ವಿಜಯಕುಮಾರ ಗದ್ದಿ ಅವರ ಮನೆಯಲ್ಲಿ ಯಶಸ್ವಿಯಾಗಿ ಜರುಗಿದ ಆಗಸ್ಟ್-೨೨, ೨೦೨೫ ರ ವಚನ ಶ್ರಾವಣ




ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಘಟಕ ಪದಾಧಿಕಾರಿಗಳ ನೇಮಕಾತಿಯು ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹೆಚ್. ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಆಗಸ್ಟ್-೨೩ ಶನಿವಾರ ನಗರದ ಕೋರ್ಟ್ ಮುಂಭಾಗದ ಶ್ರೀ ಸಾಯಿ ಹೋಟಲ್ ಸಭಾಂಗಣದಲ್ಲಿ ನಡೆಯಿತು.
ಗಂಗಾವತಿ ತಾಲೂಕ ಘಟಕದ ನೂತನ ಅಧ್ಯಕ್ಷರನ್ನಾಗಿ ರಾಮಕೃಷ್ಣ ಸಿ.ಡಿ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಚನ್ನಬಸವ ಮಾನ್ವಿ ಹಾಗೂ ಖಜಾಂಜಿಯಾಗಿ ದೇವದಾನಂ ಅವರು ಆಯ್ಕೆಯಾದರು ಎಂದು ಜಿಲ್ಲಾ ಅಧ್ಯಕ್ಷರಾದ ರಮೇಶ ಕೋಟಿ ಅವರು ತಿಳಿಸಿದರು.
ಪದಾಧಿಕಾರಿಗಳ ಆಯ್ಕೆಯ ಪೂರ್ವದಲ್ಲಿ ನೇತೃತ್ವವಹಿಸಿದ್ದ ಹೆಚ್. ಮಲ್ಲಿಕಾರ್ಜುನ ಅವರು ಮಾತನಾಡಿ, ಈ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಂತೆ ಚುನಾವಣೆ ಮೂಲಕ ಆಯ್ಕೆ ಮಾಡಲಾಗುವುದು.
ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳು ಸಂಘದ ಬೈಲಾಗಳಲ್ಲಿನ ನಿಯಮಗಳಿಗೆ ಬದ್ಧರಾಗಿ, ಸಂಘದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ಮಾರ್ಗದರ್ಶನದಂತೆ ಸಂಘವನ್ನು ಬಲಪಡಿಸಿಕೊಳ್ಳಬೇಕು.
ಸಂಘದ ಎಲ್ಲಾ ಸದಸ್ಯರ ವಿಶ್ವಾಸವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಅದರಂತೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಗಳಿಗೆ ಆಕಾಂಕ್ಷಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಎಲ್ಲಾ ಸದಸ್ಯರ ಮತದಾನದ ಮೂಲಕ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ರಾಮಕೃಷ್ಣ ಸಿ.ಡಿ ಯವರು ಮಾತನಾಡಿ, ಮತ ಚಲಾಯಿಸಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಸಂಘದ ರಾಜ್ಯ, ಜಿಲ್ಲಾ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಂಘವನ್ನು ಒಮ್ಮತದಿಂದ ಮುನ್ನಡೆಸಿಕೊಂಡು ಹೋಗುವುದಾಗಿ ಹಾಗೂ ಸಂಘದ ಯಾವುದೇ ಸದಸ್ಯರು ತಮ್ಮ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ಇತ್ಯರ್ಥಪಡಿಸಿಕೊಳ್ಳಬೇಕು.
ಸಂಘಕ್ಕೆ ಮುಜುಗರವುಂಟು ಮಾಡುವಂತಹ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಸದಸ್ಯರಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಮಂಜುನಾಥ ಎಂ., ಡಿ.ಎಂ. ಸುರೇಶ, ದೇವದಾನಂ, ಹೆಚ್. ಭೋಗೇಶ, ಸೋಮಪ್ಪ, ಎಂ.ಡಿ ಗೌಸ್, ಶರಣಯ್ಯ ಹಿರೇಮಠ, ನಿಂಗಪ್ಪ ನಾಯಕ, ಜೆ. ಶ್ರೀನಿವಾಸ, ಎನ್. ಮಲ್ಲಿಕಾರ್ಜುನ, ಎಸ್. ಮಾರ್ಕಂಡೇಯ, ಮಂಜುನಾಥ ಆರತಿ, ನಾಗರಾಜ ಅಂಗಡಿ ಹಾಗೂ ಮಂಜುನಾಥ ವಣಗೇರಿ ಇವರುಗಳು ಉಪಸ್ಥಿತರಿದ್ದರು.
ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಗಂಗಾವತಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನ ವಿನಾಯಕ ದೇವಸ್ಥಾನದ ನಾಲ್ಕನೆಯ ವರ್ಷದ ವಾರ್ಷಿಕೋತ್ಸವ ನಡೆಯಲಿದೆ.
ದಿನಾಂಕ 25 ರಂದು ಸೋಮವಾರ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಎಂದು ಸಮಿತಿಯ ಅಧ್ಯಕ್ಷ ಚನ್ನಬಸಪ್ಪ ಸೇರಿದಂತೆ ಅಲ್ಲಿನ ವಾಹನ ಚಾಲಕರ ಮತ್ತು ಮಾಲೀಕರ ಸದಸ್ಯರುಗಳು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಾದ್ರಪದ ಮಾಸದ ಸೋಮವಾರ ದಿನದಂದು ಜ್ಞಾನ ವಿನಾಯಕ ದೇವಸ್ಥಾನದಲ್ಲಿ ಹಲವಾರು ಪೂಜಾ ಕಾರ್ಯಕ್ರಮಗಳನ್ನು ನಡೆಯಲಿವೆ.
ಶ್ರೀ ವಿನಾಯಕನಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ ಸೇರಿದಂತೆ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಸೂಳೇಕಲ್ ಬೃಹನ್ ಮಠದ ಶ್ರೀ ವೇದಮೂರ್ತಿ ಭುವನೇಶ್ವರ ತಾತನವರು ಕಲ್ಮಠದ ಡಾಕ್ಟರ್ ಕೊಟ್ಟೂರು ಮಹಾಸ್ವಾಮಿಗಳು ಸೇರಿದಂತೆ ಶಾಸಕ ಜನಾರ್ದನ್ ರೆಡ್ಡಿ ಭಾಗವಹಿಸಲಿದ್ದಾರೆ.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ರಾಜಕೀಯ ಮುಖಂಡರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಡಾ ಶಿವಕುಮಾರ್ ಮಾಲಿಪಾಟೀಲ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದ ಅವರು ಸಾರ್ವಜನಿಕರಿಗಾಗಿ ಅನ್ನ ದಾಸೋಹ ನಡೆಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಾಹನ ಚಾಲಕರು ಮಾತನಾಡಿ ಸದರಿ ಕಾಲೇಜಿನ ಗೃಹರಕ್ಷಕ ದಳದ ಕಚೇರಿಯ ಪಕ್ಕದಲ್ಲಿರುವ ಪರಿಸರವು ಅತ್ಯಂತ ಕೆಟ್ಟ ವಾಸನೆಯಿಂದ ಕೂಡಿದ್ದು ಕಳೆದ ನಾಲ್ಕು ವರ್ಷದಿಂದ ಅಧ್ಯಕ್ಷ ಶರಣಬಸಪ್ಪ ಅವರ ನೇತೃತ್ವದಲ್ಲಿ ಸ್ವಚ್ಛಗೊಳಿಸಿ ದೇವಸ್ಥಾನವನ್ನು ನಿರ್ಮಿಸುವುದರ ಮೂಲಕ ಮಾದರಿಯನ್ನಾಗಿ ಮಾಡಿದ್ದಾರೆ.
ವಾಹನ ಚಾಲಕರ ಹಿತ ಕಾಪಾಡುವ ದೇವಸ್ಥಾನ ಮುಂದೊಂದು ದಿನ ಬೃಹತ್ ಶಕ್ತಿ ಕೇಂದ್ರ ವಾಗಲಿದೆ ಎಂದು ಹೇಳಿದರು.

ಗಂಗಾವತಿ ನಗರದ ಆರ್ಯವೈಶ್ಯ ಸಮಾಜದ ಜಯನಗರದ ಮಾಂತಗುಂಡ ಶಾಲೆ ಹತ್ತಿರ ಇರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ಅಡಿಗಲು ಸಮಾರಂಭ.
ಇದೇ ದಿನಾಂಕ 25 ಸೋಮವಾರ ದಿನದಂದು ಜರುಗಲಿದೆ ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪ ರಾಣಿ ರೈಚೂರ್ ಹೇಳಿದರು.
ಅವರು ಶನಿವಾರದಂದು ವಾಸವಿ ಕಾರ್ಯಾಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಅಂದು ಬೆಳಿಗ್ಗೆ ಗಂಗೆ ಪೂಜೆ. ಪೂರ್ಣ ಕುಂಭದೊಂದಿಗೆ ಶ್ರೀ ನಗರೇಶ್ವರ ದೇವಸ್ಥಾನದಿಂದ ಸಕಲ ವಾದ್ಯ ವೈಭವದೊಂದಿಗೆ ದೇವಸ್ಥಾನ ನಿರ್ಮಾಣದ ಸ್ಥಳಕ್ಕೆ ಹೋಗಲಾಗುತ್ತಿದ್ದು.
ಭೂಮಿ ಪೂಜೆಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಗರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ದಿಗಂಬರ್ ಭಟ್ ಜೋಶಿ ನೆರವೇರಿಸಲಿದೆ. ಸಮಸ್ತ ಆರ್ಯವೈಶ್ಯ ಸಮಾಜ ಬಾಂಧವರು ಆಗಮಿಸಬೇಕೆಂದು ಮನವಿ ಮಾಡಿದರು.
ಕಾರ್ಯದರ್ಶಿ ಈಶ್ವರ ಶೆಟ್ಟಿ ಮಾತನಾಡಿ, ಗಂಗಾವತಿ ಆರ್ಯವೈಶ್ಯ ಸಮಾಜದ ಹಲವು ದಶಕಗಳ ಕನಸು ನನಸಾಗುವ ದಿನ ಸಮೀಪಸುತ್ತಿದೆ.
ಕುಲದೇವತೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ನಿರ್ಮಾಣ ಭೂಮಿ ಪೂಜ ಕಾರ್ಯಕ್ರಮಕ್ಕೆ ಶಾಸಕರಾದ ಗಾಲಿ ಜನಾರ್ದನ್ ರೆಡ್ಡಿ ಸಂಸದರಾದ ರಾಜಶೇಖರ್ ಹಿಟ್ನಾಳ್ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಮಾಜಿ ವಿಧಾನಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್ ಸೇರಿದಂತೆ ಇತರ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
ಸಮಾಜದ ಹಿರಿಯರು ಕುಟುಂಬ ಸಮೇತ ಭೂಮಿ ಪೂಜೆ ಅಡಿಗಲು ಕಾರ್ಯಕ್ರಮಕ್ಕೆ ಭಾಗವಹಿಸಿ ಕಾರ್ಯಕ್ರಮ ಯಶಸ್ಸಿಗೊಳಿಸಬೇಕೆಂದು ತಿಳಿಸಿದರು.
ಆರ್ಯವೈಶ್ಯ ಸಮಾಜ ಮಹಿಳಾ ಅಧ್ಯಕ್ಷರಾದ ಭಾಗ್ಯ ಈಶ್ವರ್ ಶ್ರೇಷ್ಠಿ, ಉಪಾಧ್ಯಕ್ಷರಾದ ಜಿ ಸುರೇಶ ಶ್ರೇಷ್ಠಿ, ಕಾರ್ಯದರ್ಶಿ ಈಶ್ವರ ಶ್ರೇಷ್ಠಿ, ಖಜಂಚಿ ಮಾರುತಿ ಪ್ರಸಾದ್ ರಾಯಚೂರು.
ಯುವ ಘಟಕದ ಅಧ್ಯಕ್ಷ ಪ್ರಸಾದ ಪಾಂಘಂಟಿ ಸೇರಿದಂತೆ ಇತರರು ಭೂಮಿ ಪೂಜ ಸಮಾರಂಭ ಕುರಿತು ಮಾತನಾಡಿದರು.
