ಹಾಸನ ವಿಜಯನಗರ ಬಡಾವಣೆ ಪಾರ್ಕ್ ರಂಗವೇದಿಕೆಯಲ್ಲಿ ನಾಟಕ ಸಾಂಸ್ಕೃತಿಕ ಕಾರ್ಯಕ್ರಮ

ಹಾಸನದ ವಿಜಯನಗರ ಬಡಾವಣೆ ಶ್ರೀ ಶಾರದ ಕಲಾಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಮೈಸೂರು, ಹಾಸನ ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ೨೦೨೩-೨೪ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಘದ ೧೬ನೇ ವಾರ್ಷಿಕೋತ್ಸವ ಗಣರಾಜ್ಯೋತ್ಸವ ಅಂಗವಾಗಿ ಹೆಚ್.ಜಿ. ಗಂಗಾಧರ್ ಸಾರಥ್ಯದಲ್ಲಿ ಜನವರಿ-೨೬ ಭಾನುವಾರ ಸಂಜೆ ೪.೦೦ ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ವಿಜಯನಗರ ಬಡಾವಣೆ, ೨ನೇ ಹಂತ, ಬೇಲೂರು ರಸ್ತೆ ಪಾರ್ಕ್ನ ಬಯಲು ರಂಗವೇದಿಕೆಯಲ್ಲಿ ಏರ್ಪಡಿಸಿದೆ.

ಹಾಸನ ವಿಧಾನಸಬಾ ಕ್ಷೇತ್ರದ ಶಾಸಕರು ಸ್ವರೂಪ್ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷರು ಚಂದ್ರೇಗೌಡರು ಅಧ್ಯಕ್ಷತೆ ವಹಿಸುವರು. ಮಾಜಿ ಉಪಾಧ್ಯಕ್ಷರು ನಗರಸಭೆ, ಚಂದ್ರೇಗೌಡರು, ಸಹಾಯಕ ನಿರ್ದೇಶಕರು ಡಾ. ತಾರಾನಾಥ್, ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಬಿ.ಹೆಚ್.ನಾರಾಯಣಗೌಡರು, ಉಪಾದ್ಯಕ್ಷರು ಮಲ್ಲಿಕಾರ್ಜುನ್, ಎಸ್. ಶಿವಶಾಂತಪ್ಪ, ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಖಜಾಂಚಿ ಬಿ.ಆರ್.ಮೊಗಣ್ಣಗೌಡರು ಉಪಸ್ಥಿತರಿರುವರು.

ಎಪಿಎಂಸಿ ನಿರ್ದೇಶಕರು ದೇವರಾಜು, ರಂಗ ನಿರ್ದೇಶಕರು ಎ.ಸಿ.ರಾಜು, ವಕೀಲರು ಕೋರವಂಗಲ ಗ್ರಾ.ಪಂ.ಅಧ್ಯಕ್ಷರು ಯೋಗೇಶ್, ಕಲಾವಿದರು ದರ್ಶನ್ ವೆಂಕಟೇಶ್, ಹೆಚ್.ಎಂ.ಪ್ರಭಾಕರ್, ಗೋವಿಂದೇಗೌಡರು, ಗ್ಯಾರಂಟಿ ರಾಮಣ್ಣ, ನಾಗರಾಜು, ರಮೇಶ್, ಬ್ಯಾಟಚಾರ್, ಯರೇಹಳ್ಳಿ ಮಂಜೇಗೌಡ್ರು, ರಾಜಣ್ಣ ಪಟ್ನ ಆಲೂರು, ನಗರಸಭೆ ಮಾಜಿ ಸದಸ್ಯರು ಹೆಚ್.ಜಿ.ಜಯಶೇಖರ, ವಿಜಯನಗರ ಮಾಜಿ ಗ್ರಾ.ಪಂ. ಸದಸ್ಯರು ಡಿ.ಆರ್. ಲೋಹಿತ್, ಸೆಸ್ಕಾಂ ಎಂ.ಎಸ್.ಮನೋಹರ, ನ್ಯಾಯಾಂಗ ಇಲಾಖೆಯ ಉಮೇಶ್ ಎಲ್. ಹೆಚ್.ಜಿ.ವಿಜಯಕುಮಾರ್, ವಿರೂಪಾಕ್ಷ, ಹೆಚ್.ಆರ್.ರಜನಿ ವಿಶೇಷ ಆಹ್ವಾನಿತರು.

ಸಾಹಿತಿ ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸುವರು. ಹೆಚ್.ಜಿ.ಗಂಗಾಧರ ತಂಡದಿAದ ಸುಗಮ ಸಂಗೀತ, ಸಾವಿತ್ರಮ್ಮ ಸಿ.ರಾಣಿ ಸಂಗಡಿಗರ ಶ್ರವಣಕುಮಾರ ಪಿತೃಭಕ್ತಿ ನಾಟಕ, ಜಾನಪದ ನೃತ್ಯ, ಕುಸುಮ ಎನ್.ಕೆ.ತಂಡ ಸೋಬಾನೆ ಪದ, ಜಗದೀಶ್ ತಂಡ ರಂಗಗೀತೆ, ಬೂದೇಶ್ವರ ಜಾನಪದ ಕಲಾತಂಡ ದುದ್ದ ಯೋಗೇಂದ್ರ ಜಾನಪದ ಗೀತೆ, ಗ್ಯಾರಂಟಿ ರಾಮಣ್ಣ ಹೆಚ್.ಜಿ. ವಿಜಯಕುಮಾರ್ ತಂಡದ ಬಾಡಿದ ಬದುಕು ಸಾಮಾಜಿಕ ನಾಟಕ ಇರುತ್ತದೆ.

Leave a Reply