಅಂಜಿನಪ್ಪ, ಬಿ. ರಾಜು, ಎಚ್.ವೈ. ಮನಗೂಳಿ, ಮಲ್ಲಿಕಾರ್ಜುನ ಮುಕ್ಕುಂದಿ, ಆನೆಗುಂದಿ ಭೋಗೇಶ್, ಮರಳಿ ನಿರುಪಾದಿ, ಹೊಸಳ್ಳಿ ಮರಿಯಪ್ಪ, ಮರಳಿ ಹೊನ್ನಪ್ಪ, ಕೋಟಿ ಮಹಾದೇವಪ್ಪ, ಸಿದ್ದು ಹೊಸಳ್ಳಿ, ಮಲ್ಲಾಪುರ ಎರಿಸ್ವಾಮಿ, ಭೈರೇಶ, ಹನುಮೇಶ, ಗೋಪಿ, ಮೋಹನ್, ರಾಜೇಂದ್ರ ಬಟಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

ಹಾವೇರಿ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರ ನದಿಯ ದಂಡೆಯಲ್ಲಿ ಚೌಡದಾನಪುರದಲ್ಲಿ ಅಂಬಿಗರ ಚೌಡಯ್ಯ ಪೀಠ ಇದ್ದು, ಈ ಹಿಂದೆ ೨೦೧೭ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ೩೨ ಕೋಟಿಗಳಲ್ಲಿ ಕೂಡಲಸಂಗಮ ಮಾದರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಇವರ ಸಮಾಧಿಯನ್ನು ಜೀರ್ಣೋದ್ಧಾರ ಮಾಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಆ ಭರವಸೆ ಇನ್ನು ಈಡೇರಿಲ್ಲ, ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಮತ್ತೊಮ್ಮೆ ರಾಜ್ಯಕ್ಕೆ ಮುಖ್ಯಮಂತ್ರಿ ಆಗಿರುವುದರಿಂದ ಬಡ ಸಮಾಜದ ಒಳಿತಿಗಾಗಿ ಸಮಾಜದ ಬೇಡಿಕೆಯನ್ನು ಈಡೇರಿಸಬೇಕೆಂದು ಅವರಲ್ಲಿ ವಿನಂತಿಸುತ್ತೇನೆ.