ಬಂಜಾರ ಕೋವಲ್ ರಾಜ್ಯಮಟ್ಟದ ಗಾಯನ ಸ್ಪರ್ಧೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ವತಿಯಿಂದ ಬಂಜಾರ ಕೋವಲ್ ರಾಜ್ಯಮಟ್ಟದ ಗಾಯನ ಸ್ಪರ್ಧೆ-01 ಭಾನುವಾರ (10-8-2025) ರಂದು ನಡೆಯಿತು.

ಈ ಸ್ಪರ್ಧೆಯಲ್ಲಿ ಬಂಜಾರ ಗಾಯಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ಗಾಯನ ಕೌಶಲ್ಯವನ್ನು ಪ್ರದರ್ಶಿಸಿದರು.

ಕವಿತಾಬಾಯಿ ವೈ ಭದ್ರಾವತಿ, ವಾಲ್ಯನಾಯ್ಕ ಎಲ್ ವಿಜಯನಗರ, ಪ್ರಕಾಶ ಲಕ್ಷ್ಮಣ ವಿಜಯನಗರ, ಹನುಮಂತನಾಯ್ಕ ಸಿ ದಾವಣಗೆರೆ, ಹನುಮಂತನಾಯ್ಕ ಚವ್ಹಾಣ್, ರಮೇಶ್ .ಎಸ್ ಲಮಾಣಿ, ಪ್ರೇಮಾ ಸಂತೋಷ ರಾಠೋಡ್, ಗಣೇಶ್ ಎಲ್ ವಿಜಯನಗರ, ಭಾಗ್ಯ .ಎಸ್. ಶಿವಮೊಗ್ಗ, ಕು. ಟಿ. ದೀಪಾ ವಿಜಯನಗರ, ತಿಮ್ಮನಾಯ್ಕ.ಎಲ್ ವಿಜಯನಗರ, ಶೈಲಜಾ ಕೆ. ವಿ. ಜೈಪುರ

ಈ ಸ್ಪರ್ಧೆ ನಿರಂತರವಾಗಿ 15 ವಾರಗಳವರೆಗೆ ನಡೆಯಲಿದ್ದು, ಬಂಜಾರ ಜನಾಂಗದ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿವಿಧ ಹಾಡುಗಳನ್ನು ಹಾಡಲಾಗುತ್ತದೆ.

ಉತ್ತಮ ಗಾಯಕರನ್ನು ಆಯ್ಕೆ ಮಾಡಿ, ಅವರಿಗೆ ಬಂಜಾರ ಕೋವಲ್ 2026 ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿಯ ಸಂಸ್ಥಾಪಕ ಅಧ್ಯಕ್ಷರಾದ ಮಧುನಾಯ್ಕ ಲಂಬಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾವತಿ ನಗರದ ಕನ್ನಡ ಜಾಗೃತಿ ಭವನದಲ್ಲಿ ನೂಲಹುಣ್ಣಿಮೆ ಪ್ರಯುಕ್ತ ಶಿವಾನುಗೋಷ್ಠಿ ಕಾರ್ಯಕ್ರಮ
ಗಂಗಾವತಿ ನಗರದ ಹೊಸಳ್ಳಿ ರಸ್ತೆಯ ಲಿಟಲ್ ಹಾರ್ಟ್ಸ್ ಶಾಲೆ ಹತ್ತಿರವಿರುವ ಕನ್ನಡ ಜಾಗೃತಿ ಸಮಿತಿ ಭವನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಆಗಸ್ಟ್-೧೨, ಮಂಳವಾರ, ನೂಲಹುಣ್ಣಿಮೆ ಪ್ರಯುಕ್ತ ೧೧ನೇ ಶಿವಾನುಭವ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ (ರಿ), ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ, ಹಾಗೂ ಕನ್ನಡ ಜಾಗೃತಿ ಸಮಿತಿ ಗಂಗಾವತಿ ಇವರುಗಳ ಸಹಯೋಗದಲ್ಲಿ ಆಯೋಜಿಸಿದೆ.
ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಗಂಗಾವತಿ ಕಲ್ಮಠದ ಮ.ನಿ.ಪ್ರ ಶ್ರೀ ಡಾ. ಕೊಟ್ಟೂರು ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಹೆಬ್ಬಾಳ ಬೃಹನ್ಮಠದ ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಮಾನವಿಯ ಮುಕ್ತಾಗುಚ್ಛ ಬೃಹನ್ಮಠ ಕಲ್ಮಠದ ಶ್ರೀ ಷ.ಬ್ರ. ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಹ ಉಪಸ್ಥಿತರಿರುತ್ತಾರೆ.
ಬಳಗಾನೂರು ಶ್ರೀ ಮರಿಶಿವಯೋಗಿಗಳ ಮಠದ ಶ್ರೀ ಮ.ನಿ.ಪ್ರ. ಸಿದ್ಧಬಸವ ಮಹಾಸ್ವಾಮಿಗಳು ಕೂಡ ಈ ಸಂದರ್ಭದಲ್ಲಿ ವಹಿಸಲಿದ್ದರೆ.
ಗೋಷ್ಠಿಯಲ್ಲಿ ಉಪನ್ಯಾಸವನ್ನು ಇಟಗಿ ಚಿಕ್ಕಮ್ಯಾಗೇರಿ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ. ೧೦೮ ಡಾ. ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ನೀಡಲಿದ್ದಾರೆ.
ಈ ಕಾರ್ಯಕ್ರಮವು ಸುಳೇಕಲ್ ಬೃಹನ್ಮಠದ ಪ.ಪೂ ಶ್ರೀ ಭುವನೇಶ್ವರಯ್ಯ ತಾತನವರು ಮತ್ತು ಅರಳಹಳ್ಳಿ ಬೃಹನ್ಮಠದ ಪ.ಪೂ ಶ್ರೀ ಗವಿಸಿದ್ದಯ್ಯ ತಾತನವರು ಹಾಗೂ ಪ.ಪೂ ಶ್ರೀ ಶರಣಬಸವ ದೇವರು ನೇತೃತ್ವದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ಗಾಲಿ ಜನಾರ್ಧನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಭಾಗವಹಿಸಲಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡ ಮತ್ತು ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿಯವರೂ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಕಳಕನಗೌಡ ಪೊಲೀಸ್ ಪಾಟೀಲ್ ಹಾಗೂ ಗಂಗಾವತಿ ತಾಲೂಕ ಅಧ್ಯಕ್ಷ ಗಿರೇಗೌಡ ಹೊಸಕೇರಾ ಕೂಡ ಭಾಗವಹಿಸಲಿದ್ದಾರೆ.
ಬಿ.ಜೆ.ಪಿ ಮುಖಂಡರಾದ ವಿರುಪಾಕ್ಷಪ್ಪ ಸಿಂಗನಾಳ, ಸಿದ್ರಾಮಯ್ಯಸ್ವಾಮಿ, ಸಂಗಮೇಶ ಸುಗ್ರೀವ, ಅಂತರಾಷ್ಟ್ರೀಯ ಹಾಸ್ಯ ಕಲಾವಿದ ಬೀಚಿ ಗಂಗಾವತಿ ಪ್ರಾಣೇಶ ಕೂಡ ಹಾಜರಾಗಲಿದ್ದಾರೆ. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ಶಿವಕುಮಾರ ಮಾಲಿಪಾಟೀಲ್ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಸಾಹಿತಿಗಳು, ಕವಿಗಳು ಹಾಗೂ ಮಹಿಳೆಯರು ಭಾಗವಹಿಸಲು ಕೋರಲಾಗಿದೆ.
ಬಸವ ಸಂಸ್ಕೃತಿ ಅಭಿಯಾನಕ್ಕೆ ಪೂರ್ವಭಾವಿ ಸಭೆ ಆಯೋಜನೆ.

ಲಿಂಗಾಯತ್ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಹಾಗೂ ರಾಷ್ಟ್ರೀಯ ಬಸವದಳ ಸೇರಿ ಸಭೆಯಲ್ಲಿ ಪಾಲ್ಗೊಂಡವು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ಕ, ಕದಳಿ ವೇದಿಕೆ, ಅಕ್ಕಮಹಾದೇವಿ ಮಹಿಳಾ ಮಂಡಳಿ ಸದಸ್ಯರೂ ಸಹ ಹಾಜರಿದ್ದರು.

ಕೊಪ್ಪಳ ಸರ್ವ ಬಸವಪರ ಸಂಘಟನೆಗಳ ಸಂಯೋಗದೊಂದಿಗೆ ಪೂರ್ವಭಾವಿ ಸಭೆಯನ್ನು ಕೊಪ್ಪಳದ ಶಾಂತವೇದ ಕಲ್ಯಾಣ ಮಂಟಪದಲ್ಲಿ ಸಭೆ ಸಂಜೆ 6 ಗಂಟೆಗೆ ನಡೆಸಲಾಯಿತು.

ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಎಲ್ಲಾ ಪದಾಧಿಕಾರಿಗಳು ಹಾಗೂ ಬಸವಭಕ್ತರು ಬಂದು ಆಗಮಿಸಿ , ತಮ್ಮ ಸಲಹೆ ಸೂಚನೆಳನ್ನು ನೀಡಿದ್ದಾರೆ.

ಈ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಭಾಲ್ಕಿ ಹಿರೇಮಠದ ಶ್ರೀ ಪೂಜ್ಯ ಗುರುಬಸವ ಪಟ್ಟದ್ ದೇವರು ವಹಿಸಿದರು.

ಸಭೆಯಲ್ಲಿ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದ ರೂಪರೇಷೆ ಕುರಿತು ಚರ್ಚೆ ನಡೆಯಿತು. ಎಲ್ಲಾ ಬಸವಭಕ್ತರಿಂದ ಅಮೂಲ್ಯ ಸಲಹೆಗಳು ಬಂದವು.

ಕೊಪ್ಪಳ ಜಿಲ್ಲಾ ಘಟಕವು ಬೇರೆ ಬೇರೆ ಸಮಿತಿಗಳನ್ನು ರಚಿಸಿತು. ಗಂಗಾವತಿಯಿಂದ ಬಸವಭಕ್ತರು ಶ್ರೀ ಪರಮಪೂಜ್ಯ ಗುರುಬಸವ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಕೊಪ್ಪಳದ ಹಿರಿಯರಾದ ವೀರೇಶ್ ಬಳ್ಳಳ್ಳಿ, ಕೆ. ಶರಣಪ್ಪ ವಕೀಲರು, ಶ್ರೀಶೈಲಪ್ಪ ಪಟ್ಟಣಶೆಟ್ಟಿ, ಜಿ. ನಾಗರಾಜ್, ಚನ್ನಬಸವ ಕೊಟಗಿ, ಏ.ಕೆ. ಮಹೇಶ್ ಕುಮಾರ್, ಪತ್ರಪ್ಪ, ನಿಜಲಿಂಗಪ್ಪ ಮೆಣಸಗಿ, ತಿಪ್ಪಣ್ಣ ಸಿದ್ದಣ್ಣ, ಪಂಪಣ್ಣ ಮತ್ತು ಅನೇಕರು ಭಾಗವಹಿಸಿದರು.