ಗಂಗಾವತಿ: ಆರ್ಯವೈಶ್ಯ ಸಮಾಜ ಹಿರೇಜಂತಗಲ್ ವಿರುಪಾಪುರದಿಂದ ವೆಂಕಟಗಿರಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ನಾಲ್ಕನೇ ವರ್ಷದ ಪಾದಯಾತ್ರೆಯನ್ನು ಶನಿವಾರದಂದು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಆರ್ಯ ವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಟಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ವೆಂಕಟಗಿರಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ನಮ್ಮ ಸಮಾಜ ಬಾಂಧವರು ನಿರೀಕ್ಷೆಗಿಂತ ಮೀರಿ ಹೆಚ್ಚಿನ ರೀತಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿರೋದು ಸಂತೋಷವಾಗಿದೆ. ಇದೇ ರೀತಿಯಾಗಿ ನವ ಬೃಂದಾವನ ಮತ್ತು ಮಂತ್ರಾಲಯ ಪಾದಯಾತ್ರೆಯಲ್ಲಿ ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳಬೇಕು. ಇಂತಹ ಪಾದಯಾತ್ರೆಯಿಂದ ಧಾರ್ಮಿಕತೆ ಜೊತೆಗೆ ಆರೋಗ್ಯ ಸದೃಢತೆ ಗೊಳ್ಳುತ್ತದೆ ಎಂದು ಹೇಳಿದರು.
ಗುರುಗಳಾದ ಗುರು ಭೀಮ್ ಭಟ್ ಜೋಶಿ ಮಾತನಾಡಿ ನಾಲ್ಕನೇ ವರ್ಷದ ಪಾದಯಾತ್ರೆ ಸುಗಮವಾಗಿ ನೆರವೇರಿತು. ಸುಮಾರು 150 ರಿಂದ 180 ಜನ ಭಾಗವಹಿಸಿ. ಜೊತೆಗೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಸುಮಾರು 400 ರಿಂದ 500 ಜನ ಸೇರಿ ಪಂಚಾಮೃತ ಅಭಿಷೇಕ. ಅಷ್ಟೋತ್ತರ ಪಾರಾಯಣ ಪೂಜೆ ಮತ್ತು ಭಜನೆಯಲ್ಲಿ ಭಾಗವಹಿಸಿದಂತ ಎಲ್ಲರಿಗೂ ಶ್ರೀ ವೆಂಕಟೇಶ್ವರ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲೆಂದು ಹೇಳಿದರು.
ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ ಮಾತನಾಡಿ ಪಾದಯಾತ್ರೆಯಲ್ಲಿ ಹೆಚ್ಚಿನ ರೀತಿಯಲ್ಲಿ ಭಾಗವಹಿಸಿದ ನಮ್ಮ ಸಮಾಜದ ಎಲ್ಲರಿಗೂ ಜೊತೆಗೆ ಸಹಕಾರ ನೀಡಿದಂತಹ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ನರಸಿಂಹ ಆಚಾರ. ಹಣವಾಳ ಚಂದ್ರಶೇಖರ್. ಜಿ ಆರ್ ಎಸ್ ಸತ್ಯನಾರಾಯಣ. ಚಂದ್ರು ಬನ್ನಿಗೋಳ, ಚಿದಂಬರ ಶ್ರೇಷ್ಠಿ, ಸಂತೋಷ್ ಹೇಮಾ ಗುಡ್ಡ, ಗಣೇಶ್ ವೆಂಕಟಗಿರಿ, ದಮ್ಮೂರು ರಾಜಕುಮಾರ, ಮಲ್ಲಯ ದರೋಜಿ, ವೆಂಕಣ್ಣ ದರೋಜಿ, ಪ್ರಹ್ಲಾದ್ ಶ್ರೇಷ್ಠಿ, ಮಹಿಳಾ ಮಂಡಳಿಯ ಅಧ್ಯಕ್ಷರಾದ ರುಕ್ಮಿಣಮ್ಮ ಮತ್ತು ಮಹಿಳಾ ಸದಸ್ಯರು ಸೇರಿದಂತೆ ನವ ಬೃಂದಾವನ ಭಜನಾ ಮಂಡಳಿಯ ಸರ್ವ ಸದಸ್ಯರು ಮತ್ತು ಸಮಾಜದ ಮುಖಂಡರು ಹಿರಿಯರು ಪಾಲ್ಗೊಂಡು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.