
ವಿದ್ಯಾ ವಿನಯ ಸಂಪನ್ನಂ ವೀತರಾಗಂ ವಿವೇಕಿನಮ್ ವಂದೇ ವೇದಾಂತ ತತ್ವಜ್ಞಂ ವಿಧುಶೇಖರ ಭಾರತೀಂ
ವಿದುಶೇಖರ ಮಹಾಸ್ವಾಮಿಗಳ ಜನನ ತಿರುಪತಿಯಲ್ಲಿ ನಿಷ್ಠಾವಂತ ವೇದ ವಿದ್ವಾಂಸರ ಮನೆಯಲ್ಲಿ 1993ರ ಜುಲೈ 24 ರಂದು ಆಯಿತು. ಅವರ ತಂದೆ ಕುಪ್ಪಾ ವೇ ಬ್ರ.ಶ್ರೀ.ಶಿವಸುಬ್ರಹ್ಮಣ್ಯ ಅವದಾನಿ ಮತ್ತು ತಾಯಿ ಶ್ರೀಮತಿ ಸೀತಾ ನಾಗಲಕ್ಷ್ಮಿ.ಈ ದಂಪತಿಗಳ ಕಿರಿಯ ಪುತ್ರರೇ ತಿರುಪತಿಯಲ್ಲಿ ವೆಂಕಟೇಶ್ವರನ ಕೃಪೆಯಿಂದ ಜನಿಸಿ ವೆಂಕಟೇಶ ಪ್ರಸಾದರೆನಿಸಿದರು. ಐದನೇ ವಯಸ್ಸಿನಲ್ಲೇ ಅವರಿಗೆ ಬ್ರಹ್ಮೋಪದೇಶ ಆಯಿತು. ತಾತ ರಾಮಗೋಪಾಲ ಯಾಜಿಯವರಲ್ಲಿ ಬಾಲಕ ಕೃಷ್ಣ ಯಜುರ್ವೇದ ಕ್ರಮಾಂಕ ಪಾಠ ಕಲಿಯಲು ಆರಂಭಿಸಿದ್ದು ಉಪನಯನದ ನಂತರ. 2006 ರಲ್ಲಿ ತಂದೆಯವರೊಂದಿಗೆ ಬಾಲಕ ಶೃಂಗೇರಿಗೆ…