ಗಂಗಾವತಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನ ವಿನಾಯಕ ದೇವಸ್ಥಾನದ ನಾಲ್ಕನೆಯ ವರ್ಷದ ವಾರ್ಷಿಕೋತ್ಸವ ನಡೆಯಲಿದೆ.
ದಿನಾಂಕ 25 ರಂದು ಸೋಮವಾರ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಎಂದು ಸಮಿತಿಯ ಅಧ್ಯಕ್ಷ ಚನ್ನಬಸಪ್ಪ ಸೇರಿದಂತೆ ಅಲ್ಲಿನ ವಾಹನ ಚಾಲಕರ ಮತ್ತು ಮಾಲೀಕರ ಸದಸ್ಯರುಗಳು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಾದ್ರಪದ ಮಾಸದ ಸೋಮವಾರ ದಿನದಂದು ಜ್ಞಾನ ವಿನಾಯಕ ದೇವಸ್ಥಾನದಲ್ಲಿ ಹಲವಾರು ಪೂಜಾ ಕಾರ್ಯಕ್ರಮಗಳನ್ನು ನಡೆಯಲಿವೆ.
ಶ್ರೀ ವಿನಾಯಕನಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ ಸೇರಿದಂತೆ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಸೂಳೇಕಲ್ ಬೃಹನ್ ಮಠದ ಶ್ರೀ ವೇದಮೂರ್ತಿ ಭುವನೇಶ್ವರ ತಾತನವರು ಕಲ್ಮಠದ ಡಾಕ್ಟರ್ ಕೊಟ್ಟೂರು ಮಹಾಸ್ವಾಮಿಗಳು ಸೇರಿದಂತೆ ಶಾಸಕ ಜನಾರ್ದನ್ ರೆಡ್ಡಿ ಭಾಗವಹಿಸಲಿದ್ದಾರೆ.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ರಾಜಕೀಯ ಮುಖಂಡರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಡಾ ಶಿವಕುಮಾರ್ ಮಾಲಿಪಾಟೀಲ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದ ಅವರು ಸಾರ್ವಜನಿಕರಿಗಾಗಿ ಅನ್ನ ದಾಸೋಹ ನಡೆಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಾಹನ ಚಾಲಕರು ಮಾತನಾಡಿ ಸದರಿ ಕಾಲೇಜಿನ ಗೃಹರಕ್ಷಕ ದಳದ ಕಚೇರಿಯ ಪಕ್ಕದಲ್ಲಿರುವ ಪರಿಸರವು ಅತ್ಯಂತ ಕೆಟ್ಟ ವಾಸನೆಯಿಂದ ಕೂಡಿದ್ದು ಕಳೆದ ನಾಲ್ಕು ವರ್ಷದಿಂದ ಅಧ್ಯಕ್ಷ ಶರಣಬಸಪ್ಪ ಅವರ ನೇತೃತ್ವದಲ್ಲಿ ಸ್ವಚ್ಛಗೊಳಿಸಿ ದೇವಸ್ಥಾನವನ್ನು ನಿರ್ಮಿಸುವುದರ ಮೂಲಕ ಮಾದರಿಯನ್ನಾಗಿ ಮಾಡಿದ್ದಾರೆ.
ವಾಹನ ಚಾಲಕರ ಹಿತ ಕಾಪಾಡುವ ದೇವಸ್ಥಾನ ಮುಂದೊಂದು ದಿನ ಬೃಹತ್ ಶಕ್ತಿ ಕೇಂದ್ರ ವಾಗಲಿದೆ ಎಂದು ಹೇಳಿದರು.