ಗಂಗಾವತಿ: ೨೦೦೧-೦೨ ರಲ್ಲಿ ದಾವಣಗೆರೆಯ ಅಂದಿನ ಲೋಕಸಭೆ ಸದಸ್ಯರಾದ ದಿ|| ಶ್ರೀ ಮಲ್ಲಿಕಾರ್ಜುನಪ್ಪನವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿ.ಎಂ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸ್ಥಾಪಿಸಿದರು. ಈ ಸಂಸ್ಥೆಯು ಉನ್ನತ ಶಿಕ್ಷಣದೊಂದಿಗೆ ಜ್ಞಾನದೊಂದಿಗೆ ಬದುಕು ಕಟ್ಟಿಕೊಡುವ ಜಿ.ಎಂ. ವಿಶ್ವವಿದ್ಯಾಲಯವಾಗಿ ಪದವಿ, ಸ್ನಾತಕೋತ್ತರ ಪದವಿ ಜೊತೆಗೆ ಸ್ವಯಂ ಉದ್ಯೋಗದ ಕೋರ್ಸ್ಗಳ ಮೂಲಕ ಪ್ರಖ್ಯಾತಿ ಹೊಂದಿದೆ ಎಂದು ಜಿ.ಎಂ. ವಿಶ್ವವಿದ್ಯಾಲಯದ ಹೆಚ್.ಆರ್ ಮುಖ್ಯಸ್ಥರಾದ ವೀರಗಂಗಾಧರಸ್ವಾಮಿ ಅವರು ನಗರದ ಸರ್ವೇಶ ಹೋಟಲ್‌ನಲ್ಲಿ ಜನವರಿ-೨೩ ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶ್ರೀ ಜಿ. ಮಲ್ಲಿಕಾರ್ಜುನಪ್ಪ ಅವರ ಆಶಯದಂತೆ ೨೦೨೩ ರಲ್ಲಿ ಶ್ರೀಶೈಲ ಎಜುಕೇಶನ್ ಟ್ರಸ್ಟ್‌ನ ಅಡಿ ಸ್ಥಾಪಿತವಾಗಿರುವ ಜಿ.ಎಮ್ ವಿಶ್ವವಿದ್ಯಾಲಯವು ಇಂಜಿನಿಯರಿಂಗ್, ವಾಣಿಜ್ಯ, ಕಂಪ್ಯೂಟರ್, ಮ್ಯಾನೇಜೆಂಟ್, ವಿಜ್ಞಾನ, ಕಾನೂನು ವಿಭಾಗಗಳು ಸೇರಿದಂತೆ ೫೭ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ. ೫೪ ಎಕರೆ ಪರಿಸರ ಸ್ನೇಹಿ ಪ್ರದೇಶದಲ್ಲಿ ಈ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಹೊಂದಿದ್ದು, ೩೫೦ ಕ್ಕೂ ಹೆಚ್ಚು ಅನುಭವಿ ಅಧ್ಯಾಪಕ ವೃಂದವನ್ನು ಒಳಗೊಂಡಿದೆ. ೮ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅಷ್ಟಲ್ಲದೇ ಸಿಎನ್‌ಸಿ ಪ್ರೋಗ್ರಾಮಿಂಗ್, ಬ್ಯೂಟಿ ಕೇರ್ ಮತ್ತು ಹೇರ್ ಡ್ರೆಸ್ಸಿಂಗ್, ಫ್ಯಾಷನ್ ವಿನ್ಯಾಸ ಮತ್ತು ಉಡುಗೆ ತಯಾರಿಕೆ ಮತ್ತು ಗ್ರಾಫಿಕ್ ವಿನ್ಯಾಸ ಈ ಸರ್ಟಿಫಿಕೇಟ್ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ.
ಫಲಿತಾಂಶ ಆಧಾರಿತ ಮತ್ತು ಸಾಮರ್ಥ್ಯ ಚಾಲಿತ ಶಿಕ್ಷಣ, ಪ್ರಾಜೆಕ್ಟ್ ಆಧಾರಿತ ಮತ್ತು ಅನುಭವದ ಕಲಿಕೆ, ಸಮಗ್ರ ಅಭಿವೃದ್ಧಿ ಕೇಂದ್ರ. ೨೧ನೇ ಶತಮಾನದ ಕಲಿಕೆಗಾಗಿ ಡಿಜಿಟಲ್ ಕ್ಯಾಂಪಸ್, ಜಾಗತಿಕ ಇಮ್ಮರ್ಶನ್ ಕಾರ್ಯಕ್ರಮಗಳು, ನಾವೀನ್ಯತೆ ಮತ್ತು ವಾಣಿಜ್ಯೋದ್ಯಮ ಇನ್ನುಬೇಟರ್ ಪ್ರಯೋಜನಗಳನ್ನು ಜೆ.ಎಂ.ಯು ನೀಡಲಿದೆ.
ಕೆಸಿಇಟಿ ನಲ್ಲಿ ಉನ್ನತ ೨೦೦೦ ರೊಳಗೆ ಶ್ರೇಣಿಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಶೇ. ೧೦೦% ರವರೆಗೆ ಬೋಧನಾ ಶುಲ್ಕ ಮನ್ನಾ, ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶೇ. ೭೫% ರವರೆಗೆ ಬೋಧನಾ ಶುಲ್ಕ ಮನ್ನಾ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳ ಕೊಡುಗೆಗಳನ್ನು ಜೆ.ಎಂ.ಯು ನೀಡಿದೆ.
ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಜಿಎಂ ವಿಶ್ವವಿದ್ಯಾಲಯವು ಶೈಕ್ಷಣಿಕ ಉತ್ಕೃಷ್ಟತೆಯ ಪರಂಪರೆ ಮತ್ತು ವಿದ್ಯಾರ್ಥಿಗಳ ಯಶಸ್ಸಿಗೆ ಆಯ್ಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಸಲಹೆಗಾರರಾದ ರುದ್ರಯ್ಯ, ಪ್ರೋ|| ಡಾ. ರಾಜಕುಮಾರ, ವಕೀಲರು ಮತ್ತು ಕಾನೂನು ಸಲಹೆಗಾರರಾದ ನಾಗರಾಜ ಗುತ್ತೇದಾರ, ಜಗದೀಶ ಬೀಳಗಿಯವರು ಹಾಜರಿದ್ದರು.