
ಜಗದ್ಗುರು ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಉತ್ತರ ಭಾರತ ವಿಜಯಯಾತ್ರೆ ಪ್ರಯುಕ್ತ ಶಾಖಾಮಠಗಳಲ್ಲಿ ವಿಶೇಷ ಪೂಜೆ: ನಾರಾಯಣರಾವ್ ವೈದ್ಯ
ಗಂಗಾವತಿ: ಶೃಂಗೇರಿಯ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಪರಮಾನುಗ್ರಹಗಳೊಂದಿಗೆ ಹಾಗೂ ಪೂಜ್ಯರ ಸುವರ್ಣ ಮಹೋತ್ಸವ ಆಚರಣೆಯ ಪ್ರಯುಕ್ತ ಕಿರಿಯ ಜಗದ್ಗುರು ಶ್ರೀ ವಿದುಶೇಖರ ಭಾರತಿ ಸನ್ನಿಧಾನಂಗಳವರು ಉತ್ತರ ಭಾರತದ ವಿಜಯ ಯಾತ್ರೆಯ ಪ್ರಯುಕ್ತ ೨೦೦ ಕ್ಕೂ ಅಧಿಕ ಶಾಖಾ ಮಠಗಳಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಗಂಗಾವತಿ ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು. ಅವರು ಶುಕ್ರವಾರದಂದು ಶ್ರೀಮಠದ ಆವರಣದಲ್ಲಿ ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿ, ಶ್ರೀ ವಿದುಶೇಖರ ಮಹಾಸ್ವಾಮಿಗಳು ಧರ್ಮಯಾತ್ರೆಯ ಪ್ರಯುಕ್ತ…