
ಗೊರೂರು ಅನಂತರಾಜು ಅವರ ಕಲೆ-ಸೆಲೆ ಕಿರು ಅವಲೋಕನ
ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚಿನ ದಿಗ್ಗಜರಲ್ಲಿ ಹಾಸನದ ಶ್ರೀಯುತ ಗೊರೂರು ಅನಂತರಾಜುರವರು ಒಬ್ಬರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಶೇಷ ಕೊಡುಗೆಯ ಪುಸ್ತಕಗಳನ್ನು ಕೊಡುತ್ತಿರುವ ಶ್ರೀ ಗೊರೂರು ಅನಂತರಾಜುರವರು ಸಕಲಕಲಾ ವಲ್ಲಭ ಎಂದರೆ ತಪ್ಪಾಗಲಾರದು. ಪ್ರತೀ ವರ್ಷದಂತೆ ಈ ವರ್ಷವೂ ಕಲೆ-ಸೆಲೆ ಎನ್ನುವ ಲೇಖನ ಸಂಕಲನವನ್ನು ಹೊರತರುತ್ತಿದ್ದಾರೆ. ಈ ಪುಸ್ತಕವು ಮೈಸೂರಿನ ಪದ್ಮ ಶೇಖರ್ ಪ್ರಿಂಟರ್ಸ್ ರವರಿಂದ ಮುದ್ರಣಗೊಂಡಿದೆ, ಸುಂದರ ಮುಖಪುಟದಿಂದ ಆಕರ್ಷೀಯವಾಗಿದೆ. ಪುಸ್ತಕದ ಅಂಗಡಿಯಲ್ಲಿ ನಾವು ಪುಸ್ತಕ ಕೊಳ್ಳಲು ಹೋದಾಗ ,ನಮ್ಮ ಕಣ್ಣುಗಳನ್ನು ಆಕರ್ಷಿಸುವಂತಹ ಕಲೆ-ಸೆಲೆ ಎನ್ನುವ ಪುಸ್ತಕ…