ಗಂಗಾವತಿ: ತಾಲೂಕಿನ ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಣವಾಳ ಗ್ರಾಮದಲ್ಲಿ ಕರ್ನಾಟಕ ಹೇರ್ ಕಟಿಂಗ್ ಶಾಪ್ ಹಾಗೂ ಬ್ಯೂಟಿ ಪಾರ್ಲರ್ ಜೆಂಟ್ಸ್ ವತಿಯಿಂದ ಮಾಲಿಕರಾದ ಕಾಂತಪ್ಪ ಹಡಪದ ಬಾವಿಕಟ್ಟಿ ಅವರು ಅಂಧ ಮಕ್ಕಳಿಗೆ ತಮ್ಮ ಜೀವನ ಪರ್ಯಂತ ಉಚಿತ ಕ್ಷೌರ ವೃತ್ತಿಯನ್ನು ಹಲವು ವರ್ಷಗಳಿಂದ ಉಚಿತವಾಗಿ ಮಾಡುತ್ತಾ ಬಂದಿದ್ದು. ಈ ವರ್ಷದಲ್ಲಿ ಗ್ರಾಮ ಪಂಚಾಯತಿಯ ಮಳಿಗೆಯಲ್ಲಿರುವ ಅಂಗಡಿಯನ್ನು ತನ್ನ ಸ್ವಂತ ಜಮೀನಿನ ಸರ್ವೆ ನಂಬರಿಗೆ ಅಂಗಡಿಯನ್ನು ವರ್ಗಾಯಿಸಿಕೊಂಡು ಅಂದರೆ ಉಚಿತವಾಗಿ ಸೇವೆ ಮಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಕಟಿಂಗ್ ಶಾಪ್ ಮಾಲಿಕರಾದ ಕಾಂತಪ್ಪ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಕಾಯಕವೇ ಕೈಲಾಸ ಎಂಬಂತೆ ಇರುವ ನನ್ನ ವೃತ್ತಿಯಲ್ಲಿ ಅದರ ಒಂದು ಸೇವೆಗಾಗಿ ಅಂಧರಿಗೆ ನಾನು ಜೀವನ ಪರ್ಯಂತ ಅವರ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.