ಡಾ. ಎಚ್.ಬಿ.ಯಶೋಧರಾ ಜನಪದ ಕ್ಷೇತ್ರಕ್ಕೆ ನೀಡಿದ ಎರಡು ಮಹತ್ವದ ಕೊಡುಗೆಗಳು

ಹಾಸನದ ಡಾ. ಎಚ್.ಬಿ.ಯಶೋಧರಾ ಅವರು ಜಾನಪದ ಕ್ಷೇತ್ರಕ್ಕೆ ನೀಡಿದ ಎರಡು ಮಹತ್ಕಾರ್ಯಗಳಲ್ಲಿ ಒಂದು ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ಸಂಶೋಧನೆ ಮತ್ತೊಂದು ಯಕ್ಷಗಾನ ಕರಿಭಂಟನ ಕಥೆ ಸಂಪಾದನೆ. ಎರಡೂ ಜನಪದ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆಗಳಾಗಿವೆ ಎಂದು ಜನಪದ ಸಾಹಿತಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಚಂದ್ರುಕಾಳೇನಹಳ್ಳಿ ತಿಳಿಸಿದರು.

ಹಾಸನದ ಮನೆ ಮನೆ ಕವಿಗೋಷ್ಠಿಯಿಂದ ಡಾ|| ಸಿ.ಎನ್. ಜಗದೀಶ್‌ರವರ ಪ್ರಾಯೋಜನೆಯಲ್ಲಿ ಅವರ ನಿವಾಸದಲ್ಲಿ ನಡೆದ ೩೨೬ನೇ ಕಾರ್ಯಕ್ರಮದಲ್ಲಿ ಡಾ. ಎಚ್.ಬಿ.ಯಶೋಧರಾ ಅವರ ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ಕೃತಿ ಕುರಿತಂತೆ ಮಾತನಾಡಿ ಕೃತಿಯು ೧೧ ಅಧ್ಯಾಯಗಳಲ್ಲಿ ಡಾ. ಜೀ.ಶಂ.ಪ. ಅವರ ಮಾರ್ಗದರ್ಶನದಲ್ಲಿ ಸಿದ್ಧಗೊಂಡ ಮಹಾಪ್ರಬಂಧ. ಯಕ್ಷಗಾನ ಸಾಹಿತ್ಯ ಸ್ವರೂಪವನ್ನು ಹಂತ ಹಂತವಾಗಿ ವಿಶ್ಲೇಸಿಸಿದ್ದಾರೆ. ಯಕ್ಷಗಾನ ಕಾವ್ಯವೂ ಹೌದು ನಾಟಕವೂ ಹೌದು. ಯಕ್ಷಗಾನ ಕಾವ್ಯ ಕಾಲಕ್ರಮೇಣ ದೃಶ್ಯಾಂಶವನ್ನೇ ಮುಂದಾಗಿಸಿ ನಾಟಕ ಸ್ವರೂಪ ಪಡೆದುಕೊಂಡಿದನ್ನು ನಿರೂಪಿಸುವಲ್ಲಿ ಸಾಕಷ್ಟು ಆಧಾರಗಳನ್ನು ಕಲೆಹಾಕಿದ್ದಾರೆ. ಶ್ರೀಕೃಷ್ಣ ಪಾರಿಜಾತ, ತಾಳಮದ್ದಲೆ, ಗೊಂಬೆಯಾಟಗಳ ಸಾಹಿತ್ಯ ಸ್ವರೂಪವನ್ನು ಗುರುತಿಸಿದ್ದಾರೆ ಎಂದು ಕೃತಿಯನ್ನು ತಮ್ಮ ಅನುಭವ ಹಿನ್ನಲೆಯಲ್ಲಿ ಪರಿಚಯಿಸಿದರು.
ತೊಗಲುಗೊಂಬೆ ಕಲಾವಿದರು ಹೂವಿನಹಳ್ಳಿ ಕಾವಲು ಗುಂಡುರಾಜ್ ತಾವು ಅಮೇರಿಕಾ ಒಳಗೊಂಡು ಹೊರದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶನ ಮತ್ತು ತರಭೇತಿ ನೀಡುತ್ತಾ ನಮ್ಮ ಸಂಸ್ಸೃತಿಯನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಕುರಿತು ಹೆಮ್ಮೆಯಿಂದ ವರ್ಣಿಸಿದರು.

ಡಾ. ಸಿ.ಎನ್. ಜಗದೀಶ್ ಮಾತನಾಡಿ ತಮ್ಮ ಧರ್ಮಪತ್ನಿ ಇಪ್ಪತ್ತು ವರ್ಷಗಳ ಹಿಂದೆ ತುಂಬಾ ಶ್ರದ್ಧೆಯಿಂದ ಈ ಜಾನಪದ ಕ್ಷೇತ್ರಕಾರ್ಯ ಮಾಡಿದ್ದು, ಸಂಗ್ರಹದ ದಾಖಲೆಗಳನ್ನು ಪ್ರದರ್ಶಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಎನ್.ಎಲ್.ಚನ್ನೇಗೌಡ, ಸರೋಜ ಟಿ.ಎಂ., ಪದ್ಮಾವತಿ ವೆಂಕಟೇಶ್, ಸಾವಿತ್ರಿ ಬಿ.ಗೌಡ, ಜಿ.ಆರ್. ಶ್ರೀಕಾಂತ್, ಗೊರೂರು ಅನಂತರಾಜು, ದಿಬ್ಬೂರು ರಮೇಶ್, ವನಜಾ ಸುರೇಶ್ ಸ್ವರಚಿತ ಕವಿತೆ ವಾಚಿಸಿದರು. ಎ.ನಂಜಪ್ಪ, ಮಂಜುಳ ಉಮೇಶ್, ರಾಣಿ ಚರಾಶ್ರಿ ರಂಗಗೀತೆಗಳನ್ನು ಹಾಡಿದರು. ರಮೇಶ್ ರೈತಸಂಘ, ಬಾಲಕೃಷ್ಣ ಹೆಚ್.ವಿ. ಜಾನಪದ ಗೀತೆ ಹಾಡಿದರು. ಗುಂಡುರಾಜ್ ಪ್ರಾರ್ಥಿಸಿದರು. ವಿದ್ಯಾನಗರ ಕುವೆಂಪು ಯುವಕರ ಸಂಘ ಸತೀಶ್ ಜಿ.ಎಸ್. ಪರಮೇಶ್, ಲೋಕೇಶ್ ಆರ್. ಮೊದಲಾದವರು ಇದ್ದರು. Dr. Chandru Kalenhalli and other dignitaries were honored after delivering a lecture.
ಉಪನ್ಯಾಸ ನೀಡಿದ ಡಾ.ಚಂದ್ರು ಕಾಳೇನಹಳ್ಳಿಯವರನ್ನು ಸನ್ಮಾನಿಸಲಾಯಿತು.

Leave a Reply