ಮನಸೆಳೆದ ಜಯ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಾಲೆಯ ವಿಜ್ಞಾನ ವಸ್ತು ಪ್ರದರ್ಶನ

ಗಣರಾಜ್ಯೋತ್ಸವ ಅಂಗವಾಗಿ ಹಾಸನದ ಜಯ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಕರ ಮನ ಸೆಳೆಯಿತು.

ಶಾಲೆಯ ವಿದ್ಯಾರ್ಥಿಗಳು ವೈಜ್ಞಾನಿಕ ಆಲೋಚನೆಗಳ ಮೂಲಕ ತಾವೇ ತಯಾರಿಸಿದ ತಮ್ಮ ತಮ್ಮ ವಿವಿಧ ಮಾದರಿಗಳ ಬಗ್ಗೆ ವಿವರಣೆ ನೀಡಿದ್ದು  ಗಮನಾರ್ಹವಾಗಿತ್ತು.

ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಈ ರೀತಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚಿಸುವ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಇದು ಸಹಕಾರಿ. ಪ್ರಪಂಚದ ಜ್ಞಾನ ತಿಳುವಳಿಕೆ ಹೆಚ್ಚುವುದು. ಬಾಲ್ಯದಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಪ್ರಯತ್ನ ಇದಾಗಿದೆ ಅಲ್ಲದೇ ಪ್ಲಾನಟೇರಿಯಂ (ಬಾಹ್ಯಾಕಾಶ ತಾರಾಲಯ) ಮೊಟ್ಟ ಮೊದಲ ಬಾರಿಗೆ ನಮ್ಮ ಶಾಲೆಯಲ್ಲಿ ಏರ್ಪಡಿಸಿದ್ದು  ಇದು ವಿದ್ಯಾರ್ಥಿಗಳು ವಿಜ್ಞಾನ, ಎಂಜಿನಿಯರಿಂಗ್ ತಂತ್ರಜ್ಞಾನ ಕುರಿತು ಉಪಯುಕ್ತವಾಗಿದೆ  ಎಂದರು.

ಕನ್ನಡ ವಿಭಾಗದಲ್ಲಿ ಹಾಸನ ಜಿಲ್ಲೆಯ ಹೆಮ್ಮೆಯ ಸಾಹಿತಿಗಳು ಶೀರ್ಷಿಕೆ ಪೋಟೋಗಳ ಭಾನು ಮುಷ್ತಾಕ್, ಗೊರೂರು ಅನಂತರಾಜು, ಶೈಲಜ ಹಾಸನ, ಟಿ.ಹೆಚ್. ಅಪ್ಪಾಜಿಗೌಡರು, ಪತ್ರಕರ್ತೆ ಲೀಲಾವತಿ ಇದ್ದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಸಂಸ್ಥೆ ವತಿಯಿಂದ ಸಾಹಿತಿ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷರು ಪ್ರಸನ್ನಕುಮಾರ್, ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಇದ್ದರು.

ಮನರಂಜಿಸಿದ ಸುಗಮ ಸಂಗೀತ ರಂಗಗೀತೆ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು

ಹಾಸನ: ಹಾಸನದ ವಿಜಯನಗರ ಬಡಾವಣೆ ಶ್ರೀ ಶಾರದ ಕಲಾಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಮೈಸೂರು, ಹಾಸನ ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ೨೦೨೩-೨೪ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಘದ ೧೬ನೇ ವಾರ್ಷಿಕೋತ್ಸವ ಗಣರಾಜ್ಯೋತ್ಸವ ಅಂಗವಾಗಿ ಹಾಸನ ವಿಜಯನಗರ ಬಡಾವಣೆ ಪಾರ್ಕ್ ಬಯಲು ರಂಗವೇದಿಕೆಯಲ್ಲಿ ಪ್ರದರ್ಶನಗೊಂಡ ಸುಗಮ ಸಂಗೀತ ರಂಗಗೀತೆ ನಾಟಕ ಪ್ರೇಕ್ಷಕರನ್ನು ರಂಜಿಸಿತು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ದರ್ಶನ್ ವೆಂಕಟೇಶ್ ಮಾತನಾಡಿ ಮೈಮನಗಳನ್ನು ಹಿಗ್ಗಿಸುವ ಶಕ್ತಿ ಕಲೆಗಿದೆ ಎಂದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಬಹಳ ವರ್ಷಗಳ ಹಿಂದೆ ತಾವು ಗೊರೂರಿನಲ್ಲಿದ್ದಾಗ ಪ್ರತಿ ವರ್ಷ ಗಣರಾಜ್ಯೋತ್ಸವ ಸ್ವಾತಂತ್ರೋತ್ಸವ ರಾಜ್ಯೋತ್ಸವ ಸಮಾರಂಭಗಳಲ್ಲಿ ಹೇಮಾವತಿ ಪ್ರಾಜೆಕ್ಟಿನಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ವಿವಿಧ ಕ್ರೀಡಾ ಸ್ಫರ್ಧೆಗಳು ನಡೆಯುತ್ತಿದ್ದವು. ಸಂಜೆ ಮನರಂಜನಾ ಮಂದಿರದಲ್ಲಿ ನಾಟಕ ಪ್ರದರ್ಶನ ಬಹುಮಾನ ವಿತರಣೆ ಇರುತ್ತಿತ್ತು. ಈ ಹಾದಿಯಲ್ಲಿ ವಿಜಯನಗರ ಬಡಾವಣೆಯ ಪಾರ್ಕಿನ ಈ ವಿಶಾಲ ಬಯಲು ರಂಗವೇದಿಕೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಇದು ಇಲ್ಲಿಗೆ ನಿಲ್ಲದೇ ಪ್ರತಿ ವರ್ಷ ನಡೆದುಕೊಂಡು ಹೋಗಲಿ ಎಂದು ಆಶಿಸಿದರು.

ವಿಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಬಿ.ಹೆಚ್.ನಾರಾಯಣಗೌಡರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಇಂತಹ ಒಂದು ಸುಂದರ ಮನರಂಜನಾ ಕಾರ್ಯಕ್ರಮ ನಮಗೆಲ್ಲಾ ಹರ್ಷ ತಂದಿದೆ ಎಂದರು.

ಉಪಾದ್ಯಕ್ಷರು ಮಲ್ಲಿಕಾರ್ಜುನ್, ಎಸ್.ಶಿವಶಾಂತಪ್ಪ, ಖಜಾಂಚಿ ಬಿ.ಆರ್. ಮೊಗಣ್ಣಗೌಡರು ಇದ್ದರು. ಯೋಗೇಂದ್ರ ದುದ್ದರಿಂದ ಜಾನಪದ ಗೀತೆ, ಹೆಚ್.ಜಿ,ಗಂಗಾಧರ್‌ರಿಂದ ಸುಗಮ ಸಂಗೀತ, ರಂಗ ನಿರ್ದೇಶಕ ಎ.ಸಿ.ರಾಜು, ಕಲಾವಿದರು ನಾಗರಾಜು, ರಮೇಶ್, ಬ್ಯಾಟಚಾರ್, ಯರೇಹಳ್ಳಿ ಮಂಜೇಗೌಡ್ರು, ರಾಜಣ್ಣ ಪಟ್ನ ಆಲೂರು ರಂಗಗೀತೆಗಳನ್ನು ಹಾಡಿದರು. ಸಾವಿತ್ರಮ್ಮ, ಸಿ.ರಾಣಿ ಸಂಗಡಿಗರಿಂದ ಜನಪದ ಗೀತೆ, ನೃತ್ಯ ಮತ್ತು ಹೆಚ್.ಜಿ. ವಿಜಯಕುಮಾರ್ ಗ್ಯಾರಂಟಿ ರಾಮಣ್ಣ ತಂಡದಿಂದ ಬಾಡಿದ ಬದುಕು ನಾಟಕ ಪ್ರದರ್ಶನಗೊಂಡಿತು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಸ್ಥಾಪಿತವಾದ ಜಿಎಂಯು, ಉನ್ನತ ಶಿಕ್ಷಣದ ಜ್ಞಾನದೊಂದಿಗೆ, ವೃತ್ತಿಪರ ಬದುಕು ಕಟ್ಟಿಕೊಡುವಲ್ಲಿ ಆಧ್ಯತೆ ನೀಡಿದೆ

ಗಂಗಾವತಿ: ೨೦೦೧-೦೨ ರಲ್ಲಿ ದಾವಣಗೆರೆಯ ಅಂದಿನ ಲೋಕಸಭೆ ಸದಸ್ಯರಾದ ದಿ|| ಶ್ರೀ ಮಲ್ಲಿಕಾರ್ಜುನಪ್ಪನವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿ.ಎಂ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸ್ಥಾಪಿಸಿದರು. ಈ ಸಂಸ್ಥೆಯು ಉನ್ನತ ಶಿಕ್ಷಣದೊಂದಿಗೆ ಜ್ಞಾನದೊಂದಿಗೆ ಬದುಕು ಕಟ್ಟಿಕೊಡುವ ಜಿ.ಎಂ. ವಿಶ್ವವಿದ್ಯಾಲಯವಾಗಿ ಪದವಿ, ಸ್ನಾತಕೋತ್ತರ ಪದವಿ ಜೊತೆಗೆ ಸ್ವಯಂ ಉದ್ಯೋಗದ ಕೋರ್ಸ್ಗಳ ಮೂಲಕ ಪ್ರಖ್ಯಾತಿ ಹೊಂದಿದೆ ಎಂದು ಜಿ.ಎಂ. ವಿಶ್ವವಿದ್ಯಾಲಯದ ಹೆಚ್.ಆರ್ ಮುಖ್ಯಸ್ಥರಾದ ವೀರಗಂಗಾಧರಸ್ವಾಮಿ ಅವರು ನಗರದ ಸರ್ವೇಶ ಹೋಟಲ್‌ನಲ್ಲಿ ಜನವರಿ-೨೩ ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಶ್ರೀ ಜಿ. ಮಲ್ಲಿಕಾರ್ಜುನಪ್ಪ ಅವರ ಆಶಯದಂತೆ ೨೦೨೩ ರಲ್ಲಿ ಶ್ರೀಶೈಲ ಎಜುಕೇಶನ್ ಟ್ರಸ್ಟ್‌ನ ಅಡಿ ಸ್ಥಾಪಿತವಾಗಿರುವ ಜಿ.ಎಮ್ ವಿಶ್ವವಿದ್ಯಾಲಯವು ಇಂಜಿನಿಯರಿಂಗ್, ವಾಣಿಜ್ಯ, ಕಂಪ್ಯೂಟರ್, ಮ್ಯಾನೇಜೆಂಟ್, ವಿಜ್ಞಾನ, ಕಾನೂನು ವಿಭಾಗಗಳು ಸೇರಿದಂತೆ ೫೭ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ. ೫೪ ಎಕರೆ ಪರಿಸರ ಸ್ನೇಹಿ ಪ್ರದೇಶದಲ್ಲಿ ಈ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಹೊಂದಿದ್ದು, ೩೫೦ ಕ್ಕೂ ಹೆಚ್ಚು ಅನುಭವಿ ಅಧ್ಯಾಪಕ ವೃಂದವನ್ನು ಒಳಗೊಂಡಿದೆ. ೮ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅಷ್ಟಲ್ಲದೇ ಸಿಎನ್‌ಸಿ ಪ್ರೋಗ್ರಾಮಿಂಗ್, ಬ್ಯೂಟಿ ಕೇರ್ ಮತ್ತು ಹೇರ್ ಡ್ರೆಸ್ಸಿಂಗ್, ಫ್ಯಾಷನ್ ವಿನ್ಯಾಸ ಮತ್ತು ಉಡುಗೆ ತಯಾರಿಕೆ ಮತ್ತು ಗ್ರಾಫಿಕ್ ವಿನ್ಯಾಸ ಈ ಸರ್ಟಿಫಿಕೇಟ್ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ.
ಫಲಿತಾಂಶ ಆಧಾರಿತ ಮತ್ತು ಸಾಮರ್ಥ್ಯ ಚಾಲಿತ ಶಿಕ್ಷಣ, ಪ್ರಾಜೆಕ್ಟ್ ಆಧಾರಿತ ಮತ್ತು ಅನುಭವದ ಕಲಿಕೆ, ಸಮಗ್ರ ಅಭಿವೃದ್ಧಿ ಕೇಂದ್ರ. ೨೧ನೇ ಶತಮಾನದ ಕಲಿಕೆಗಾಗಿ ಡಿಜಿಟಲ್ ಕ್ಯಾಂಪಸ್, ಜಾಗತಿಕ ಇಮ್ಮರ್ಶನ್ ಕಾರ್ಯಕ್ರಮಗಳು, ನಾವೀನ್ಯತೆ ಮತ್ತು ವಾಣಿಜ್ಯೋದ್ಯಮ ಇನ್ನುಬೇಟರ್ ಪ್ರಯೋಜನಗಳನ್ನು ಜೆ.ಎಂ.ಯು ನೀಡಲಿದೆ.

ಕೆಸಿಇಟಿ ನಲ್ಲಿ ಉನ್ನತ ೨೦೦೦ ರೊಳಗೆ ಶ್ರೇಣಿಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಶೇ. ೧೦೦% ರವರೆಗೆ ಬೋಧನಾ ಶುಲ್ಕ ಮನ್ನಾ, ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶೇ. ೭೫% ರವರೆಗೆ ಬೋಧನಾ ಶುಲ್ಕ ಮನ್ನಾ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳ ಕೊಡುಗೆಗಳನ್ನು ಜೆ.ಎಂ.ಯು ನೀಡಿದೆ.

ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಜಿಎಂ ವಿಶ್ವವಿದ್ಯಾಲಯವು ಶೈಕ್ಷಣಿಕ ಉತ್ಕೃಷ್ಟತೆಯ ಪರಂಪರೆ ಮತ್ತು ವಿದ್ಯಾರ್ಥಿಗಳ ಯಶಸ್ಸಿಗೆ ಆಯ್ಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಈ ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಸಲಹೆಗಾರರಾದ ರುದ್ರಯ್ಯ, ಪ್ರೋ|| ಡಾ. ರಾಜಕುಮಾರ, ವಕೀಲರು ಮತ್ತು ಕಾನೂನು ಸಲಹೆಗಾರರಾದ ನಾಗರಾಜ ಗುತ್ತೇದಾರ, ಜಗದೀಶ ಬೀಳಗಿಯವರು ಹಾಜರಿದ್ದರು.

ದೇವೆಂದ್ರಕುಮಾರ ಇಮ್ಮಡಿ ಅಮೇರಿಕ ಇವರಿಂದ ದಾಸನಾಳ ಗ್ರಾಮದ ಶಾಲೆಗೆ ತಟ್ಟೆ ಮತ್ತು ಲೋಟಗಳ ದೇಣಿಗೆ

ಗಂಗಾವತಿ: ತಾಲೂಕಿನ ದಾಸನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶ್ರೀ ದೇವೇಂದ್ರ ಕುಮಾರ ಇಮ್ಮಡಿ ಅಮೇರಿಕ ಅವರು ವಿದ್ಯಾರ್ಥಿಗಳ ಅಕ್ಷರ ದಾಸೋಹ ಹಾಗೂ ಕ್ಷೀರ ಭಾಗ್ಯಕ್ಕೆ ಅನುಕೂಲವಾಗುವಂತೆ ಶಾಲೆಗೆ 50 ತಟ್ಟೆ ಮತ್ತು 50 ಲೋಟಗಳನ್ನು ದೇಣಿಗೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಪರಶುರಾಮ ಕರಡಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಭಿಮಪ್ಪ, ಸದಸ್ಯರಾದ ವೆಂಕಟೇಶ, ಮಾರುತೇಶ, ನಿರುಪಾದಿ, ಮಾಜಿ ತಾ‌.ಪಂ ಸದಸ್ಯರಾದ ದೇವೇಂದ್ರಗೌಡ, ಸಹಶಿಕ್ಷಕರಾದ ನಾಗರಾಜ, ಕಸ್ತೂರಿ, ಜ್ಯೋತಿ, ತುಳಸಿ, ವಿದ್ಯಾಶ್ರೀ, ಕು.ಸಂಗೀತಾ, ಅತಿಥಿ ಶಿಕ್ಷಕರಾದ ಸುಷ್ಮಾ ಹಾಗೂ ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಹಾದಾನಿಗಳ ಸೇವಾ ಕಾರ್ಯ, ಅವರ ಸಹೃದಯಯತೆಗೆ ಅನಂತ ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ…

ನಮ್ಮ ಶಾಲೆಗೆ ತಲುಪಲು ಅತ್ಯಂತ ಕಾಳಜಿ ವಹಿಸಿ ಕೊಡಿಸಿದ ಆತ್ಮೀಯರಾದ ಅಶೋಕ ಹೊಸಮನಿ, ಜಗದೀಶ್ ಈಳಿಗೇರ, ಮರಗೂರು ಮುರುಗೇಶ್, ಮೈಲಾರಪ್ಪ ಬೂದಿಹಾಳ ಇವರ ಸಹಕಾರವನ್ನು ಮರೆಯುವಂತಿಲ್ಲಾವೆಂದು ಮುಖ್ಯೋಪಾಧ್ಯಾಯರು ಮಾತನಾಡಿದರು.