ಶ್ರಾವಣ ಮಾಸದ ಅಂಗವಾಗಿ ಗಂಗಾವತಿ ನಗರದಲ್ಲಿ ಒಂದು ತಿಂಗಳ ಪರ್ಯಂತ ನಡೆಯುತ್ತಿರುವ ವಚನ ಶ್ರಾವಣ ಕಾರ್ಯಕ್ರಮ.
ಮೂವತ್ತನೇ ದಿನವಾದ ಆಗಸ್ಟ್-೨೨ ಶುಕ್ರವಾರ ಸ್ನೇಹ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಗದ್ದಿಯವರ ಮನೆಯಲ್ಲಿ ಜರುಗಿತು.
ಈ ಕಾರ್ಯಕ್ರಮದ ಗೌರವ ಉಪಸ್ಥಿತಿ ವಹಿಸಿದ್ದ ವಿಜಯಕುಮಾರ ಗದ್ದಿ ಮಾತನಾಡಿ, ಈ ವಚನ ಶ್ರಾವಣ ಕಾರ್ಯಕ್ರಮವು ಮನೆ ಮನೆಗಳಿಂದ ಮನ ಮನಗಳಿಗೆ ವಚನ ಸಂದೇಶ ಹರಡುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ಡಾ|| ರಾಜಶೇಖರ ನಾರಿನಾಳ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಶೈಲ ಪಟ್ಟಣಶೆಟ್ಟಿ, ಕೆ.ಬಸವರಾಜ್, ಎ.ಕೆ. ಮಹೇಶಕುಮಾರ, ಪಂಪಣ್ಣ, ಟಿ ದಿಲೀಪಕುಮಾರ ವಂದಾಲ, ರಾಜಶೇಖರ್ ವೈಜಾಪುರ್, ವೀರಣ್ಣ ಅರಸುಣಿಸಿ, ಕೆ.ಶರಬಣ್ಣ, ಶ್ರೀಮತಿ ವಿಜಯಲಕ್ಷ್ಮೀ ಗದ್ದಿ ಹಾಗೂ ರಾಷ್ಟ್ರೀಯ ಬಸವದಳ, ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ನಗರದ ಬಸವ ಭಕ್ತರು ಹಾಗೂ ಧ್ಯಾನ ಬಳಗದ ಸದಸ್ಯರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಮಾಡಿದರು.
ಈ ಕಾರ್ಯಕ್ರಮವನ್ನು ವಿರೇಶ ಅಸರೆಡ್ಡಿಯವರು ನಿರೂಪಣೆಗೈದರು.

