ಬೆಂಗಳೂರು: ಇಲ್ಲಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಸ್ವರಲೋಕ ಸಂಗೀತ ಮತ್ತು ಸಾಂಸ್ಕೃತಿಕ ಮಹಾ ವಿದ್ಯಾಲಯದಲ್ಲಿ ಮಾರ್ಚ್-4 ಮಂಗಳವಾರದಂದು ತ್ರಿಬಾಷಾ ಕವಿ ಅಂಧರ ಬಾಳಿನ ಆಶಾಕಿರಣ ಗದಗ ವೀರೇಶ್ವರ ಪುಣ್ಯಶ್ರಮದ ದಿವ್ಯಜ್ಯೋತಿ ಲಿಂಗೈಕ್ಯ ಡಾ. ಪುಟ್ಟರಾಜ ಕವಿ ಗವಾಯಿಗಳವರ 111ನೇಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಸುನಿತಾ ಗಂಗಾವತಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಭವ್ಯ ಚಲ್ಲಯ್ಯ ಸೇರಿದಂತೆ ವಿದ್ಯಾಲಯದ ವಿದ್ಯಾರ್ಥಿಗಳು ಸ್ವರ ಸಂಗೀತದ ಮೂಲಕ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮತ್ತು ಪ್ರಮೋದ್ ಅವರ ಹಾರ್ಮೋನಿಯಂ ಸಾಥ್, ಶರಣುಕುಮಾರ್ ಹಾಗೂ ಮಹಾಂತೇಶ್ ಸುಧೀರ್ ಅವರು ತಬಲವಾದನ ನಡೆಸಿಕೊಟ್ಟರು. ಗೀತಾ ಹಾಗೂ ಸಮಾಜ ಕ್ಷೇತ್ರದ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಭಾರತ ರತ್ನ ಮರಣೋತ್ತರ ಪ್ರಶಸ್ತಿ ನೀಡಬೇಕೆಂದು. ಆಗ್ರಹಿಸಿದರು.