ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೇ ವಾರ್ಷಿಕೋತ್ಸವದ ಬೆಳ್ಳಿ ಸಿಂಹಾಸನ ಹಾಗೂ ಪ್ರಭಾವಳಿ ಸಮರ್ಪಣೆ, ಸಾಗರದಲ್ಲಿ ಹರಿದು ಬಂತು ಭಕ್ತ ಸಮೂಹ.

ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಶಿರಡಿ ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೆಯ ವಾರ್ಷಿಕೋತ್ಸವ ಮಾರ್ಚ್-5 ಬುಧವಾರರಂದು ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು.

ಇದೇ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಅವರಿಗೆ ಬೆಳ್ಳಿ ಸಿಂಹಾಸನ ಹಾಗೂ ಬೆಳ್ಳಿ ಪ್ರಭಾವಳಿಯನ್ನು ದೇವಸ್ಥಾನ ಸಮಿತಿಯ ನೇತೃತ್ವದಲ್ಲಿ ಸಮರ್ಪಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಜೋಶಿ ಹಾಗೂ ಋತುಜರ್ ತಂಡದವರಿಂದ ಬ್ರಾಹ್ಮಿ ಮುಹೂರ್ತದಲ್ಲಿ ಕಾಕಡ ಆರತಿ, ಪಂಚಾಮೃತ ಅಭಿಷೇಕ, ಮಹಾಸಂಕಲ್ಪ, ಅಷ್ಟೋತ್ತರ ಪಾರಾಯಣ ಸೇರಿದಂತೆ ಶ್ರೀ ಸಾಯಿಬಾಬಾ ನಾಮಸ್ಮರಣೆಯನ್ನು ನಡೆಸಲಾಯಿತು. ಬಳಿಕ ಮಹಾಮಂಗಳಾರತಿ, ಮಹಾ ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ. ಶ್ರೀ ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್‌ನ ಟಿ.ರಾಮಕೃಷ್ಣ ಮಾತನಾಡಿ, ಸಾಕ್ಷಾತ್ ದತ್ತಾತ್ರೇಯ ಅವತಾರಗಳಾದ ಶ್ರೀ ಸಾಯಿಬಾಬಾ ಅವರು ನಂಬಿ ಬಂದ ಭಕ್ತರ ಉದ್ಧಾರಕ್ಕೆ ಅನುಗ್ರಹಿಸುವ ಗುರು ಪರಂಪರೆಯಲ್ಲಿ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದವರು. ಅವರ ಜೀವಿತ ಅವಧಿಯಲ್ಲಿನ ಪವಾಡಗಳು, ಮಹಿಮೆಗಳು ಅಪಾರವಾಗಿದೆ ಎಂದು ಹೇಳಿದರು.

ಸದಸ್ಯರುಗಳಾದ ಎಸ್ ಸುರೇಶ್, ಪಂಪಾಪತಿ, ಯು ಚೆನ್ನಪ್ಪ, ರಾಚೋಟಯ್ಯ ಭಗವತಿ, ರಾಮಕೃಷ್ಣ, ಗುರುರಾಜ, ಪ್ರಹ್ಲಾದ, ರಾಮಚಂದ್ರ ಶೆಟ್ಟಿ, ಎಂ ರಾಮಾಂಜನೇಯ, ಕನಕಮೂರ್ತಿ, ಗಾಳಿ ಶಿವಪ್,. ಡಾ|| ಎ.ಎಸ್.ಎನ್ ರಾಜು ಹಾಗೂ ಕಿರಣ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗೋಪಿ ರಕ್ತ ಭಂಡಾರ ಕೇಂದ್ರದ ರವರಿಂದ ರಕ್ತದಾನ ಶಿಬಿರ ನಡೆಸಲಾಯಿತು.

ಮಾರ್ಚ್-4‌ ರಂದು ಜರುಗಿದ ಶ್ರೀ ಕೊಟ್ಟೂರು ಬಸವೇಶ್ವರ ಮಹಾರಥೋತ್ಸವ

ಗಂಗಾವತಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಕೊಟ್ಟೂರು ಬಸವೇಶ್ವರ ಮಹಾರಥೋತ್ಸವ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ, ಭಕ್ತಿ ಭಾವನೆಯಿಂದ ಸಂಜೆ 5:30ಕ್ಕೆ ಶ್ರೀಮಠದ ಆವರಣದಿಂದ ಸಕಲ ವಾದ್ಯ, ವೈಭವದೊಂದಿಗೆಹೊರಟ ಮಹಾರಥೋತ್ಸವದಲ್ಲಿ ಭಕ್ತಾದಿಗಳು ನಾಣ್ಯ ಹಾಗೂ ಉತ್ತತ್ತಿಯನ್ನು ರಥೋತ್ಸವಕ್ಕೆ ಸಮರ್ಪಿಸಿ ತಮ್ಮ ಭಕ್ತಿ ಭಾವವನ್ನು. ವ್ಯಕ್ತಪಡಿಸಿದರು. ರಥೋತ್ಸವ ಕಲ್ಮಠದವರೆಗೆ ತೆರಳಿ ದೇವಸ್ಥಾನಕ್ಕೆ ಆಗಮಿಸಿತು.

ಈ. ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಮಹೇಶ್, ಹೊಸಳ್ಳಿ ಶಂಕರಗೌಡ, ನವಲಿ ವಾಸು, ಪರಗಿ ನಾಗರಾಜ್ ಸೇರಿದಂತೆ ವಿವಿಧ ಸಮಾಜ ಬಾಂಧವರು ಪಾಲ್ಗೊಂಡಿದ್ದರು..

ತ್ರಿ ಭಾಷಾ ಕವಿ ಪುಟ್ಟರಾಜ ಕವಿ ಗವಾಯಿಗಳವರ 111ನೇಯ ಜಯಂತೋತ್ಸವ.

ಬೆಂಗಳೂರು: ಇಲ್ಲಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಸ್ವರಲೋಕ ಸಂಗೀತ ಮತ್ತು ಸಾಂಸ್ಕೃತಿಕ ಮಹಾ ವಿದ್ಯಾಲಯದಲ್ಲಿ ಮಾರ್ಚ್-4‌ ಮಂಗಳವಾರದಂದು ತ್ರಿಬಾಷಾ ಕವಿ ಅಂಧರ ಬಾಳಿನ ಆಶಾಕಿರಣ ಗದಗ ವೀರೇಶ್ವರ ಪುಣ್ಯಶ್ರಮದ ದಿವ್ಯಜ್ಯೋತಿ ಲಿಂಗೈಕ್ಯ ಡಾ. ಪುಟ್ಟರಾಜ ಕವಿ ಗವಾಯಿಗಳವರ 111ನೇಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಸುನಿತಾ ಗಂಗಾವತಿ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಭವ್ಯ ಚಲ್ಲಯ್ಯ ಸೇರಿದಂತೆ ವಿದ್ಯಾಲಯದ ವಿದ್ಯಾರ್ಥಿಗಳು ಸ್ವರ ಸಂಗೀತದ ಮೂಲಕ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮತ್ತು ಪ್ರಮೋದ್ ಅವರ ಹಾರ್ಮೋನಿಯಂ ಸಾಥ್‌, ಶರಣುಕುಮಾರ್ ಹಾಗೂ ಮಹಾಂತೇಶ್ ಸುಧೀರ್ ಅವರು ತಬಲವಾದನ ನಡೆಸಿಕೊಟ್ಟರು. ಗೀತಾ ಹಾಗೂ ಸಮಾಜ ಕ್ಷೇತ್ರದ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಭಾರತ ರತ್ನ ಮರಣೋತ್ತರ ಪ್ರಶಸ್ತಿ ನೀಡಬೇಕೆಂದು. ಆಗ್ರಹಿಸಿದರು.

ಉಮಾಕಾಂತ ಅವರೆಡ್ಡಿ ಅವರಿಗೆ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿ ಪ್ರದಾನ.

ಗಂಗಾವತಿ: ತಾವರಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಸಹಪ್ರಾಧ್ಯಾಪಕರಾದ ಉಮಾಕಾಂತ ಅವರೆಡ್ಡಿ ಆವರಿಗೆ ಆಂಧ್ರಪ್ರದೇಶದ ಕುಪ್ಪಮ್‌ನ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.

ವಿಶ್ವವಿದ್ಯಾಲಯದ ಆಂಗ್ಲಭಾಷೆ ವಿಭಾಗದ ಸಂಶೋಧನಾ ವಿದ್ಯಾರ್ಥಿ ಉಮಾಕಾಂತ ಅವರೆಡ್ಡಿ ಅವರು ಡಾ. ಜಿ. ಉಮಾಮಹೇಶ್ವರ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಡಾ. ಅಮಿತಾವ್ ಘೋಶ್: ಎ ನ್ಯಾಷನಲಿಸ್ಟಿಕ್ ಅಪ್ರೋಚ್’ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಮ್ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡಿದೆ.
ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇವರಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.