ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಶಿರಡಿ ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ 25ನೆಯ ವಾರ್ಷಿಕೋತ್ಸವ ಮಾರ್ಚ್-5 ಬುಧವಾರರಂದು ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು.
ಇದೇ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಅವರಿಗೆ ಬೆಳ್ಳಿ ಸಿಂಹಾಸನ ಹಾಗೂ ಬೆಳ್ಳಿ ಪ್ರಭಾವಳಿಯನ್ನು ದೇವಸ್ಥಾನ ಸಮಿತಿಯ ನೇತೃತ್ವದಲ್ಲಿ ಸಮರ್ಪಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಜೋಶಿ ಹಾಗೂ ಋತುಜರ್ ತಂಡದವರಿಂದ ಬ್ರಾಹ್ಮಿ ಮುಹೂರ್ತದಲ್ಲಿ ಕಾಕಡ ಆರತಿ, ಪಂಚಾಮೃತ ಅಭಿಷೇಕ, ಮಹಾಸಂಕಲ್ಪ, ಅಷ್ಟೋತ್ತರ ಪಾರಾಯಣ ಸೇರಿದಂತೆ ಶ್ರೀ ಸಾಯಿಬಾಬಾ ನಾಮಸ್ಮರಣೆಯನ್ನು ನಡೆಸಲಾಯಿತು. ಬಳಿಕ ಮಹಾಮಂಗಳಾರತಿ, ಮಹಾ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭದಲ್ಲಿ. ಶ್ರೀ ಶಿರಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್‌ನ ಟಿ.ರಾಮಕೃಷ್ಣ ಮಾತನಾಡಿ, ಸಾಕ್ಷಾತ್ ದತ್ತಾತ್ರೇಯ ಅವತಾರಗಳಾದ ಶ್ರೀ ಸಾಯಿಬಾಬಾ ಅವರು ನಂಬಿ ಬಂದ ಭಕ್ತರ ಉದ್ಧಾರಕ್ಕೆ ಅನುಗ್ರಹಿಸುವ ಗುರು ಪರಂಪರೆಯಲ್ಲಿ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದವರು. ಅವರ ಜೀವಿತ ಅವಧಿಯಲ್ಲಿನ ಪವಾಡಗಳು, ಮಹಿಮೆಗಳು ಅಪಾರವಾಗಿದೆ ಎಂದು ಹೇಳಿದರು.
ಸದಸ್ಯರುಗಳಾದ ಎಸ್ ಸುರೇಶ್, ಪಂಪಾಪತಿ, ಯು ಚೆನ್ನಪ್ಪ, ರಾಚೋಟಯ್ಯ ಭಗವತಿ, ರಾಮಕೃಷ್ಣ, ಗುರುರಾಜ, ಪ್ರಹ್ಲಾದ, ರಾಮಚಂದ್ರ ಶೆಟ್ಟಿ, ಎಂ ರಾಮಾಂಜನೇಯ, ಕನಕಮೂರ್ತಿ, ಗಾಳಿ ಶಿವಪ್,. ಡಾ|| ಎ.ಎಸ್.ಎನ್ ರಾಜು ಹಾಗೂ ಕಿರಣ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗೋಪಿ ರಕ್ತ ಭಂಡಾರ ಕೇಂದ್ರದ ರವರಿಂದ ರಕ್ತದಾನ ಶಿಬಿರ ನಡೆಸಲಾಯಿತು.