ಗಂಗಾವತಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಕೊಟ್ಟೂರು ಬಸವೇಶ್ವರ ಮಹಾರಥೋತ್ಸವ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ, ಭಕ್ತಿ ಭಾವನೆಯಿಂದ ಸಂಜೆ 5:30ಕ್ಕೆ ಶ್ರೀಮಠದ ಆವರಣದಿಂದ ಸಕಲ ವಾದ್ಯ, ವೈಭವದೊಂದಿಗೆಹೊರಟ ಮಹಾರಥೋತ್ಸವದಲ್ಲಿ ಭಕ್ತಾದಿಗಳು ನಾಣ್ಯ ಹಾಗೂ ಉತ್ತತ್ತಿಯನ್ನು ರಥೋತ್ಸವಕ್ಕೆ ಸಮರ್ಪಿಸಿ ತಮ್ಮ ಭಕ್ತಿ ಭಾವವನ್ನು. ವ್ಯಕ್ತಪಡಿಸಿದರು. ರಥೋತ್ಸವ ಕಲ್ಮಠದವರೆಗೆ ತೆರಳಿ ದೇವಸ್ಥಾನಕ್ಕೆ ಆಗಮಿಸಿತು.
ಈ. ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಮಹೇಶ್, ಹೊಸಳ್ಳಿ ಶಂಕರಗೌಡ, ನವಲಿ ವಾಸು, ಪರಗಿ ನಾಗರಾಜ್ ಸೇರಿದಂತೆ ವಿವಿಧ ಸಮಾಜ ಬಾಂಧವರು ಪಾಲ್ಗೊಂಡಿದ್ದರು..